ಭೇದ ಭಾವ ತೊರೆದು ಎಲ್ಲರೂ ಒಗ್ಗಟಿನಿಂದ ಸಮಾರಂಭ ಯಶಸ್ವೀಗೊಳಿಸಲು ಕರುಣೇಶ್ವರ ಸ್ವಾಮಿ ಕರೆ

ಇದೇ ಏಪ್ರೀಲ್ 9 ರಂದು ಶ್ರೀ ರೇವಣಸಿದ್ದೇಶ್ವರ ನೂತನ ದೇವಸ್ಥಾನ ಅಡಿಗಲು ಸಮಾರಂಭ ಹಾಗೂ ಜಗದ್ಗುರು ಶ್ರೀ ರೇಣುಕಾಚಾರ್ಯರ ಯುಗಮನೋತ್ಸವ, ಜಯಂತ್ಯೋತ್ಸವ ಆಚರಣೆ ಜರುಗಲಿದೆ

ಭೇದ ಭಾವ ತೊರೆದು ಎಲ್ಲರೂ ಒಗ್ಗಟಿನಿಂದ ಸಮಾರಂಭ ಯಶಸ್ವೀಗೊಳಿಸಲು ಕರುಣೇಶ್ವರ ಸ್ವಾಮಿ ಕರೆ 

ಚಿಂಚೋಳಿ : ತಾಲೂಕಿನಲ್ಲಿ ಬಹಳಷ್ಟು ಕಡೆಗಳಲ್ಲಿ ಸಮಾರಸ್ಯವನ್ನು ಹಾಳಾಗಿ ಹೋಗುತ್ತಿದೆ. ಬಸವಣ್ಣ ಮತ್ತು ಪಂಚಾಚಾರ್ಯರು ಒಂದೇ ಎನ್ನುವ ರೀತಿಯಲ್ಲಿ ಭೇದ ಭಾವ ತೊರೆದೆ ವೀರಶೈವ ಸಮಾಜ ಸಾಮರಸ್ಯದಿಂದ ಜಯಂತಿ ಆಚರಣೆ ಕಾರ್ಯಕ್ರಮಗಳು ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿರುವುದು ಸಂತೋಷ ತಂದಿದೆ ಎಂದು ನೀಡಗುಂದಾ ಕಂಚಾಳಕುಂಟಿ ನಂದೇಶ್ವರ ಮಠದ ಪೀಠಾಧಿಪತಿ ಶ್ರೀ ಕರುಣೇಶ್ವರ ಸ್ವಾಮಿಗಳು ಹೇಳಿದರು. 

ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೇಣವಣಸಿದ್ದೇಶ್ವರ ದೇವಸ್ಥಾನ ಅಡಿಗಲು ಸಮಾರಂಭದ ಪೋಸ್ಟರ್ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ತಾಲೂಕಿನಲ್ಲಿ ಪ್ರತಿ ವರ್ಷ ಸಾಮರಸ್ಯದಿಂದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಯುಗಮನೋತ್ಸವ ಜಯಂತಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಇದೇ ಏಪ್ರಿಲ್ 9 ರಂದು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಅಡಿಗಲ್ಲು ಸಮಾರಂಭ ಹಾಗೂ ಶ್ರೀ ಶ್ರೀ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಹೋತ್ಸವ ಹಾಗೂ ಜಯಂತ್ಯೋತ್ಸವ ಮತ್ತು ಧರ್ಮ ಸಭೆ ಕಾರ್ಯಕ್ರಮ ಚಿಂಚೋಳಿ- ಕಲಬುರಗಿ ಹೋಗುವ ಮಾರ್ಗಕ್ಕೆ ಹೊಂದಿಕೊಂಡಿರುವ ಅಣವಾರ ಕ್ರಾಸ್ ಶ್ರೀ ಮೌನೇಶ್ವರ ದೇವಸ್ಥಾನ ಹಿಂದುಗಡೆ ಬೆಳಿಗ್ಗೆ 9 ಗಂಟೆಗೆ ಜರುಗಲಿದೆ. ಹೀಗಾಗಿ ಎಲ್ಲರೂ ಸಾಮರಸ್ಯದಿಂದ ಕೂಡಿ ಒಗ್ಗಟಿನಿಂದ ಎಲ್ಲಾ ಮಹಾತ್ಮರ ಜಯಂತಿ ಕಾರ್ಯಕ್ರಮಗಳಂತೆ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಯಶಸ್ವೀಗೊಳಿಸಬೇಕು ಎಂದರು. 

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಉತ್ತರ ಪ್ರದೇಶ ವಾರಣಾಸಿ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕಾಶಿ ಪೀಠ ಜಂಗಮವಾಡಿ ಮಠದ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ಹಾಗೂ ಮಧ್ಯ ಪ್ರದೇಶ ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ಭರ್ಮಾ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಾಗವತ್ಪಾದರು ವಹಿಸಲಿದ್ದಾರೆ. ದೇಗಲ್ಮಡಿ ಬಸವ ಅವಧೂತರು, ನಿರಗೂಡಿ ಹವಾ ಮಲ್ಲಿನಾಥ ಸ್ವಾಮಿಗಳು, ಶಾಸಕ ಡಾ. ಅವಿನಾಶ ಜಾಧವ್, ಸಂಸದ ಸಾಗರ ಈಶ್ವರ ಖಂಡ್ರೆ, ಸಚಿವ ಶರಣಪ್ರಕಾಶ ಪಾಟೀಲ, ರಾಜಕುಮಾರ ಪಾಟೀಲರು ಆಗಮಿಸಲಿದ್ದಾರೆ ಎಂದು ಜಯಂತ್ಯೋತ್ಸವ ಸ್ವಾಗತ ಸಮಿತಿ ತಿಳಿಸಿದೆ. 

ಈ ಸಂದರ್ಭದಲ್ಲಿ ಚಂದನಕೇರಾ ಅಭಿನವ ತೋಟಾಂದರ್ಯ ಸ್ವಾಮಿಗಳು, ಸ್ವಾಗತಿ ಸಮಿತಿ ಅಧ್ಯಕ್ಷ ಶಿವಬಸಯ್ಯ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ಸಂಗಯ್ಯ ಸ್ವಾಮಿ ಅಣವಾರ, ನೀಲಕಂಠ ಸಿಳ್ಳಿನ್, ವೀರೇಶ ಯಂಪಳ್ಳಿ, ಮಲ್ಲಿಕಾರ್ಜುನ ಭೂಶೆಟ್ಟಿ, ಗಣೇಶ ಹೂಗಾರ, ಸಂತೋಷ ಕಶೆಟ್ಟಿ, ಮಾಂತಯ್ಯ ಸ್ವಾಮಿ, ಸುರೇಶ ಸುಂಕದ, ಸಂಜು ಯಂಪಳ್ಳಿ, ಮಂಜುನಾಥ ಸುಣಗ ಮಠ, ಬಸವ ಚೆನ್ನೂರ ಅವರು ಉಪಸ್ಥಿತರಿದರು.