ರಾಜ್ಯ ಮಟ್ಟದ “ಜ್ಞಾನ ವಿಶಾರದೆ ಸಮ್ಮಾನ್” ಪ್ರಶಸ್ತಿಗೆ ತತ್ವಪದಕಾರ ಮುರಗೆಪ್ಪ ಆರ್.ಹೆಚ್. ಹಣಮನಹಳ್ಳಿಯವರ ಕೃತಿ ಆಯ್ಕೆ
ರಾಜ್ಯ ಮಟ್ಟದ “ಜ್ಞಾನ ವಿಶಾರದೆ ಸಮ್ಮಾನ್” ಪ್ರಶಸ್ತಿಗೆ ತತ್ವಪದಕಾರ ಮುರಗೆಪ್ಪ ಆರ್.ಹೆಚ್. ಹಣಮನಹಳ್ಳಿಯವರ ಕೃತಿ ಆಯ್ಕೆ
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟ್ಟಿಗಿಯ ಶ್ರೀ ಉತ್ಸಕಾಂಬ ಪ್ರಕಾಶನ ಪ್ರಕಟಣೆಯ ಪ್ರಕಾರ — ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಜ್ಯ ಮಟ್ಟದ ಪುಸ್ತಕ ಪುರಸ್ಕಾರ “ಜ್ಞಾನ ವಿಶಾರದೆ ಸಮ್ಮಾನ್” ಪ್ರಶಸ್ತಿಗೆ ಸೇಡಂ ತಾಲೂಕಾ ಹಣಮನಹಳ್ಳಿಯ ತತ್ವಪದಕಾರ ಮುರಗೆಪ್ಪ ಆರ್.ಹೆಚ್. ಹಣಮನಹಳ್ಳಿ ಅವರ “ಚೆಲುವಿನೊಳಗಿಲ್ಲದ ಚೆಲುವ” ತತ್ವಪದ ಸಂಕಲನ ಆಯ್ಕೆಯಾಗಿದೆ.
ಈ ಕೃತಿ ೨೦೨೪ರಲ್ಲಿ ಕನ್ನಡ ನಾಡು ಪ್ರಕಾಶನ, ಕಲಬುರಗಿಯಿಂದ ಪ್ರಕಟವಾಗಿದ್ದು, ಕನ್ನಡ ನಾಡು ಓದುಗರ ಮತ್ತು ಲೇಖಕರ ಸಹಕಾರ ಸಂಘ ನಿಯಮಿತ ಸಂಸ್ಥೆಯಿಂದ ಪ್ರಸ್ತುತಪಡಿಸಲ್ಪಟ್ಟಿದೆ.
ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾದ ಶ್ರೀ ಹಾಚಿ ಇಟ್ಟಿಗಿ ಹಾಗೂ ಪ್ರಕಾಶಕರು ಈ ಕುರಿತು ಪ್ರಕಟಣೆ ನೀಡಿದ್ದು, ಮುರಗೆಪ್ಪ ಹಣಮನಹಳ್ಳಿಯವರ ಕೃತಿಯಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು, ಜೀವನ ತತ್ತ್ವಗಳು ಹಾಗೂ ನಾಡಿನ ನುಡಿಗಟ್ಟುಗಳ ಸಾರ್ಥಕ ಪ್ರಸ್ತುತಿ ಈ ಪ್ರಶಸ್ತಿಗೆ ಪಾತ್ರವಾಗಲು ಕಾರಣವೆಂದಿದ್ದಾರೆ.
ಈ ಸಾಧನೆಗೆ ಸಾಹಿತ್ಯ ಪ್ರೇಮಿಗಳು ಹಾಗೂ ತತ್ವಪದಾಭಿಮಾನಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀ ಉತ್ಸಕಾಂಬ ಪ್ರಕಾಶನ, ಇಟ್ಟಿಗಿ,ತಾಲೂಕು: ಹೂವಿನಹಡಗಲಿ,ಜಿಲ್ಲಾ: ವಿಜಯನಗರ
