ಕೋಡ್ಲಿಯಲ್ಲಿ ಪಂ. ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ವಿಶ್ವಗಾನ ಉಭಯರತ್ನ ಹಾಗೂ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಕೋಡ್ಲಿಯಲ್ಲಿ ಪಂ. ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ವಿಶ್ವಗಾನ ಉಭಯರತ್ನ ಹಾಗೂ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಕೋಡ್ಲಿಯಲ್ಲಿ ಪಂ. ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ

ವಿಶ್ವಗಾನ ಉಭಯರತ್ನ ಹಾಗೂ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

ಕಾಳಗಿ:ನಾಡಿನ ಅಂಧ ಅನಾಥ ಹಾಗೂ ದೀನ ದುಖಿತರನ್ನು ಸೂರ್ಯಚಂದ್ರರಂತೆ ಬೆಳಗಿ ಅವರ ಬದುಕು ಉಜ್ವಲಗೊಳಿಸಲು ಗದಗನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಜೀವನದುದ್ದಕ್ಕೂ ಶ್ರಮಿಸಿದರು ಎಂದು ಚಿಂಚೋಳಿಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಎಸ್.ಕೆ ಹಸನ್ ತಿಳಿಸಿದರು.

ಅವರು ತಾಲ್ಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಚಿಂಚೋಳಿಯ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ ಹಮ್ಮಿಕೊಂಡ ಪಂಚಾಕ್ಷರಿ ಗವಾಯಿಗಳ 133ನೇ ಹಾಗೂ ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಶಿಕ್ಷಕ ಶಿವಾನಂದ ಬೀಳಗಿ, ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿ, ಕಣ್ಣಿದ್ದವರು ಮಾಡಲಾಗದಂತಹ ಅದ್ಭುತ ಸಾಧನೆ ಹಾಗೂ ಸೇವಾಕಾರ್ಯಗಳನ್ನು ಮಾಡುವ ಮೂಲಕ ಉಭಯ ಗವಾಯಿಗಳು ಸಾರ್ವಕಾಲಿಕ ಸ್ಮರಣೀಯರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ರಮೇಶ ಕೋಲಕುಂದಾ ಮತ್ತು ಗದಗನ ಚನ್ನವೀರ ಸ್ವಾಮಿ ಹಿರೇಮಠ ಕಡಣಿ ಅವರಿಗೆ ವುಶ್ವಗಾನ ಉಭಯ ರತ್ನ ಮತ್ತು ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯನ್ನು ಕೋಡ್ಲಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು ಪ್ರದಾನ ಮಾಡಿದರು.

ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ, ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ರಾಜಶೇಖರ ಮಾಂಗ್ ವಹಿಸಿದ್ದರು.

ಸುಲೇಪೇಟ ಕನ್ಯಾ ಶಾಲೆಯ ಮುಖ್ಯ ಶಿಕ್ಷಕ ಸುರೇಶ ವಾಲಿಕಾರ, ಮುಖಂಡರಾದ ಮಂಜುನಾಥ ಲೇವಡಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಿವಪ್ರಸಾದ ಪಿ.ಜೆ, ಸಂಗಯ್ಯ ಮಠಪತಿ, ಸಿದ್ದಯ್ಯ ಸ್ವಾಮಿ, ಶಿವಕುಮಾರ ಹಿರೇಮಠ, ನಾಗಶೆಟ್ಟಿ ಯಲಮಡಗಿ, ಗೋಪಾಲದಾಸ ಸಾಹುಕಾರ,ಕರಿಬಸವೇಶ್ವರ ಹಿರೇಮಠ, ರಾಮಯ್ಯಸ್ವಾಮಿ, ತುಕಾರಾಮ ಚವ್ಹಾಣ, ಕವಿತಾ ಭರಶೆಟ್ಟಿ, ಭಾಗ್ಯಜ್ಯೋತಿ ಇದ್ದರು.

ನಾಗೇಶ ಶೀಲವಂದ ಮತ್ತು ಪ್ರಭು ಜಾಣ ಅವರು ಕುಂಚ ಗಾನ ನಡೆಸಿಕೊಟ್ಟರು. ರಮೇಶ ಕೋಲಕುಂದಾ, ಸಿದ್ದರಾಜ ದುಬಲಗುಂಡಿ, ದಯಾನಂದ ಹಿರೇಮಠ, ಸಿದ್ದಣ್ಣ ಕುಂಬಾರ, ಶರಣಯ್ಯಸ್ವಾಮಿ ಅಲ್ಲಾಪುರ ಮೊದಲಾದವರು ಸಂಗೀತ ಸೇವೆ ಸಲ್ಲಿಸಿದರು. ಪ್ರಾಸ್ತಾವಿಕವಾಗಿ ರೇವಣಸಿದ್ದಯ್ಯ ಹಿರೇಮಠ ಮಾತನಾಡಿದರು. ರೇಖಾ ಮತ್ತು ಮಹಾನಂದಾ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.ಅಶೋಕ ಸ್ವಾಗತಿಸಿದರು. ಬಸವರಾಜ ನಾಗಶೆಟ್ಟಿ ನಿರೂಪಿಸಿದರು. ಪುಷ್ಪಲತಾ ಹಿರೇಮಠ ವಂದಿಸಿದರು.