ಕೋಟನೂರ: ಭೀಮಾ ಪೈಪಲೈನ್ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ- ವಳಕೇರಿ
ಕೋಟನೂರ: ಭೀಮಾ ಪೈಪಲೈನ್ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ- ವಳಕೇರಿ
ಕಲಬುರ್ಗಿ: ನಗರದ ಹೊರ ವಲಯದಲ್ಲಿರುವ ಕೋಟನೂರ (ಡಿ ) ಗ್ರಾಮದ ಹತ್ತಿರದ ವರ್ತುಲ ಸೇತುವೆಯ ಸಮೀಪದಲ್ಲಿನ ಸರಡಗಿ ಗ್ರಾಮದಿಂದ ಕಲ್ಬುರ್ಗಿ ನಗರಕ್ಕೆ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಭೀಮಾ ನದಿಯ ಪೈಪಲೈನ್ ಒಡೆದು ಹೋಗಿದೆ .
ಕಳೆದ ಸುಮಾರು 3 ತಿಂಗಳಿಂದ ನೀರು ಪೋಲಾಗುತ್ತಿದ್ದು ಅಧಿಕಾರಿಗಳ ಗಮನಕ್ಕೆ ಇದ್ದರು ಬಂದು ಇದನ್ನು ವೀಕ್ಷಣೆ ಮಾಡುತ್ತಿಲ್ಲ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪೈಪ್ ಲೈನ್ ಒಡೆದು ನೀರು ಸೋರುತ್ತಿರುವುದನ್ನು ತಡೆಗಟ್ಟಬೇಕು ಎಂದರು
ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು ನಿರ್ಲಕ್ಷ ವಹಿಸಿದರೆ ಕಲಬುರಗಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ( 50) ರ ಕೊಟ್ಟನೂರು ಗ್ರಾಮದ ಸೇತುವೆ ಮೇಲೆ 29.11.2024 ರಂದು ಮುಂಜಾನೆ 10 ಘಂಟೆಗೆ ರಸ್ತರೋಕೋ ಮಾಡಲಾಗುವುದು ಎಂದು ನಂದಿಕುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪವನಕುಮಾರ ಬಿ ವಳಕೇರಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ವಳಕೇರಿ ಅವರು, ಭೀಮಾ ನದಿಯ ಪೈಪ್ ಲೈನ್ ಒಡೆದು 10 ಎಚ್ ಪಿ ಮೋಟಾರ್ ನೀರು ನಿರ್ತರವಾಗಿ ದಿನದ 24 ಘಂಟೆ ನೀರು ಹೋಗಿರುವುದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಭಯದ ವಾತಾವರಣ ಮೂಡುತ್ತಿದೆ ಜೊತೆಗೆ ರಾಷ್ಟ್ರೀಯ ಸಂಪತ್ತು ಕೂಡ ಹಾಳಾಗುತ್ತಿರುವದು ವಿಷಾದನೀಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅನೇಕ ಬಾರಿ ಈ ಪೈಪ್ ಲೈನ್ ದುರಸ್ತಿ ಮಾಡಬೇಕೆಂದು ಅಧಿಕಾರಿಗಳಿಗೆ ಮೌಖಿಕ ಹಾಗೂ ದೂರವಾಣಿ ಮೂಲಕ ತಿಳಿಸಿದ್ದರು ಸಹ ಅಧಿಕಾರಿಗಳ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ
ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಈಗಲಾದರೂ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಒಡೆದು ಹೋದ ಭೀಮಾ ಪೈಪಲೈನ್ ದುರಸ್ತಿ ಮಾಡಿ ನೀರು ಹಾಳಾಗುವುದನ್ನು ತಡೆಗಟ್ಟಬೇಕೆಂದು ಪವನಕುಮಾರ ಬಿ ವಳಕೇರಿ ಆಗ್ರಹ ಪಡಿಸಿದ್ದಾರೆ.
ಶ್ರೀ ಚಂದ್ರಕಾಂತ ಕೆ ಸೀತನೂರ್ ,ಅಧ್ಯಕ್ಷರು ಗ್ರಾ ಪಂ ನಂದಿಕೂರ್, ಭೀಮಾಶಂಕರ ಹುಲಿಮನಿ, ಶರಣಗೌಡ ಎಮ್ ಪಾಟೀಲ, ಅಭಾಸಲಿ ಧಗಾಪುರ, ಶಖಿಲ ಉತ್ತನಾಳ್, ಮಿಥುನ, ಕಾಂತು ಬಡಗೇರ್.ಉಪಸ್ಥಿತರಿದ್ದರು.