ಭಾರತರತ್ನ ಡಾ. ಬಿ ಆರ್.ಅಂಬೇಡ್ಕರ್ 135 ನೇ ಜನಮೋತ್ಸವ ಅಂಗವಾಗಿ ಅಂಬೇಡ್ಕರ್ ಕುರಿತಾಗಿ ರಾಜ್ಯಮಟ್ಟದ ಕವಿಗೋಷ್ಠಿ

ಭಾರತರತ್ನ ಡಾ. ಬಿ ಆರ್.ಅಂಬೇಡ್ಕರ್ 135 ನೇ ಜನಮೋತ್ಸವ ಅಂಗವಾಗಿ ಅಂಬೇಡ್ಕರ್ ಕುರಿತಾಗಿ ರಾಜ್ಯಮಟ್ಟದ ಕವಿಗೋಷ್ಠಿ
ಕಲಬುರಗಿ :ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ (ರಿ) ರಾಜ್ಯ ಘಟಕ ಕಲಬುರಗಿ -585102
[Kg to Pg]
Skups ರಾಜ್ಯ ಸಂಘ ಕಲಬುರಗಿ ವತಿಯಿಂದ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ರವಿವಾರ ದಿನಾಂಕ 16-03-2025 ರಂದು ಬೆಳಿಗ್ಗೆ 10-00 ಗಂಟೆಗೆ ಕಲಬುರಗಿ ನಗರದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಅಂಬೇಡ್ಕರ್ ಕುರಿತಾಗಿ ಮಾತ್ರ ಕವನಗಳನ್ನು ಪ್ರಸ್ತುತ ಪಡಿಸಲು ಎಲ್ಲ ಹಂತದ ಆಸಕ್ತರು ಭಾಗವಹಿಸಲು ದಿನಾಂಕ 28-02-2025 ರಿಂದ 12-03-2025 ರವರಗೆ Googal ದಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ.
ಬಾಗವಹಿಸುವ ಎಲ್ಲರಿಗೂ,-ಪ್ರಯಾಣ ಭತ್ಯ, ಊಟೋಪಚಾರ, ಅರ್ಥಪೂರ್ಣಸತ್ಕಾರ, ಮತ್ತು ವಿಶೇಷ ಪ್ರಶಸ್ತಿ ನೀಡಿ ಸತ್ಕರಿಸಿ ಗೌರವಿಸಲಾಗುವದು.
ಸದರಿ ಕಾರ್ಯಕ್ರಮವು ಜಗತ್ಯಾಧ್ಯಾ0ತ Live ಆಗಿ ಮೂಡಿಬರಲಿದೆ. ಮುಖ್ಯವಾಗಿ ಸಂವಿಧಾನ ಶಿಲ್ಪಿ ,ಭಾರತಕಂಡ ಭಾರತರತ್ನ, ಪ್ರಪಂಚದಲ್ಲಿಯೇ ದೊಡ್ಡ ಸಂವಿಧಾನ ಕೊಟ್ಟ ಜಗತ್ತಿನ ಮಾನವತಾವಾದಿ, ಸರ್ವಶ್ರೇಷ್ಠ ಕಾನೂನಿನ ಕರ್ತೃ ಅಂಬೇಡ್ಕರ್ ರವರ ಕುರಿತಾಗಿ ಕವಿಗೋಷ್ಠಿ ಮಾಡುತ್ತಿರುವ skups ಸಂಘದ ಎಲ್ಲ ಹಂತದ ಪದಾಧಿಕಾರಿಗಳು ಕಾರ್ಯಪ್ರವುರ್ತಾರಾಗಿದ್ದಾರೆಂದು,
ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರುಪಾದ ಕೋಗನೂರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಎಲ್ಲರೂ ಭಾಗವಹಿಸಿರಿ, ಆಕ್ಷಣ ನಿಮ್ಮದಾಗಲಿ, ಪ್ರಪಂಚದ ಎಲ್ಲ ದೇಶಗಳಲ್ಲಿ ಅಂದು ತಾವುಗಳು ಕಾಣುತ್ತಿರಿ,
ವೇದಿಕೆ ನಿಮ್ಮದು, ಅಂಬೇಡ್ಕರ್ ಸ್ಮರಣೆ ನಮ್ಮೆಲ್ಲರದು, ಎಂಬ ಬಾವ ಎಲ್ಲರಲ್ಲಿ ಮನೆಮಾತಾಗಲಿ,
ಶಿಕ್ಷಣ-ಸಂಘಟನೆ-ಹೋರಾಟ ಮೂಲ ಮಂತ್ರವೆ skups ನ ಜೀವಾಳ
ವರದಿ ಡಾ. ಅವಿನಾಶ್ s ದೇವನೂರ ಆಳಂದ