ಕರುನಾಡು ಕಂಡ ಶ್ರೇಷ್ಠ ಕಲಾವಿದ ಕೆ.ವಿ.ನಾಗರಾಜ ಮೂರ್ತಿ: ಸಂಗಮೇಶ ಎನ್ ಜವಾದಿ.

ಕರುನಾಡು ಕಂಡ ಶ್ರೇಷ್ಠ ಕಲಾವಿದ ಕೆ.ವಿ.ನಾಗರಾಜ ಮೂರ್ತಿ: ಸಂಗಮೇಶ ಎನ್ ಜವಾದಿ.
ಕರುನಾಡು ಕಂಡ ಶ್ರೇಷ್ಠ ಕಲಾವಿದರು, ಅನನ್ಯ ರಂಗ ಸಂಘಟನೆಕಾರರು, ರಂಗಕರ್ಮಿ, ಕನ್ನಡಪರ ಹೋರಾಟಗಾರರು,ನೇರ ನುಡಿಯ ಚಿಂತಕರು, ಬಹುಮುಖಿ ಸಾಧಕರು ಕೆ.ವಿ.ನಾಗರಾಜ ಮೂರ್ತಿಯವರು ಎಂದು ಸಾಹಿತಿ, ಪ್ರಗತಿಪರ ಚಿಂತಕರಾದ ಸಂಗಮೇಶ ಎನ್ ಜವಾದಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅನೇಕ ಜವಾಬ್ದಾರಿಗಳು ಈ ಹಿಂದೆ ಹೊತ್ತುಕೊಂಡು ಕೆಲಸ ಮಾಡಿರುವ ಅನುಭವ ಕೆ.ವಿ.ನಾಗರಾಜ ಮೂರ್ತಿ ಸರ್ ರವರದಾಗಿದೆ.
ಓದುವ ದಿನಗಳಲ್ಲಿ ರಂಗ ಚಟುವಟಿಕೆ ಮತ್ತು ವಿದ್ಯಾರ್ಥಿ ಸಂಘಟನೆ ಅವರ ಪ್ರಮುಖ ಆಸಕ್ತಿ ಕೇಂದ್ರಗಳಾಗಿ ರೂಪುಗೊಂಡವು. ವಿದ್ಯಾರ್ಥಿ ಸಂಘಟನೆಯಲ್ಲಿರುವಾಗ ಇವರ ಸಕ್ರಿಯ ಹೋರಾಟ ಚಿಂತನೆ, ದೇವರಾಜ ಅರಸು ಅವರ ಮೆಚ್ಚುಗೆ ಮತ್ತು ಇವರ ಹೋರಾಟಕ್ಕೆ ಪರಿಹಾರ ಬೆಂಬಲದ ಯಶಸ್ಸು ಕೂಡ ತಂದುಕೊಟ್ಟಿತು. ಸರ್ಕಾರಿ ಕಾಲೇಜಿನಿಂದ ನಾಗರಾಜಮೂರ್ತಿ ಅವರು ಮೊದಲು ಮಾಡಿಸಿದ ನಾಟಕ ತುರ್ತುಪರಿಸ್ಥಿತಿ ವಾತಾವರಣದಲ್ಲಿ 'ಧನ್ವಂತರಿ ಚಿಕಿತ್ಸೆ'. ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಪ್ರಾರಂಭಿಕ ಅಧ್ಯಕ್ಷರಾಗಿಯೂ ಅಪಾರ ಕೆಲಸ ಮಾಡಿದವರು.
ಮೂರ್ತಿ ಸರ್ ರವರು ಅಂದಿನ ದಿನದಲ್ಲಿ ನಿರ್ದೇಶಿಸಿದ 'ಕಟ್ಟು' ಅಂತಹ ನಾಟಕಗಳೂ ಸರ್ವರ ಗಮನ ಸೆಳೆದಿದ್ದವು. ಈ ಮಧ್ಯೆ ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಸಣ್ಣ ರೀತಿಯಲ್ಲಿ ನಡೆಯುತ್ತಿದ್ದ ಗೋಕಾಕ್ ಚಳವಳಿಗೆ ಮೊದಲ ಬಾರಿಗೆ ಒಂದು ಸಾವಿರಕ್ಕೂ ಹೆಚ್ಚಿನ ಜನರ ಬಲದ ಕಾವು ದೊರೆತದ್ದು ನಾಗರಾಜಮೂರ್ತಿ ಅವರ ನೇತೃತ್ವದ ಸರ್ಕಾರಿ ಕಾಲೇಜಿನ ಸಂಘಟನೆಯಿಂದಎನ್ನುವುದು ಯಾರು ಮರೆಯುವಂತಿಲ್ಲ.
ಮುಂದೆ ಡಾ. ರಾಜಕುಮಾರ್ ರವರ ಆಗಮನದಿಂದ ಆ ಹೋರಾಟ ದೊಡ್ಡ ವ್ಯಾಪ್ತಿ ಪಡೆದದ್ದು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ.
ಭಾರತ ಯಾತ್ರಾ ಕೇಂದ್ರ ಸಾಂಸ್ಕೃತಿಕ ಸಂಘಟನೆಯ ಮೂಲಕವೂ ಪುಸ್ತಕ ಪ್ರಕಟಣೆ, ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ, ಬೀದಿ ನಾಟಕಗಳು, ನಾಟಕೋತ್ಸವಗಳು, ವಿದ್ಯಾರ್ಥಿ ನಾಟಕ ಸ್ಪರ್ಧೆಗಳು ಹೀಗೆ ನಾಗರಾಜಮೂರ್ತಿ ರವರ ರಂಗ ಚಟುವಟಿಕೆಗಳು ವ್ಯಾಪಕವಾದದ್ದು.
ನಾಗರಾಜಮೂರ್ತಿ ರವರು ಮುಕ್ತ ಮುಕ್ತ ಧಾರಾವಾಹಿಯಲ್ಲಿನ ಪ್ರಸಿದ್ಧ ಪಾತ್ರ ನಿರ್ವಹಣೆಯೂ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಸಮ್ಮೇಳನಗಳನ್ನು ನಡೆಸಿದ್ದಾರೆ. ನಾಟಕ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಅಂಕಣ ಬರೆದಿದ್ದಾರೆ. ಸರ್ಕಾರಿ ಸಾಂಸ್ಕೃತಿಕ ಉತ್ಸವಗಳಾದ ಹಂಪಿ ಉತ್ಸವ, ಜಾನಪದ ಜಾತ್ರೆ ಮತ್ತು ಅನೇಕ ರೀತಿಯ ಕಾರ್ಯಕ್ರಮ ಯೋಜನೆಗಳಿಗೆ ಹೊಸ ಸ್ಪರ್ಶವುಳ್ಳ ಸಾಂಸ್ಕೃತಿಕ ಮೆರುಗು ಮೂಡಿಸಿದ್ದಾರೆ. ತಾವೂ ತಮ್ಮ ತಂದೆಯರ ಹೆಸರಲ್ಲಿ ಟ್ರಸ್ಟ್ ರಚಿಸಿ,ಸರ್ಕಾರಿ ಶಾಲೆಯ ಮಕ್ಕಳಿಗಾಗಿ ರಂಗೋತ್ಸವ, ರಂಗ ಕಲಿಕಾ ಶಿಬಿರ, ರಂಗ ಮಂದಿರ ನಿರ್ಮಾಣ ಮುಂತಾದ ಮಹತ್ವದ ಕೆಲಸಗಳನ್ನೂ ನಡೆಸುತ್ತಿದ್ದಾರೆ. ನಾಗರಾಜಮೂರ್ತಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳು ಸಂದಿವೆ ಎಂದರು.
ಇನ್ನು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಸಂರಕ್ಷಣೆಗಾಗಿ ಟೊಂಕಕಟ್ಟಿಕೊಂಡು ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಸಧ್ಯ
ನಾಗರಾಜಮೂರ್ತಿ ರವರು ಬೆಂಗಳೂರು ನಗರ ಜಿಲ್ಲಾ ಶರಣ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ನಿರಂತರವಾಗಿ ಸಲ್ಲಿಸುತ್ತಿದ್ದಾರೆ.
ಜೊತೆಗೆ ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಟಕ ಸೀರಿವಂತಿಕೆ, ಕನ್ನಡ ಸಾಹಿತ್ಯ, ಶರಣ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಸದ್ದುಗದ್ದಲವಿಲ್ಲದೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಂದಹಾಗೆ ಕೆ.ವಿ.ನಾಗರಾಜ ಮೂರ್ತಿ ಸರ್ ರವರ ಪ್ರಾಮಾಣಿಕ ಸೇವೆ ಮಾಡುತ್ತಿರುವುದು ನಾಡಿಗೆ ಗೊತ್ತಿರುವ ಸಂಗತಿಯೇ ಆಗಿದೆ.
ಕಾಂಗ್ರೆಸ್ ಪಕ್ಷ ಇಂತಹ ನಿಸ್ವಾರ್ಥ ಮನೋಭಾವ ಹೊಂದಿರುವ ಶ್ರೇಷ್ಠ ಕಲಾ ಸೇವಕರನ್ನು ಗುರುತಿಸುವುದು ಸಹ ಅದರ ಪರಮ ಕರ್ತವ್ಯ ವೆಂದು ನಾವು ಭಾವಿಸಿದ್ದೇವೆ. ಅದಕ್ಕಾಗಿಯೇ
ಇವರ ನಿಸ್ವಾರ್ಥ ಸೇವೆ ಹಾಗೂ ಜನಪರ ಕಾಳಜಿ, ಕಲಾ ಸೇವೆಯನ್ನು ನಾಡಿನ ಉದ್ದಗಲಕ್ಕೂ ತಲುಪಬೇಕಾಗಿದೆ.
ಆದಾಕಾರಣ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ (ಎಂಎಲ್‌ಸಿ )ಸ್ಥಾನಗಳಿಗೆ ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ. ಇದರಲ್ಲಿ ಒಂದು ಸ್ಥಾನಕ್ಕೆ ಕೆ.ವಿ.ನಾಗರಾಜ ಮೂರ್ತಿ ರವರ ನಿಸ್ವಾರ್ಥ ಸೇವೆ ಹಾಗೂ ಕಲಾ ಸೇವೆ ಪರಿಗಣಿಸಿ, ವಿಧಾನ ಪರಿಷತ್ತಿಗೆ ನೇಮಕಾತಿ ಮಾಡಬೇಕು.
ಮಾಡುವ ಮುಖಾಂತರ ಸಾವಿರಾರು ಕಲಾ ಅಭಿಮಾನಿಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಶ್ರೀಯುತರನ್ನು ಪರಿಗಣಿಸಲು ಈ ಮೂಲಕ ಮಾನ್ಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರವರಿಗೂ ಅದೇ ರೀತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ರವರು, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು, ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ರವರಿಗೂ ವಿನಂತಿಯ ಪೂರ್ವಕವಾಗಿ ಸಂಗಮೇಶ ಎನ್ ಜವಾದಿ ರವರು ಒತ್ತಾಯಿಸಿದ್ದಾರೆ.