ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ: ಲಕ್ಷ್ಮಿಕಾಂತ್ ಪಾಟೀಲ್ ಮದ್ದರಕಿ

ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ: ಲಕ್ಷ್ಮಿಕಾಂತ್ ಪಾಟೀಲ್ ಮದ್ದರಕಿ
ಯಾದಗಿರಿ: ರಾಜ್ಯ ಸರ್ಕಾರವು ನಾರಾಯಣಪುರ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಏ. 10ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಎ. ಪಾಟೀಲ್ ಮದ್ದರಕಿ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೇತೃತ್ವ ವಹಿಸಿ ಮನವಿ ಸಲ್ಲಿಸಿದ ಅವರು, ಏ. 1ರಿಂದ 6ರವರೆಗೆ ಮಾತ್ರ ನೀರು ಹರಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದರು. ಇದರಿಂದ ಭತ್ತ ಮತ್ತು ಶೇಂಗಾ ಬೆಳೆಗಳು ಹಾನಿಗೊಳಗಾಗಲಿವೆ.
"ಎ. 22ರವರೆಗೆ ನೀರು ಹರಿಸುವ ನಿರ್ಧಾರವನ್ನು ಸರ್ಕಾರವು ಪರಿಗಣಿಸಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದನೆ ನೀಡದಿದ್ದರೆ, ಉಗ್ರ ಹೋರಾಟವನ್ನು ಆರಂಭಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉ.ಕ.ಅಧ್ಯಕ್ಷ ಮಲ್ಲಿಕಾರ್ಜುನ ಬಿ. ನಾಯಕ್, ಯಾದಗಿರಿ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ ನಡುವೆನಕೇರಿ, ರಾ.ಸ.ಸದಸ್ಯ ಯಲ್ಲಪ್ಪ ಟಿ. ಕಾಶಿರಾಜ ವನದುರ್ಗ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿತರಿದ್ದರು.
- ಜೆಟ್ಟಪ್ಪ ಎಸ್. ಪೂಜಾರಿ
(ಕಲಬುರಗಿ ವಾರ್ತೆ)