ವಿದ್ಯಾರ್ಥಿಗಳ ಒಕ್ಕೂಟಕ್ಕೆ ಶರಣು ತೇಗಲತಿಪ್ಪಿ ಅಧ್ಯಕ್ಷರಾಗಿ ಆಯ್ಕೆ

ವಿದ್ಯಾರ್ಥಿಗಳ ಒಕ್ಕೂಟಕ್ಕೆ  ಶರಣು ತೇಗಲತಿಪ್ಪಿ ಅಧ್ಯಕ್ಷರಾಗಿ ಆಯ್ಕೆ

ವಿದ್ಯಾರ್ಥಿಗಳ ಒಕ್ಕೂಟಕ್ಕೆ ಶರಣು ತೇಗಲತಿಪ್ಪಿ ಅಧ್ಯಕ್ಷರಾಗಿ ಆಯ್ಕೆ

ಕಲಬುರಗಿ: ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿ ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ಇವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಚಿಂಚೋಳಿ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ್ತು ವಿವಿಧ ಸಂಘಟನೆಗಳ ಸಂಘಟನಾ ಕಾರ್ಯಕರ್ತರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಶರಣು ತೇಗಲತಿಪ್ಪಿ ಅವರನ್ನು ಆಯ್ಕೆ ಮಾಡಯಿತು. ಎಂದು ನಿಕಟ ಪೂರ್ವ ಅಧ್ಯಕ್ಷರಾದ ಯಲಾಲಿಂಗ ದಂಡಿನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ನವ ಕರ್ನಾಟಕ ಜನಪರ ಸಮಿತಿಯ ಅಧ್ಯಕ್ಷ ಶಿವಪ್ರಕಾಶ್ ಕಟ್ಟಿಮನಿ, ದಲಿತ ಸೇನೆಯ ಅಧ್ಯಕ್ಷ ಚೇತನ್ ನಿರಾಳ್ಕರ್, ಅಜರ್ ಸೌದಾಗರ್, ಎನ್. ಎಸ್. ಯು. ಐ. ಅಧ್ಯಕ್ಷ ಅಂಕಿತಾ ಕಮಲಾಕರ್, ಅಜರೋದಿನ್ ಕನಕಪೂರ, ಅರುಣ ಅಣವಾರಕರ್, ನಾಗೇಶ್ ಸುಂಕದ್, ಅಶೋಕಬಾಬು ಕಲ್ಲೂರರೋಡ್, ಗುರುಪ್ರಸಾದ್ ಪಾಟೀಲ್, ಸಾಗರ ಆನಂದಿ, ಅರವಿಂದ ಭಕ್ತಪಂಳ್ಳಿ, ಖಾಶಿಂ ಇಸ್ಮಾಯಿಲ್, ಆದಿತ್ಯ ಕಟ್ಟಿಮನಿ, ಪರ್ವಿಜ್ ಅನ್ಸಾರಿ, ಅತಿಫ್ ಪಟೇಲ್, ಆಕಾಶ, ಪವನ, ಶಿವು, ಕಲೀಮ್, ಅಭಿಷೇಕ್ ಗಾರಂಪಳ್ಳಿ, ಹರೀಶ್, ವೀರೇಶ್ ಸೇರಿದಂತೆ ಚಿಂಚೋಳಿ ತಾಲೂಕಿನ ಅಲ್ಪಸಂಖ್ಯಾತರ ವಸತಿ ನಿಲಯದ. ಮತ್ತು ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಈ ಕಾರ್ಯಕ್ರಮವನ್ನು ವಾಶಿಂ ಅಕ್ರಂ ಗಾರಂಪಳ್ಳಿ ಇವರು ನಿರೂಪಿಸಿದರು.