ಬಸವೇಶ್ವರ ಆಸ್ಪತ್ರೆಯ ರೇಡಿಯೋಲಾಜಿ ವಿಭಾಗದಲ್ಲಿ ಅತ್ಯಾಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಶೀನ್ ಉದ್ಘಾಟಿಸಿದ ಶ್ರೀ ಶಶೀಲ್ ಜಿ ನಮೋಶಿ

ಬಸವೇಶ್ವರ ಆಸ್ಪತ್ರೆಯ ರೇಡಿಯೋಲಾಜಿ ವಿಭಾಗದಲ್ಲಿ ಅತ್ಯಾಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಶೀನ್ ಉದ್ಘಾಟಿಸಿದ ಶ್ರೀ ಶಶೀಲ್ ಜಿ ನಮೋಶಿ

ಬಸವೇಶ್ವರ ಆಸ್ಪತ್ರೆಯ ರೇಡಿಯೋಲಾಜಿ ವಿಭಾಗದಲ್ಲಿ ಅತ್ಯಾಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಶೀನ್ ಉದ್ಘಾಟಿಸಿದ ಶ್ರೀ ಶಶೀಲ್ ಜಿ ನಮೋಶಿ 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಡ ಹಬ್ಬ ದಸರಾ ಹಬ್ಬದ ಪವಿತ್ರ ಹಾಗೂ ಮಹತ್ವದ ದಿನದಂದು ರೇಡಿಯೋಲಾಜಿ ಡಿಪಾರ್ಟ್ಮೆಂಟ್ ನಲ್ಲಿ ಅತ್ಯಾಧುನಿಕ ಮತ್ತು ನಿಖರವಾದ ಆರೋಗ್ಯ ಮಾಹಿತಿ ಒದಗಿಸುವ ಅಲ್ಟ್ರಾ ಸೌಂಡ್ ಮಶೀನ್ ಗಳಾದ 1)ಮೈಂಡ್ರೀ ರೇಸೋನಾ 19 ಎಲೈಟ್ ಎಡಿಷನ್ 2) ವಿಪ್ರೋ ಜಿ ಈ ಲಾಜಿಕ್ ಪಿ9 3) ಪೋರ್ಟೆಬಲ್ ಮೈಂಡ್ರಿ ಎಂ 6 ಸುಮಾರು 75 ಲಕ್ಷ ವೆಚ್ಚದ ಯಂತ್ರಗಳನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜೀ ನಮೋಶಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಹಾದೇವಪ್ಪ ರಾಂಪೂರೆಯವರ ಕನಸನ್ನು ನನಸು ಮಾಡುವ ಗುರಿ ಹೋಂದಿರುವ ಈ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರು ಮುಂಬರುವ ದಿನಗಳಲ್ಲಿ ಬಸವೇಶ್ವರ ಆಸ್ಪತ್ರೆಯನ್ನು ಈ ಭಾಗದಲ್ಲಿ ಅತ್ಯಾಧುನಿಕ ಆಸ್ಪತ್ರೆಗಯಾಗಿ ಪರಿವರ್ತಿಸಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ವೈದ್ಯಕೀಯ ಸಿಬ್ಬಂದಿಯ ಸಹ ಆಸ್ಪತ್ರೆಯಲ್ಲಿ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹೀಗಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು. 

ಇಷ್ಟೆ ಅಲ್ಲದೆ ರೇಡಿಯೋಲಾಜಿ ಡಿಪಾರ್ಟ್ಮೆಂಟ್ ಗೆ ಇನ್ನು ಹೆಚ್ಚಿನ ಸ್ಥಳಾವಕಾಶ ಒದಗಿಸಿ ಸುಮಾರು 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಫಿಸ್ ಮಾಡಲು ಆಡಳಿತ ಮಂಡಳಿ ಸಿದ್ಧವಾಗಿದೆ.ಬೇರೆ ಬೇರೆ ವಿಭಾಗಗಳಲ್ಲಿ ಬೇಕಾಗಿರುವ ಯಂತ್ರಗಳನ್ನು ಸಾಮಗ್ರಿಗಳನ್ನು ಬರುವ ದಿನಗಳಲ್ಲಿ ಒದಗಿಸಿ

 ಬಸವೇಶ್ವರ ಆಸ್ಪತ್ರೆಯು ಅತ್ಯಾಧುನಿಕ ಆಸ್ಪತ್ರೆಯಾಗಿ ಪರಿವರ್ತನೆಗೊಳಿಸಲಾಗುವದು ಕಲ್ಯಾಣ ಕರ್ನಾಟಕ ಭಾಗದ ರೋಗಿಗಳಿಗೆ ವರದಾನವಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಡೀನ್ ಡಾ ಶರಣಗೌಡ ಪಾಟೀಲ್ ಹಾಗೂ ಮೆಡಿಕಲ್ ಸುಪರಿಂಟೆಂಡೆಂಟ್ ಡಾ ಆನಂದ ಪಾರಂಪಳ್ಳಿ ಹಾಗೂ ವೈದ್ಯಕೀಯ ಅರೇ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.