ಅಪ್ಪ ದೇವರು,,!

ಅಪ್ಪ ದೇವರು,,!
ಅಮ್ಮ ದೇವತೆಯಾದರೆ
ಅಪ್ಪ ದೇವರು
ಅವಳು ಜನ್ಮದಾತೆಯಾದರೆ
ಅವನು ಜನ್ಮದಾತ
ಆತ ಸಂಸಾರದ
ನೊಗ ಹೊತ್ತು ,
ನಿತ್ಯದ ಬೇಕು ಬೇಡ
ಪೂರೈಸಿ ನಿಟ್ಟುಸಿರು
ಬಿಡುವವನು
ಕಷ್ಟ ಬಂದಾಗ
ಕೊರತೆ ಕಾಡಿದಾಗ ,
ಗಪ್ಪಾಗಿ ತೆಪ್ಪಗಾಗಿ ಕೂತು
ಶೂನ್ಯ ದಿಟ್ಟಿಸಿ
ಲೆಕ್ಕ ಹಾಕುವವನು
ಅಂತರಾಳದಲಿ
ಅಗೋಚರ ನೋವು
ಬೂದಿ ಮುಚ್ಚಿದ
ಕೆಂಡವಾದರು
ತೋರಿಸಿಕೊಳ್ಳದವನು
ನಿತ್ಯ,,ಹತ್ತಾರು
ಕೊರತೆ ಕಾಡಿದರು
ಎಲ್ಲವೂ ನುಂಗಿ
ನೀಲಕಂಠನಾಗುವನು!
ನಿಸ್ವಾರ್ಥಿಯಾಗಿ
ಎಲ್ಲರ ಜೊತೆ ಪ್ರೀತಿ
ವಿಶ್ವಾಸ ತೋರಿ
ಮುಗ್ಳನಗು ಬೀರುವವನು,,!
ಶರಣಗೌಡ ಬಿ ಪಾಟೀಲ ತಿಳಗೂಳ.