ಸಮಸ್ಯೆ ಬಗೆಹರಿಸಿದ ಸಚಿವ ಶ್ರೀ ಈಶ್ವರ್ ಖಂಡ್ರೆ ಕೃತಜ್ಞತೆ ಸಲ್ಲಿಸಿದ ಡಿಗ್ಗಿ ಗ್ರಾಮಸ್ಥರು
ಸಮಸ್ಯೆ ಬಗೆಹರಿಸಿದ ಸಚಿವ ಶ್ರೀ ಈಶ್ವರ್ ಖಂಡ್ರೆ ಕೃತಜ್ಞತೆ ಸಲ್ಲಿಸಿದ ಡಿಗ್ಗಿ ಗ್ರಾಮಸ್ಥರು
ಅನೇಕ ದಿನಗಳ ಬೇಡಿಕೆ ಈಡೇರಿದ ಹರ್ಷದಲ್ಲಿ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರಿಗೆ ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು
ಕಮಲನಗರ:ತಾಲೂಕಿನ ಡಿಗ್ಗಿ ಮಾರ್ಗ ಉದ್ಗೀರ್ ಕಮಲನಗರ ಭಾಲ್ಕಿ ಬೀದರ್ ಹೈದ್ರಾಬಾದ್ ಬಸ್ಸುಗಳು ಓಡಾಡುತ್ತವೆ. ಅವು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸುತ್ತವೆ. ಮಾರ್ಗ ಮಧ್ಯದಲ್ಲಿ ಬರುವ ಡಿಗ್ಗಿ ಗ್ರಾಮಕ್ಕೆ ಕೆಲವು ವರ್ಷಗಳಿಂದ ಬಸ್ ಡ್ರೈವರ್ ಗಳು ಕೆಲವು ಬಸ್ಸಗಳನ್ನು ನಿಲ್ಲಿಸುತ್ತಿರಲಿಲ್ಲ. ಪಕ್ಕದ ಬಸ್ ನಿಲ್ದಾಣಗಳಾದ ಕಮಲ್ನಗರ್ ಮತ್ತು ಹೊಳೆಸಮುದ್ರ ದಲ್ಲಿ ನಿಲ್ಲಿಸುತ್ತಿದವು.ಊರಿಗೆ ಬಸ್ ಇದ್ದರೂ ಕೂಡ ಅದರ ಉಪಯೋಗ ರಾತ್ರಿ ವೇಳೆ ಹೆಚ್ಚು ಸಮಸ್ಯೆ ಕಾಡುತ್ತಿದ್ದವು. ಅಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಹೋಗಿ ಬರಲು ಅನೇಕ ತೊಂದ್ರೆಗಳು ಕಾಡುತ್ತಿದ್ದವು.
ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಜೀವಶಾಸ್ತ್ರ ಹಾಗೂ ಪರಿಸರ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಡಿಗ್ಗಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಗ್ರಾಮದ ಮಹಿಳೆಯೊಬ್ಬರು ನಮ್ಮ ಊರಿಗೆ ಬಸ್ಸು ನಿಲ್ಲುತ್ತಿಲ್ಲ ಹೇಗೆ ಮಾಡಬೇಕೆಂದು ಸಮಸ್ಯೆಯನ್ನು ತೋಡಿಕೊಂಡಿದ್ದಾಗ ಸಚಿವರು ಸ್ಥಳದಲ್ಲಿಯೇ ಶೀಘ್ರದಲ್ಲೇ ಈ ಸಮಸ್ಯೆಯನ್ನು ನಿವಾರಣೆ ಮಾಡಿರುತ್ತಾರೆ.
ಈ ಸಮಸ್ಯೆಯನ್ನು ಬಗ್ಗೆ ಹರಿಸಿದಕ್ಕಾಗಿ ಗ್ರಾಮದ ವಿಧ್ಯಾರ್ಥಿಗಳು ಮಹಿಳೆಯರು ಗ್ರಾಮಸ್ಥರು ಎಷ್ಟೋ ದಿನಗಳವರೆಗೆ ಬಗ್ಗೆ ಹರಿಯದ ಸಮಸ್ಯೆಯನ್ನು ನಿವಾರಿಸಿದಕ್ಕಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.