ಕನ್ನಡ ನುಡಿಯಲ್ಲ ಜೀವ, ಭಾವ, ನಮ್ಮ ಉಸಿರು : ಸುರೇಶ ಶರ್ಮ

ಕನ್ನಡ  ನುಡಿಯಲ್ಲ ಜೀವ, ಭಾವ, ನಮ್ಮ ಉಸಿರು : ಸುರೇಶ ಶರ್ಮ

ಕನ್ನಡ ನುಡಿಯಲ್ಲ ಜೀವ, ಭಾವ, ನಮ್ಮ ಉಸಿರು : ಸುರೇಶ ಶರ್ಮ

ಕಲಬುರಗಿ : ‘ ಕನ್ನಡವು ಬರಿ ನುಡಿಯಲ್ಲ ಅದು ಜೀವ, ಭಾವ, ಉಸಿರು. ಕುವೆಂಪು ಹೇಳಿದಂತೆ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬ ಭಾವನೆ ಕನ್ನಡಿಗರು ಮರೆಯಬಾರದು 

ಎಂದು ಕಲಬುರಗಿ ವೃತ್ತದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾದ ಸುರೇಶ ಶರ್ಮ ಹೇಳಿದರು.

ಲೋಕೋಪಯೋಗಿ ಇಲಾಖೆ ವೃತ್ತಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ನಿರಂತರವಾಗಿ ಬಳಕೆಯಾಗಬೇಕು, ಅದರ ಸೊಬಗು ಸೌಂದರ್ಯದಿಂದ ಅಭಿಮಾನ ಹೆಚ್ಚಾಗುತ್ತದೆ. ಭಾಷೆಯನ್ನು ಉದಾಸೀನ ಮಾಡಿದರೆ ಆ ಭಾಷೆ ಸೊರಗಿ ಕಣ್ಮರೆಯಾಗುತ್ತದೆ. ಅದಕ್ಕೆ ಎಚ್ಚರ ವಹಿಸುವುದು ಪ್ರತಿಯೊಬ್ಬ ಕನ್ನಡಿಗರ’ ಜವಾಬ್ದಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಶ್ರೀ ಸೂರ್ಯಕಾಂತ್ ಕಾರ್ಬರಿ ಅಧೀಕ್ಷಕ ಅಭಿಯಂತರು, ಶ್ರೀ ಸುಭಾಷ್ ಕಾರ್ಯನಿರ್ವಕ ಅಭಿನಂದರು, ಶ್ರೀ ಮೊಹಮ್ಮದ್ ಇಬ್ರಾಹಿಂ ಕಾರ್ಯನಿರ್ವಕ ಅಭಿಯಂತರ, ಶ್ರೀ ಶಿವಶರಣಪ್ಪ ಪಟ್ಟಣಶೆಟ್ಟಿ ಸಹಾಯಕ ಕಾರ್ಯನಿರ್ವಕ ಅಭಿಯಂತರು ಶ್ರೀ ಶ್ರೀಮಂತ ಕೋಟೆ ಸಹಾಯಕ ಕಾರ್ಯನಿರ್ವಕ ಅಭಿಯಂತರು

ಶ್ರೀ ಕಾಳಪ್ಪ ಅಧ್ಯಕ್ಷರು ಇಂಜಿನಿಯರಿಂಗ್ ಸೇವಾ ಸಂಘ ಕಲ್ಬುರ್ಗಿ ಶ್ರೀ ಶರಣ್ ರಾಜ್ ಚಪ್ಪರಬಂದಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಕಲ್ಬುರ್ಗಿ,

ಶ್ರೀ ಮಾಂತೇಶ ರೂಡಗಿ. ಶ್ರೀ ಭೀಮಣ್ಣ ನಾಯಕ್. ಶ್ರೀ ಶಾಂತಪ್ಪ ನಂದೂರು, ಶ್ರೀ ಶರಣಗೌಡ ಮಾಲಿ ಪಾಟೀಲ್, ಶ್ರೀ ನಾಗರಾಜ್, ಶ್ರೀ ಮಲ್ಲಿಕಾರ್ಜುನ ಸಂಗೊಳ್ಳಿ ಶ್ರೀ ಶಶಿನಾಥ್, ಶ್ರೀ ಗುರುಶಾಂತ್. ಶ್ರೀ ಚಂದ್ರಶೇಖರ್ ಕಟ್ಟಿಮನಿ. ಶ್ರೀ ಉದಯಕುಮಾರ್ ಮಾಕ. ಶ್ರೀ ಉಮಾಕಾಂತ್, ಶ್ರೀ ಬಿ ಎಸ್ ಬಾಗೋಡಿ, ಶ್ರೀ ಬಸವರಾಜ್, ಶ್ರೀ ಕಮಲಾಕರ ಆನೆಗುಂದಿ, ಶ್ರೀ ಮಾಂತೇಶ ಪಾಟೀಲ್, ಶ್ರೀ ರಾಜಕುಮಾರ್ ಶ್ರೀ ಮಜಾರ್, ಶ್ರೀಮತಿ ಕುಂದಮ್ಮ, ಶ್ರೀಮತಿ ಮಹಾದೇವಿ, ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು