ಈಡಿಗ ಚಿಂತನ - ಮಂಥನ ಸಭೆಗೆ ಸತೀಶ್ ಗುತ್ತೇದಾರ್ ತಂಡ ಬೆಂಗಳೂರಿಗೆ

ಈಡಿಗ ಚಿಂತನ - ಮಂಥನ ಸಭೆಗೆ ಸತೀಶ್ ಗುತ್ತೇದಾರ್ ತಂಡ ಬೆಂಗಳೂರಿಗೆ
ಕಲಬುರಗಿ : ಆರ್ಯ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿ ಕುರಿತಾಗಿ ಮಾರ್ಚ್ 8ರಂದು ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಚಿಂತನ - ಮಂಥನ ಸಭೆಯಲ್ಲಿ ಪಾಲ್ಗೊಳ್ಳಲು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ನೇತೃತ್ವದ ತಂಡ ಬೆಂಗಳೂರಿಗೆ ತೆರಳಿದೆ.
ಬೆಂಗಳೂರಿನ ಗಾರ್ಡೇನಿಯ ಅರಮನೆ ಮೈದಾನದಲ್ಲಿ ಸಮಾಜದ ಸ್ವಾಮೀಜಿಗಳು ಮತ್ತು ಜನಾಂಗದ ಮುಖಂಡರ ಉಪಸ್ಥಿತಿಯಲ್ಲಿ ನಡೆಯುವ ಈ ಸಭೆಗೆ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇ ಚೂರ್ ಹಾಗೂ ಡಾ. ಸದಾನಂದ ಪೆರ್ಲ ಒಳಗೊಂಡ ತಂಡವು ತೆರಳಲಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯರಾದ ಡಾ. ಲಕ್ಷ್ಮೀ ನರಸಯ್ಯ ಸಂಚಾಲಕತ್ವದಲ್ಲಿ ನಡೆಯುವ ಈ ಚಿಂತನ - ಮಂಥನ ಸಭೆಯಲ್ಲಿ "ಈಡಿಗ ಜನಾಂಗದ ಇತಿಹಾಸ : ಅಭಿವೃದ್ಧಿಯ ಬಗ್ಗೆ ಒಂದು ಅವಲೋಕನ " ವಿಷಯ ಕುರಿತಾಗಿ ನಡೆಯಲಿದ್ದು ಸಮುದಾಯದ ಸ್ವಾಮೀಜಿಗಳು, ರಾಜಕೀಯ ನಾಯಕರು, ತಜ್ಞರು ಭಾಗವಹಿಸಲಿರುವರು.