ಭೋವಿ ವಡ್ಡರ್ ಎಂದು ನಮೂದಿಸಿ ; ಹೊನ್ನಮ್ಮ ಹಾಗರಗಿ

ಭೋವಿ ವಡ್ಡರ್ ಎಂದು ನಮೂದಿಸಿ ; ಹೊನ್ನಮ್ಮ ಹಾಗರಗಿ
ಕಲಬುರಗಿ: ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರ ವರೆಗೆ ನಡೆಯುತ್ತಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಭೋವಿವಡ್ಡರ್ ಸಮುದಾಯದ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರಾದ ಹೊನ್ನಮ್ಮ ಹಾಗರಗಿ ಅವರು ಕರೆ ನೀಡಿದ್ದಾರೆ.
ಸಮೀಕ್ಷೆಯಲ್ಲಿ ಕಾಲಂ ನಂ.08ರಲ್ಲಿ 'ಧರ್ಮಹಿಂದೂ', ಕಾಲಂ ನಂ.09ರಲ್ಲಿ 'ಜಾತಿಭೋವಿ', ಕಾಲಂ ನಂ.10ರಲ್ಲಿ 'ಉಪಜಾತಿಭೋವಿ ವಡ್ಡರ್/ವಡ್ಡರ್' ಮತ್ತು ಕಾಲಂ ನಂ.11ರಲ್ಲಿ 'ಕುಲಕಸುಬುಕಲ್ಲು ಗಣಿಗಾರಿಕೆ, ಕಲ್ಲು ಒಡೆಯುವುದು, ಕಟ್ಟಡ ಕಾರ್ಮಿಕ, ಕಲ್ಲುಕುಟಿಗ, ಗುಡಿಗೋಪುರ ಕಟ್ಟುವುದು ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದ್ದಾರೆ. ಅಧಿಕಾರಿಗಳಿಗೆ ಕೇಳುವ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ದೂರದ ಊರುಗಳಿಗೆ ಕೆಲಸಕ್ಕೆ ತೆರಳಿರುವವರ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಒಳಮೀಸಲಾತಿಯಲ್ಲಿ ಸಮುದಾಯದ ಜನಸಂಖ್ಯೆ ಕಡಿಮೆಯಾಗಿ ತೋರದಂತೆ ಜಾಗೃತಿ ಮೂಡಿಸುವಂತೆ ಹೊನ್ನಮ್ಮ ಹಾಗರಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ
.