ಯುವನಿಧಿ ಯೋಜನೆ ಕುರಿತು ಸ್ಪಷ್ಟನೆ :ಸಚಿವ ಶರಣಪ್ರಕಾಶ್ ಪಾಟೀಲ

ಯುವನಿಧಿ ಯೋಜನೆ ಕುರಿತು  ಸ್ಪಷ್ಟನೆ :ಸಚಿವ ಶರಣಪ್ರಕಾಶ್ ಪಾಟೀಲ

ಯುವನಿಧಿ ಯೋಜನೆ ಕುರಿತು ಸ್ಪಷ್ಟನೆ :ಸಚಿವ ಶರಣಪ್ರಕಾಶ್ ಪಾಟೀಲ 

ಕಲಬುರಗಿ: ಯುವನಿಧಿ ಯೋಜನೆ ಅನುಷ್ಠಾನದ ಬಗ್ಗೆ ಮಾನ್ಯ ವಿಧಾನ ಪರಿಷತ್ ಸದಸ್ಯರ ಪ್ರಶ್ನೆಗೆ ಸರ್ಕಾರ ಸವಿವರ ಉತ್ತರ ನೀಡಿದ್ದು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಂದರು 

ಪದವಿ ಪಡೆದ ಬಳಿಕ ನಿರುದ್ಯೋಗಿಗಳಾಗಿರುವ ಎಲ್ಲಾ ಅರ್ಹ ಯುವಕರಿಗೂ ಈ ಯೋಜನೆಯ ಲಾಭವನ್ನು ಸರಿಯಾಗಿ ನೀಡಲು ಸರ್ಕಾರ ಬದ್ಧವಾಗಿದೆ. ಯುವನಿಧಿ ಯೋಜನೆ ರಾಜ್ಯದ ಯುವ ಜನತೆಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಇದನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಿದರು 

ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಪೂರಕ ದಸ್ತಾವೇಜುಗಳ ಪರಿಶೀಲನೆ ಮತ್ತು ಅನುಮೋದನೆ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಯುವಕರ ಭವಿಷ್ಯವನ್ನು ಸುಧಾರಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಯುವನಿಧಿ ಯೋಜನೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.