ಹೀರಾಪೂರ ಸರ್ಕಲ್‌ನಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಹೀರಾಪೂರ ಸರ್ಕಲ್‌ನಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಹೀರಾಪೂರ ಸರ್ಕಲ್‌ನಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಕಲಬುರಗಿ: ಡಾ. ಬಿ. ಆರ್ ಅಂಬೇಡ್ಕರ್ ವೃತ್ತ ಹೀರಾಪೂರ ಸರ್ಕಲ್‌ನಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಬಹಿರಂಗ ಸಭೆಯನ್ನು ಮಾಜಿ ಶಾಸಕರಾದ ದತ್ತತ್ರಾಯ ಪಾಟೀಲ್ ರೇವೂರ ಉದ್ಘಾಟಿಸಿದರು. ಉಪನ್ಯಾಸಕರಾಗಿ ಆಗಮಿಸಿದ ವಿಜಯಕುಮಾರ ಸಾಲಿಮನಿ ಅವರು ಮಾತನಾಡಿದರು. ಅತಿಥಿಗಳಾಗಿ ವಿಶಾಲ ಧರ್ಗಿ, ರಾಜೀವ್ ಜಾನೆ, ಹನುಮಂತ ಇಟಗಿ, ದಿನೇಶ್ ದೊಡ್ಡಮನಿ, ಅಶೋಕ ವೀರನಾಯಕ, ಹಣಮಂತ ಬೋಧನ್, ಸೋಲಾಪೂರ ಜಿಎಂ ಗ್ರೂಪ್ಪಿನ ಸಂಸ್ಥಾಪಕ ಬಾಳಸಾಹೇಬ ವಾಘಮೋರೆ, ರಮೇಶ್ ಪಟ್ಟೆದಾರ, ಧರ್ಮಣ್ಣಾ ಕೋಣೆಕರ್, ಶೀವಕುಮಾರ ಜಾಲವಾದ, ಕಾರ್ಯಕ್ರಮದ ಆಯೋಜಕರಾದ ವಿಠ್ಠಲ್ ಚಿಕಣಿ, ಮಲ್ಲಿಕಾರ್ಜುನ ಕಟ್ಟಿಮನಿ, ಶಶಿಧರ್ ಡಿಪ್ಟಿ, ನವೀನ ಸಾಮ್ರಾಟ್, ಅಶೋಕ, ಶಿವಾನಂದ ಬುಕ್ಕನ್, ಶರಣಬಸವ ಹೆಗಡೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.