ಜ್ಞಾನ ಬೆಳೆದು ಜ್ಯೋತಿಯಾಗಿ ಪ್ರಜ್ವಲಿಸಲಿ ---ಭೀಮಣ್ಣ ಸಾಲಿ

ಜ್ಞಾನ ಬೆಳೆದು ಜ್ಯೋತಿಯಾಗಿ ಪ್ರಜ್ವಲಿಸಲಿ ---ಭೀಮಣ್ಣ ಸಾಲಿ
ಚಿತ್ತಾಪುರ :ಶಿಕ್ಷಣ ಪ್ರೇಮಿ, ಸಾಹಿತಿ, ಪತ್ರಕರ್ತರಾದ ನಾಗಯ್ಯ ಸ್ವಾಮಿ ಅಲ್ಲೂರ್ ಅವರು ಧೀನ ದಲಿತರ, ಬಡಜನರ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಿರುವ ಜ್ಞಾನಜ್ಯೋತಿ ಶಾಲೆಯ ಶಿಕ್ಷಣದಿಂದ ಜ್ಞಾನ ಬೆಳೆದು ಜ್ಯೋತಿಯಾಗಿ ಪ್ರಜ್ವಲಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಅವರು ತಾಲೂಕಿನ ಅಲಹಳ್ಳಿ ಗ್ರಾಮದಲ್ಲಿ ವಿಶ್ವ ಜನ ಸೇವಾ ಸಂಸ್ಥೆ (ರಿ ) ಯ ಜ್ಞಾನ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಸಾವಿರ ದೇವರ ಮಠ ಅಲಹಳ್ಲಿಯ 19 ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ. ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ 2005 ರಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಸ್ವಾಮಿ ಅವರು ಕಷ್ಟಪಟ್ಟು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸೇವೆ ನೀಡುತ್ತಾ ಇದ್ದಾರೆ. ಅವರು ಸರಳತೆ ಮೆಚ್ಚುತಕ್ಕಂತಹದ್ದು ಅಷ್ಟೇ ಉನ್ನತ ವಿಚಾರವುಳ್ಳವರು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾ. ಪಂ. ಮಾಜಿ ಅಧ್ಯಕ್ಷ ಶಾಂತಣ್ಣ ಚಾಳಿಕಾರ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿ ತಾವು ಕಲಿತ ಶಾಲೆಯನ್ನು ಹಾಗೂ ಗುರುಗಳನ್ನು ಎಂದೂ ಮರೆಯದಿರಿ. ಅಭಿಮಾನ ಮೆರೆಯಬೇಕು ಎಂದರು. ಸಂಸ್ಥೆ ನಡೆಸುವವರು ಹಾಗೂ ಶಿಕ್ಷಕರು, ಆಸ್ತಿವಂತರಲ್ಲ, ಸ್ಥಿತಿವಂತರಿಲ್ಲ ಆದರೂ ಗುರುವಿನ ಆಶೀರ್ವಾದದಿಂದ ಕನ್ನಡ ಶಾಲೆ ಮುಚ್ಚುವ ಪರಿಸ್ಥಿತಿಯಲ್ಲೂ ಬಡವರ ಪಾಲಿನ ಸಂಜೀವಿನಿ ಆಗಿದ್ದಾರೆ. ಜ್ಞಾನಜ್ಯೋತಿ ಶಾಲೆಗೆ ನಮ್ಮ ಊರಿನ ವತಿಯಿಂದ ಎಲ್ಲಾ ಹಿರಿಯರು ಚರ್ಚೆ ನಡೆಸಿ ಭೂಮಿ ಕೊಡಿಸಲಾಗುವುದು. ಇದು ನಮ್ಮೂರಿನ ಸಂಸ್ಥೆ. ಆದಷ್ಟು ಬೇಗ ಅನುದಾನ ಸಿಗಲಿ ಅದಕ್ಕೆ ಎಲ್ಲರ ಸಹಕಾರ ಇರುವುದು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಅದ್ಯಕ್ಷ್ಮ್ ನಾಗಯ್ಯ ಸ್ಪಾಮಿ ಅಲ್ಲೂರ ಅವರು ಏಳು ಬೀಳುಗಳ ನಡುವೆ ಗ್ರಾಮದ ಜನರ ಸಹಕಾರದಿಂದ ಶಾಲೆ 19 ವರ್ಷಗಳ ಪೂರೈಸಿದೆ. ಶಿಕ್ಷಣದ ಜತೆ ಗ್ರಾಮದ ಸಾಮಾಜಿಕ ಸ್ಥಿತಿಯೂ ಸುಧಾರಿಸಬೇಕೆಂದು ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವೆವು. ತಮ್ಮ ಸಹಕಾರ ಹೀಗೆಯೇ ಮುಂದುವರೆಯಲಿ ಎಂದರು.
ವೇದಿಕೆಯಲ್ಲಿ ಗಣ್ಯರಾದ ಸೋಮಶೇಖರ ಗೌಡ ಮುಶೇನಿ, ಮಹಾದೇವಪ್ಪ ದೊಣಗಾಂವ್, ಸದಾನಂದ ಕರದಾಳ,ಲಿಂಗಣ್ಣ ಮಲ್ಕನ್, ಇದ್ದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಶಾಲೆಗೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನ ಮಾಡಲಾಯಿತು.
ಬೆಳಿಗ್ಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಶೋಭಾ ಯಾತ್ರೆ ನಡೆಯಿತು. ಡ್ರಮ್, ಕೋಲಾಟ, ಛದ್ಮ ವೇಷಗಳು ಮನ ಸೆಳೆದವು.
ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿಯವರು, ಶಿಕ್ಷಕ ವೃಂದದವರಾದ ಕೀರ್ತಿ ಹೊಟ್ಟಿ, ಅನಸೂಯ ಮಡಿವಾಳ, ವಿಜಯಲಕ್ಷ್ಮಿ, ಸಾವಿತ್ರಿ ನಾಚವಾರ, ಸ್ವಾತಿ ಸಿಂಪಿಗೇರ್, ಶಾಂತಮ್ಮ ವಿಶ್ವಕರ್ಮ, ಮಂಜುಳಾ ಸೇರಿದಂತೆ ಮಾತೃ ಮಂಡಳಿ, ಮುದ್ದು ಮಕ್ಕಳು, ಪೋಷಕರು, ಗ್ರಾಮಸ್ಥರು ಹಾಜರಿದ್ದರು.
ಲಿಂಗರಾಜ್ ಅನವಾರ ನಿರೂಪಣೆ ಮಾಡಿದರು.ಮುಖ್ಯ ಗುರು ಬಸವರಾಜ ಹೊಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಖುಷಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಸಲೀಮ್ ವರದಿ ವಾಚನ ಮಾಡಿದರು ಶಿಕ್ಷಕಿ ಶಾಂತಮ್ಮ ವಂದಿಸಿದರು.