ಜನವಿರೋಧಿ ನಿರಾಶಾದಾಯಕ ಬಜೆಟ್: ಶರಣಕುಮಾರ

ಜನವಿರೋಧಿ ನಿರಾಶಾದಾಯಕ ಬಜೆಟ್: ಶರಣಕುಮಾರ

ಜನವಿರೋಧಿ ನಿರಾಶಾದಾಯಕ ಬಜೆಟ್: ಶರಣಕುಮಾರ

ಕಲಬುರಗಿ: ಬಜೆಟ್ ನಲ್ಲಿ ಆರ್ಥಿಕ ಸುಧಾರಣೆ,ಆರ್ಥಿಕ ಸಬಲೀಕರದತ್ತ ರಾಜ್ಯವನ್ನು ತೆಗದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ.ಇದೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನವಿರೋಧಿ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಅವರು ಆರೋಪಿಸಿದ್ದರು.

     ಶಿಕ್ಷಣಕ್ಕೆ ಶೇ.2 ರಷ್ಟು ಮಹಿಳಾ ಮಕ್ಕಳ ಇಲಾಖೆಗೆ ಶೇ.1 ರಷ್ಟು ಕಡಿಮೆ ಅನುದಾನ ನೀಡಲಾಗಿದೆ.ಈಗಾಗಲೇ ಕೃಷಿ ಸಿಚಾಯಿ ಯೋಜನೆಯಡಿ ಹನಿ,ತುಂತುರು ನೀರಾವರಿ ಘಟಕಗಳಿಗೆ ಕೇಂದ್ರ ಸರಕಾರ ಶೇ.90 ರಷ್ಟು ಸಹಾಯಧನ ಲಭ್ಯವಿದ್ದರು 1.81 ಲಕ್ಷ ರೈತರಿಗೆ ಹನಿ,ತುಂತುರು ನೀರಾವರಿ ಘಟಕಗಳಿಗೆ ಸಬ್ಸಿಡಿ ಎಂದು ಘೋಷಿಸಿರುವುದು ಹಳೆ ಬಾಟಲಿಯಲ್ಲಿ ಹೊಸ ಮದ್ಯ ಎಂಬಂತಾಗಿದೆ. ಅಲ್ಪಸಂಖ್ಯಾತರಿಗೆ‌ ಬಂಪರ್ ಕೊಡುಗೆ ನೀಡಿರುವ ಸಿಎಂ ಬಹು ಸಂಖ್ಯಾತರಿಗೆ ಖಾಲಿ ಚೊಂಬು ಕೊಡುವುದನ್ನು ಈ ಬಜೆಟ್ ನಲ್ಲೂ ಅವರು ಮುಂದುವರೆಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.