ಕೃಷಿ ಪತ್ತಿನ ಸಹಕಾರ ಸಂಘದ ಸೌಲಭ್ಯಗಳು ಸದುಪಯೋಗ ಪಡೆದುಕೊಳ್ಳಿ,: ಶಾಸಕ ಮತ್ತಿಮಡು.

ಕೃಷಿ ಪತ್ತಿನ ಸಹಕಾರ ಸಂಘದ ಸೌಲಭ್ಯಗಳು ಸದುಪಯೋಗ ಪಡೆದುಕೊಳ್ಳಿ,: ಶಾಸಕ  ಮತ್ತಿಮಡು.

ಕೃಷಿ ಪತ್ತಿನ ಸಹಕಾರ ಸಂಘದ ಸೌಲಭ್ಯಗಳು ಸದುಪಯೋಗ ಪಡೆದುಕೊಳ್ಳಿ,: ಶಾಸಕ ಬಸವರಾಜ ಮತ್ತಿಮಡು.

ಶಹಾಬಾದ್: ರೈತರ ಮತ್ತು ಕೃಷಿ ಆಸಕ್ತಿ ಉಳ್ಳವರು ಹೈನುಗಾರಿಕೆ ಮತ್ತು ಕುರಿಗಳು ಸಾಕಾಣಿಕೆ ಮಾಡಲು ಆರ್ಥಿಕ ನೆರವು ಪಡೆಯಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಿದ್ಧ ಇವೆ, ಇವುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ನಗರದ ಹರೇ ಶಹಾಬಾದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಾಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳಿಂದ ಸಾಲವನ್ನು ಪಡೆದು ನಿಯಮಿತವಾದ ಸಮಯಕ್ಕೆ ಪಾವತಿಸಿ, ಇದರಿಂದ ಇನ್ನೊಬ್ಬರಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜಿ. ನಾಯಕ ಮಾತನಾಡಿ, ಸಾಹಕಾರ ಸಂಘಗಳಿಂದ 2 ರಿಂದ 10 ಹತ್ತು ಲಕ್ಷದವರೆಗೆ ರೈತರಿಗೆ ಸಾಲ ಪಡೆಯಬಹುದು, ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷದವರೆಗೆ ಸಾಲ ಪಡೆಯಬಹುದು, ಹೀಗೆ ಹಲವಾರು ಸೌಲಭ್ಯಗಳು ಪಡೆಯಲು ಅವಕಾಶ ಇದೆ, ಹೆಚ್ಚಿನ ಪ್ರಮಾಣದ ಸದಸ್ಯರನ್ನಾಗಿ ಮಾಡಿ ಸಾಲ ಸೌಲಭ್ಯಗಳು ಕಡಿಮೆ ಬಡ್ಡಿ ದರದಲ್ಲಿ ಪಡೆದು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಂಟಿ ನಿಬಂಧಕರಾದ ವಿಶ್ವನಾಥ ಮಲಕೂಡ ಹಾಗೂ ಕಾಡ ಅಧ್ಯಕ್ಷ ಡಾ. ಎಂ.ಎ.ರಶೀದ್ ಮಾತನಾಡಿದರು.

ವೇದಿಕೆ ಮೇಲೆ ನಗರಸಭೆ ಅಧ್ಯಕ್ಷ ಚಂಪಾಬಾಯಿ ರಾಜು ಮೇಸ್ತ್ರಿ, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳುಗೋಳ್ಕರ, ಶಿವಾನಂದ ಮಾನಕರ, ಕಿಶೋರ್ ಪಾಟೀಲ, ಗುರುರಾಜ್ ಮಾಲಿ ಪಾಟೀಲ, ಭೀಮರಾವ ಸೂಗುರ, ಮಹಾಂತಗೌಡ ಪಾಟೀಲ, ಮಲ್ಲಿಕಾರ್ಜುನ ವಾಲಿ, ಶಿವಕುಮಾರ ನಾಟಿಕರ, ಬಸಣ್ಣ ಹಡಪದ, ಬಸವಣಪ್ಪ ವಾಲಿ, ಶರಣಪ್ಪ ಕೊಡದೂರು, ಸದಾನಂದ ಕುಂಬಾರ ಉಪಸ್ಥಿತರಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶಿವಕುಮಾರಗೌಡ ಎನ. ಪಾಟೀಲ ವಹಿಸಿದರು. ಸಂಘದ ನಿರ್ದೇಶಕರು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಮುಖ್ಯ ಕಾರ್ಯನಿರ್ವಾಹಕ ಸಂತೋಷಗೌಡ ಪಾಟೀಲ ಸ್ವಾಗತಿಸಿದರು. ಗಿರಿಮಲ್ಲಪ್ಪ ವಳಸಂಗ ನಿರೂಪಿಸಿ ವಂದಿಸಿದರು.

ಶಹಾಬಾದ ವರದಿ:- ನಾಗರಾಜ್ ದಂಡಾವತಿ