ಬಸವಕಲ್ಯಾಣದಲ್ಲಿ ಶಿವಾಜಿ ಮಹಾರಾಜರ ಜಯಂತಿ ತಾಲೂಕಾಡಳಿತ ವತಿಯಿಂದ ನಿಗದಿ ಒಂದೆಡೆ ಇದ್ದರೆ, ಆಯೋಜಕರು ಆಚರಿಸಿದ್ದು ಮತ್ತೊಂದೆಡೆ.

ಬಸವಕಲ್ಯಾಣದಲ್ಲಿ ಶಿವಾಜಿ ಮಹಾರಾಜರ ಜಯಂತಿ ತಾಲೂಕಾಡಳಿತ ವತಿಯಿಂದ ನಿಗದಿ ಒಂದೆಡೆ ಇದ್ದರೆ, ಆಯೋಜಕರು ಆಚರಿಸಿದ್ದು ಮತ್ತೊಂದೆಡೆ.
ವರದಿ: ವೀರಣ್ಣ ಮಂಠಾಳಕರ್
ಕಲ್ಯಾಣ ಕಹಳೆ ವರದಿ
ಬಸವಕಲ್ಯಾಣ: ನಗರದಲ್ಲಿ ಬುಧುವಾರ ಫೆ. 19ರಂದು ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನಿಗದಿ ಮಾಡಿರುವ ಸ್ಥಳ ಬಸವೇಶ್ವರ ವೃತ್ತದ ಬಿಕೆಡಿಬಿ ಕಲ್ಯಾಣ ಮಂಟಪ ಎಂದು ಗುರುತಿಸಿ ಆಚರಿಸಿದ್ದು ಶಿವಾಜಿ ಪಾರ್ಕ್ ವೃತ್ತದ ಆವರಣದಲ್ಲಿ. ಈ ಪ್ರಮಾದ ನಡೆದಿದ್ದು ತಾಲೂಕಾ ಆಡಳಿತದಿಂದಲೋ ಜಯಂತಿ ಆಚರಣೆಯ ಆಯೋಜಕರದ್ದೋ ಎನ್ನುವಂತಾಗಿದೆ.
ಈ ಒಂದು ಪ್ರಶ್ನೆ ಎತ್ತಿದ್ದು ಆಲ್ ಇಂಡಿಯಾ ಸಮತಾ ಸೈನಿಕ ದಳದ ತಾಲೂಕಾಧ್ಯಕ್ಷ ಮಾರತಿ ಫುಲೆ ಅವರು. ತಾಲೂಕಾ ಆಡಳಿತದ ದಂಡಾಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಆಮಂತ್ರಣ ಪತ್ರಿಕೆ ಪಡೆದ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ಗಣ್ಯರು, ವಿವಿಧ ರಾಜಕೀಯ ಪ್ರತಿನಿಧಿಗಳು ಸ್ಥಳ ಹುಡುಕಾಟದಲ್ಲಿ ಪರದಾಡುವಂತಾಯಿತು ಎಂದು ಅವರು ಬಲವಾಗಿ ದೂರಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವತಃ ತಮಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ತಾಲೂಕಾ ಆಡಳಿತ ವತಿಯಿಂದ ಬಂದಿತ್ತು. ಆಮಂತ್ರಣ ಪತ್ರಿಕೆಲ್ಲಿರುವಂತೆ ಬಿಕೆಡಿಬಿ ಕಲ್ಯಾಣ ಮಂಟಪಕ್ಕೆ ಹಲವು ಬಾರಿ ಹೋದರೆ ಅಲ್ಲಿ ಗೌಣವಾದ ವಾತಾವರಣ ಕಂಡು ನಿಬ್ಬೆರಗಾಗಿ ನನ್ನಂತೆ ಹಲವರು ಓಡಾಟದಲ್ಲಿ ಸುಸ್ತಾಗಿ ಅನೇಕರು ಕಾರ್ಯಕ್ರಮಕ್ಕೆ ಹೋಗದಂತೆ ಬೇಸರವಾಯಿತು ಎಂದಿದ್ದಾರೆ.
ಈ ಒಂದು ಪ್ರಮಾದ ನಡೆದಿದ್ದು ತಾಲೂಕಾ ಆಡಳಿತದೋ ಅಥವಾ ಜಯಂತ್ಯೋತ್ಸವ ಆಚರಣೆಯ ಆಯೋಜಕರ ನಿರ್ಲಕ್ಷ ಧೋರಣೆಯೋ ಎಂದು ಪ್ರಶ್ನಿಸಿದ ಅವರು ಮಹಾತ್ಮ, ಪುಣ್ಯ ಪುರುಷರ ಜಯಂತಿ ಆಚರಣೆಗಳು ಇದೇ ರೀತಿ ಮುಂದೊರೆದರೆ ಇದಕ್ಕೆ ಹೊಣೆಗಾರರು ಯಾರು? ನಮ್ಮಂಥ ಸಾಮಾಜಿಕ ಜವಾಬ್ದಾರಿಯುಳ್ಳ ಪ್ರತಿನಿಧಿಗಳಿಗೆ ಹೀಗಾದಾರೆ ಇನ್ನೂ ಸಾಮಾನ್ಯ ಜನತೆಗೆ ಸಮಾರಂಭಗಳು ಯಾವ ರೀತಿ ದಾರಿ ತಪ್ಪಿಸಬಹುದು ಎಂದಿದ್ದಾರೆ.
ಅದರಂತೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟವಾದ ಗಣ್ಯಮಾನ್ಯರ ಹೆಸರು, ರಾಜಕೀಯ ಪ್ರತಿನಿಧಿಗಳ ಹೆಸರಿರುವ ಹಲವರ ಅನುಪಸ್ಥಿತಿಯಲ್ಲಿ ಲಭ್ಯವಿರುವ ಸ್ಥಳೀಯ ವಿವಿಧ ರಾಜಕೀಯ ಮುಖಂಡರುಗಳು ಭಾಗವಹಿಸುವ ಅನಿವಾರ್ಯತೆ ಕಂಡು ಬಂದಿತ್ತು.
ಈ ರೀತಿಯ ಆಮಂತ್ರಣ ಪತ್ರಿಕೆಯಲ್ಲಿರುವಂತೆ ಸ್ಥಳ ನಿಗದಿಯಂಯಂತೆ ಬದಲಾವಣೆ ಆಗದಂತೆ ತಾಲೂಕಾ ಆಡಳಿತ ಹಾಗೂ ಜಯಂತಿ ಆಚರಣೆಗಳ ಆಯೋಜಕರು ಮುನ್ನಚ್ಚರಿಕೆ ವಹಿಸಿದರೆ ಯಾವುದೇ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತವೆ. ಇದರಿಂದ ನಮಗೂ ಖುಷಿಯಾಗುತ್ತದೆ ಎಂದು ಆಲ್ ಇಂಡಿಯಾ ಸಮತಾ ಸೈನಿಕ ದಳದ ತಾಲೂಕಾಧ್ಯಕ್ಷ ಮಾರುತಿ ಫುಲೆ ವಿನಂತಿಸಿದ್ದಾರೆ.