ಆಡಳಿತ ಅಧಿಕಾರಿಗಳು ಶಾಸಕರಿಗೆ ಕಪ್ಪುಚುಕ್ಕೆ ಬರದಂತೆ ನಡೆದುಕೊಳ್ಳಲು : ಗೋಪಾಲರಾವ ಕಟ್ಟಿಮನಿ ತಾಕಿತ್ತು
ಶಾಸಕ ಡಾ. ಅವಿನಾಶ ಜಾಧವ ಹುಟ್ಟುಹಬ್ಬ ಆಚರಣೆ
ಅಭಿಮಾನಿ ಬಳಗದಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಆಡಳಿತ ಅಧಿಕಾರಿಗಳು ಶಾಸಕರಿಗೆ ಕಪ್ಪುಚುಕ್ಕೆ ಬರದಂತೆ ನಡೆದುಕೊಳ್ಳಲು : ಗೋಪಾಲರಾವ ಕಟ್ಟಿಮನಿ ತಾಕಿತ್ತು
ಚಿಂಚೋಳಿ : ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಕೂಡ ಶಾಸಕ ಡಾ. ಅವಿನಾಶ ಜಾಧವ್ ಅವರು ಬಗ್ಗೆ ಹರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು ಬೇಜವ್ದಾರಿ ರೀತಿಯಲ್ಲಿ ನಡೆದುಕೊಂಡು ರಾಜಕೀಯ ಮುಖಂಡರೊಂದಿಗೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ ಅವರು ಆರೋಪಿಸಿದರು.
ಶಾಸಕ ಡಾ. ಅವಿನಾಶ ಜಾಧವ್ ಅವರ 36ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯವಾಗಿ ಅಭಿಮಾನಿ ಬಳಗದ ವತಿಯಿಂದ ಚಂದಾಪೂರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೇಕ ನ್ಯೂನತೆಗಳಿರುವುದು ಎದ್ದು ಕಾಣುತ್ತಿದ್ದರು ಅಧಿಕಾರಿಗಳು ಯಾವುದೇ ರೀತಿ ಏನು ಆಗಿಲ್ಲ ಎಂಬ ರೀತಿಯಲ್ಲಿ ಆಡಳಿತ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಶಾಸಕರು ಅಭಿವೃದ್ಧಿಗೆ ಮುರ್ತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಶಾಸಕರ ಹೆಸರಿಗೆ ಕಪ್ಪುಚುಕ್ಕೆ ಬರಲಿದೆ. ಅಧಿಕಾರಿಗಳು ತಪ್ಪುಗಳನ್ನು ತಿದ್ದಿಕೊಂಡು ನಡೆಯಬೇಕು. ಜನರಿಗೆ ಒಳ್ಳೆಯ ಸೇವೆ ನೀಡುವ ನೀಟ್ಟಿನಲ್ಲಿ ಕಾರ್ಯಾನಿರ್ವಹಿಸಬೇಕೇನ್ನುವ ಇಚ್ಚೆ ಹೊಂದಿರದಿದ್ದರೆ ಹುದ್ದೆಯ ಸ್ಥಳ ಖಾಲಿ ಮಾಡಿ ನಡೆಯಬೇಕು ಎಂದರು.
ಮುಖಂಡ ಕೆ.ಎಂ.ಬಾರಿ ಅವರು ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವ ಆಗದಂತೆ ಉತ್ತಮ ಅಭಿವೃದ್ಧಿ ಕೆಲಸಗಳು ನಡೆಸುತ್ತಿದ್ದಾರೆ. ಜನರ ಸಮ್ಯಸೆಗಳಿಗಾಗಿ ಅಧಿವೇಶನದಲ್ಲಿ ಭಾಗಿ ಆಗಿರುವುದರಿಂದ ಹುಟ್ಟುಹಬ್ಬದ ಸಂಭ್ರಮ ಆನಂದಿಸಲು ಕಾರ್ಯಕರ್ತರ ಮಧ್ಯ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಶಾಕರಿಗೆ ನೀಡಲಿ ಎಂದು ಪಕ್ಷದ ಎಲ್ಲಾ ಕಾರ್ಯಕರ್ತರು ಶಭು ಹಾರೈಸುತ್ತೇವೆ ಎಂದರು.
ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಸ್ವಾಗತಿ, ನಿರೂಪಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ್, ತಾಲೂಕ ವೈದ್ಯಾಧಿಕಾರಿ ಡಾ. ಗಫಾರ, ಬಿಜೆಪಿ ಮಂಡಲ ವಕ್ತಾರ ಶ್ರೀಮಂತ ಕಟ್ಟಿಮನಿ, ಯುವ ಮುಖಂಡ ಲೋಕೇಶ ಶಿಳಗಿ, ವಕೀಲ ಚಂದ್ರಶೆಟ್ಟಿ ಜಾಧವ್, ಮಲ್ಲಿಕಾರ್ಜುನ ಸ್ವಾಮಿ, ಅಭಿಷೇಕ ಮಲಕನೂರ್, ಸತೀಶ ರೆಡ್ಡಿ, ಅಮರ ಲೋಡನೂರ್, ರಾಜು ಪವಾರ, ಅಶೋಕ ಚವ್ಹಾಣ, ಚಂದ್ರಶೇಖರ ಗುತ್ತೇದಾರ, ಶ್ರೀಕಾಂತ ಪಿತ್ತಲ್, ಜಗನ್ನಾಥ ಗುತ್ತೇದಾರ ರಾಜಾಪೂರ, ಸಾಗರ ಆನಂದಿ ಅವರು ಇದ್ದರು.