ನೇಕಾರ ಸಮುದಾಯದ ಆದ್ಯ ಗುರು ಶ್ರೀ ದೇವಲ ಮಹರ್ಷಿ ಜಯಂತಿ ಸಂಭ್ರಮದಿಂದ ಆಚರಣೆ

ನೇಕಾರ ಸಮುದಾಯದ ಆದ್ಯ ಗುರು ಶ್ರೀ ದೇವಲ ಮಹರ್ಷಿ ಜಯಂತಿ ಸಂಭ್ರಮದಿಂದ ಆಚರಣೆ

ನೇಕಾರ ಸಮುದಾಯದ ಆದ್ಯ ಗುರು ಶ್ರೀ ದೇವಲ ಮಹರ್ಷಿ ಜಯಂತಿ ಸಂಭ್ರಮದಿಂದ ಆಚರಣೆ

ಕಲಬುರಗಿ : ನೇಕಾರ ಸಮುದಾಯದ ಆದ್ಯ ಗುರು *ಶ್ರೀ ದೇವಲ ಮಹರ್ಷಿ ಜಯಂತಿ*ಯನ್ನು ಇಂದು ಸಪ್ತ ನೇಕಾರ ಸೇವಾ ಸಂಘದ ಕಚೇರಿಯಲ್ಲಿ ಭಕ್ತಿ-ಭಾವಪೂರ್ಣವಾಗಿ ಹಾಗೂ ಹಬ್ಬದ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಸಂಚಾಲಕರಾದ ವಕೀಲ ಸಂತೋಷ ಗುರಮೀಠಕಲ್ ಅವರು ಜಯಂತಿ ಉತ್ಸವಕ್ಕೆ ಆಗಮಿಸಿದ ಎಲ್ಲ ಅತಿಥಿಗಳು ಹಾಗೂ ಭಾಗವಹಿಸಿದವರನ್ನು ಸ್ವಾಗತಿಸಿದರು.

ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪ ಅಷ್ಟಗಿ ಪ್ರಾಸ್ತಾವಿಕ ಭಾಷಣದಲ್ಲಿ ನೇಕಾರ ಸಮಾಜದ ಐತಿಹಾಸಿಕ ಪರಂಪರೆ, ಸಪ್ತ ಅವತಾರಗಳ ಪರಂಪರೆಯ ಮಹತ್ವ, ಹಂಪಿ ದೇವಾಂಗ ಪೀಠದ ವೈಭವ ಹಾಗೂ ವಚನ ಸಾಹಿತ್ಯದಲ್ಲಿ ದಾಸಿಮಯ್ಯ ಅವರ ಪಾತ್ರವನ್ನು ವಿಶ್ಲೇಷಿಸಿದರು. ಅವರು “ದಾಸಿಮಯ್ಯ ನವರೇ ನೇಕಾರ ಸಮುದಾಯದ ನೈಜ ಸತ್ವವನ್ನು ಪ್ರತಿನಿಧಿಸುವ ಆದ್ಯ ವಚನಕಾರರು” ಎಂದು ಹೇಳಿದರು.

ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಡಾ. ಬಸವರಾಜ್ ಚನ್ನಾ ಅವರು ದೇವಲ ಮಹರ್ಷಿಯವರು ಮಾನವ ಜನಾಂಗದ ಜೀವನದಲ್ಲಿ ನೇಕಾರ ದಾರದ ಅಸ್ತಿತ್ವವನ್ನು ಪ್ರತಿಪಾದಿಸಿದ ಮಹಾನ್ ಋಷಿ ಎಂದು ಕೊಂಡಾಡಿದರು. “ಮಗು ಹುಟ್ಟಿದ ಕ್ಷಣದಿಂದಲೇ ನೇಕಾರದ ದಾರ ಜೀವನದ ಅಂಶವಾಗುತ್ತದೆ,” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರೊ. ಅನಾದಿ ಚಂದ್ರಶೇಖರ್ ಅವರು “ಸತ್ಯ ಮತ್ತು ಮಿಥ್ಯ” ವಿಷಯದ ಕುರಿತು ಸಂವಾದಾತ್ಮಕ ಚರ್ಚೆ ನಡೆಸಿ, ನೇಕಾರರು ಒಗ್ಗಟ್ಟಿನಿಂದ ಸಮಾಜದ ಪ್ರಗತಿಗೆ ಬದ್ಧರಾಗಬೇಕು ಎಂದು ಕರೆ ನೀಡಿದರು.

ಜಯಂತಿ ಉತ್ಸವದ ಅಧ್ಯಕ್ಷತೆ ವಹಿಸಿದ ವಕೀಲ ಜೆ. ವಿನೋದಕುಮಾರ ಅವರು 1998ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ದೇವಾಂಗ ಸಮ್ಮೇಳನ ಮತ್ತು ಹಂಪಿ ದೇವಾಂಗ ಪೀಠದ ಜಗದ್ಗುರುಗಳ ನೇಮಕವೇ ಇಂದು ಕಲಬುರಗಿಯಲ್ಲಿ ಸಪ್ತ ನೇಕಾರ ಸಂಘ ಸ್ಥಾಪನೆಗೆ ಪ್ರೇರಣೆಯಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀನಿವಾಸ್ ಬಲಪುರ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಹುಲ್ ಕೊಷ್ಠಿ,ನಾಗರಾಜ್ ಚೌಡಗುಂಡ ಸೇರಿದಂತೆ ಸಂಘದ ಹಲವಾರು ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.