ವಾಲ್ಮೀಕಿ ಸಂದೇಶ ಸರ್ವಕಾಲಕ್ಕೂ ಶ್ರೇಷ್ಠ: ದರ್ಶನಾಪುರ

ವಾಲ್ಮೀಕಿ ಸಂದೇಶ ಸರ್ವಕಾಲಕ್ಕೂ ಶ್ರೇಷ್ಠ: ದರ್ಶನಾಪುರ

 ವಾಲ್ಮೀಕಿ ಸಂದೇಶ ಸರ್ವಕಾಲಕ್ಕೂ ಶ್ರೇಷ್ಠ: ದರ್ಶನಾಪುರ

ಶಹಾಪುರ : ಬದುಕಿನ ಅರ್ಥದ ಮೌಲ್ಯಗಳು,ಧರ್ಮ ಹಾಗೂ ಮಾನವೀಯ ಸಂಬಂಧಗಳನ್ನು ಎತ್ತಿ ಹಿಡಿದು ತೋರಿದ ಮಹಾನ್ ಮೇದಾವಿ ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳು ಸರ್ವಕಾಲಕ್ಕೂ ಶ್ರೇಷ್ಠ ವಾಗಿವೆ ಎಂದು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣದ ಜೊತೆಗೆ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು,ದ್ವೇಷ ಅಸೂಯೆ ಬಿಟ್ಟು ಪ್ರೀತಿ ವಿಶ್ವಾಸದಿಂದ ಪರಸ್ಪರ

ಸಹೋದರತೆಯ ಭಾವದಿಂದ ಸಮಾಜದಲ್ಲಿ ಉತ್ತಮರಾಗಿ ಬದುಕಬೇಕು ಅವರ ಆದರ್ಶ ತತ್ವಗಳನ್ನು ಕೂಡ ಅಳವಡಿಸಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು.

ಈಗಾಗಲೇ ವಾಲ್ಮೀಕಿ ಭವನಕ್ಕೆ 29 ಲಕ್ಷ ರೂ.ಗಳು ಮಂಜೂರಾಗಿದ್ದು ಈ ಕಾಮಗಾರಿ ತೀವ್ರಗತಿಯಲ್ಲಿ ಸಾಗಿ ಭವನದ ಕಟ್ಟಡ ಉತ್ತಮ

ಗುಣಮಟ್ಟದಲ್ಲಿ ಆಗಬೇಕು ಅಲ್ಲದೇ ಇನ್ನೂ 20 ಲಕ್ಷ ರೂಪಾಯಿಗಳನ್ನು ಈ ಭವನಕ್ಕೆ ಮಂಜೂರು ಮಾಡುವ ಭರವಸೆ ನೀಡಿದರು.

ಗೋಲಪಲ್ಲಿಯ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದ ಪೂಜ್ಯರಾದ ವರದಾನೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಬಿಜೆಪಿ ಪಕ್ಷದ ಯುವ ಮುಖಂಡ ಅಮೀನರೆಡ್ಡಿ ಪಾಟೀಲ್ ಯಾಳಗಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಶಿವುಮಾಂತಪ್ಪ ಸಾಹು ಚಂದಾಪುರ,ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ,ಮರೆಪ್ಪ ಪ್ಯಾಟಿ, ಶ್ರೀನಿವಾಸ್ ಯಕ್ಷಂತಿ,ಭೀಮಣ್ಣ ಬೂದನೂರ,ಹನುಮಂತರಾಯ ಟೋಕಾಪುರ,ಸೋಪಣ್ಣ ನಾಯಕ ಸಗರ,ಭೀಮಣ್ಣ ಮೊಕಾಶಿ,ತಿರುಪತಿ ಹಳಿ ಸಗರ,ಯುವ ಸಾಹಿತಿ ಬಸವರಾಜ ವನದುರ್ಗ ಸೇರಿದಂತೆ ಸಾವಿರಾರು ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.