ಸರ್ವೇ ಜನ ಸುಖಿನೋ ಭವಂತು ಎಂಬ ವಾಕ್ಯ ಪರಿಪಾಲಿಸಿದ ಕೇಂದ್ರ ಸರ್ಕಾರ ಶಶೀಲ್ ಜಿ ನಮೋಶಿ
ಸರ್ವೇ ಜನ ಸುಖಿನೋ ಭವಂತು ಎಂಬ ವಾಕ್ಯ ಪರಿಪಾಲಿಸಿದ ಕೇಂದ್ರ ಸರ್ಕಾರ ಶಶೀಲ್ ಜಿ ನಮೋಶಿ
ಈ ಬಜೆಟ್ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ ೧೦ ಕ್ಷೇತ್ರಗಳ ಅಭಿವೃದ್ಧಿ
`ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು ೩ ಲಕ್ಷದಿಂದ ೫ ಲಕ್ಷಕ್ಕೆ ಹೆಚ್ಚಳ
`ಇಂಡಿಯಾ ಪೋಸ್ಟ್ ಅನ್ನು ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ
ನಂತರ ಸ್ಥಾಪಿಸಲಾದ ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಹೆಚ್ಚಳ
ಎಸ್‌ಸಿ/ಎಸ್‌ಟಿ ಸಮುದಾಯಗಳ ೫ ಲಕ್ಷ ಮಹಿಳೆಯರಿಗೆ ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಸಾಲ ಸೌಲಭ್ಯಕ್ಕೆ ಯೋಜನೆ
`ಯೂರಿಯಾ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲು ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್ ಸ್ಥಾಪನೆ
'ಉಡಾನ್ ಪ್ರಾದೇಶಿಕ ಸಂಪರ್ಕ ಯೋಜನೆಯು ೧.೫ ಕೋಟಿ ಮಧ್ಯಮ ವರ್ಗದವರಿಗೆ ವೇಗದ ಪ್ರಯಾಣದ ಆಕಾಂಕ್ಷೆಗಳನ್ನು ಪೂರೈಸಲು ಅನುವು ಮಾಡಿಕೊಟ್ಟಿದೆ... ಈ ಯಶಸ್ಸಿನಿಂದ ಪ್ರೇರಿತರಾಗಿ, ೧೨೦ ಹೊಸ ತಾಣಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಉಡಾನ್ ಯೋಜನೆಯನ್ನು ಪ್ರಾರಂಭಿಸಲಾಗುವುದು.
* ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್ ರೂಪದ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸಲು *ಭಾರತೀಯ ಭಾಷಾ ಪುಸ್ತಕ ಯೋಜನೆ* ಯನ್ನು ಜಾರಿಗೆ ತರಲಾಗುವುದು.
* ದೇಶಾದ್ಯಂತ 1 ಲಕ್ಷ ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಮಧ್ಯಮ ವರ್ಗದ ಮನೆ ಖರೀದಿದಾರರಿಗೆ 15,000 ಕೋಟಿ ರೂಪಾಯಿಗಳ *'ಸ್ವಾಮಿ ನಿಧಿ-2* ಘೋಷಣೆ.
* ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಇದರೊಂದಿಗೆ ದೇಶದಲ್ಲಿ ಕ್ಯಾನ್ಸರ್ ಔಷಧಿಗಳ ಬೆಲೆ ಕಡಿಮೆ ಮಾಡುವುದಲ್ಲದೆ ಈ ಔಷಧಿಗಳ ಮೇಲೆ ತೆರಿಗೆ ವಿನಾಯಿತಿ ನೀಡಲಾಗುವುದು.
ದ್ವಿದಳ ಧನ್ಯಗಳಾದ ತೊಗರಿ, ಉದ್ದು ಹಾಗೂ ಮಸೂರ್ ಗಳ ಉತ್ಪಾದಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ 6 ವರ್ಷಗಳ *"ದ್ವಿದಳ ಧಾನ್ಯಗಳ ಆತ್ಮನಿರ್ಭರ ಮಿಷನ್"* ಅನ್ನು ಜಾರಿಗೆ ತರುವ ಮೂಲಕ ಮುಂದಿನ 4 ವರ್ಷಗಳಿಗೆ ಬೇಕಾಗುವಷ್ಟು ಉತ್ಪಾದನೆಯ ಗುರಿಯನ್ನು ತಲುಪುವ ಉದ್ದೇಶ.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ* ಯನ್ನು ಜಾರಿಗೆಗೊಳಿಸುವ ಮೂಲಕ ದೇಶದ ಆಯ್ದ 100 ಜಿಲ್ಲೆಗಳಲ್ಲಿನ ಪಂಚಾಯತ್ ಮತ್ತು ಬ್ಲಾಕ್ ಗಳ ಮಟ್ಟದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಬೆಳೆಗಳ ವೈವಿಧ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವುದು ಹಾಗೂ ಉತ್ಪಾದಿತ ಸಂಗ್ರಹಣೆಯನ್ನು ಹೆಚ್ಚಿಸುವುದು.
ದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಐವತ್ತು ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿ ಮುಂದಿನ 5 ವರ್ಷಗಳಲ್ಲಿ ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸಲು ಪ್ರಾಮುಖ್ಯತೆ ನೀಡುವುದು.
ದೇಶದ 50 ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು ಉನ್ನತಿಕರಿಸಿ ಅಂತರಾಷ್ಟ್ರೀಯವಾಗಿ ಗುರುತಿಸಲು ಹಾಗೂ ಪ್ರವಸ್ಯೋದ್ಯಮದ ಆದಾಯವನ್ನು ಹೆಚ್ಚಿಸುವ ಗುರಿ.
ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ೧೦,೦೦೦ ಸೀಟುಗಳು ಸೇರ್ಪಡೆ
ಇಂತಹ ಅನೇಕ ಜನೋಪಯೋಗಿ ಬಡವರ, ಮಧ್ಯಮವರ್ಗ, ಯುವಕರ ಪಾಲಿಗೆ ಆಶಾದಾಯಕ ಬಜೇಟ್ ನೀಡುವುದರ ಮೂಲಕ ಕೇಂದ್ರ ಸರ್ಕಾರ ಸರ್ವೇ ಜನ ಸುಖಿನೋ ಭವಂತು ಎಂಬ ವಾಕ್ಯವನ್ನು ಪರಿಪಾಲಿಸಿದೆ