ಫೆಬ್ರವರಿ 13 ಎಲ್ಲರಿಗೂ ರೇಡಿಯೋ ದಿನದ ಕುರಿತು : ಜೀವನ್

ಫೆಬ್ರವರಿ 13 ಎಲ್ಲರಿಗೂ ರೇಡಿಯೋ ದಿನದ ಕುರಿತು : ಜೀವನ್
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಜೀವನ್ s
ಎಲ್ಲರೂ ಹೇಳುತ್ತಾರೆ ಕಾಲ ಬದಲಾಗಿದೆ ಅಂತ ಆದರೆ ನನ್ನ ಪ್ರಕಾರ ಕಾಲ ಬದಲಾಗಿಲ್ಲ ಈ ಕಾಲದಲ್ಲಿ ಇರುವ ನಾವು ಮನುಷ್ಯರು ಬದಲಾಗಿದ್ದೇವೆ ಹೊಸ ವಸ್ತುಗಳಿಗೆ ಪ್ರೀತಿಸುತಿದ್ದೇವೆ ಹಳೆಯ ವಸ್ತುಗಳಿಗೆ ಮೂಲೆಗೆ ಎಸೆಯುತ್ತಿದ್ದೇವೆ ಹಿಂದೆ ಎಲ್ಲಾರು ಒಂದೇ ಕಡೆ ಕುಳಿತುಕೊಳ್ಳುತ್ತಿದ್ದರು ಆದರೆ ಇವಾಗ ಏಕಾಂಗಿಯಾಗಿ ಕುಳಿತುಕೊಳ್ಳುತ್ತಿದ್ದಾರೆ ಇವತ್ತು ಫೆಬ್ರವರಿ 13 ಎಲ್ಲರಿಗೂ ರೇಡಿಯೋ ದಿನದ ಶುಭಾಶಯಗಳು ತಿಳಿಸುತ್ತಾ
ಮೊದಲಿನ ತರ ಮತ್ತೆ ಎಲ್ಲರ ಮನೆಯಲ್ಲಿ ಕೇಳಿ ಸುವಂತಾಗಲಿ ರೇಡಿಯೋ ಧ್ವನಿ
ನನ್ನ ಕವನದ ಶೀರ್ಷಿಕೆ ಮಾಯ ವಾಗಿ ಬಿಟ್ಟಿದೆ ರೇಡಿಯೋ
... ಹಿಂದೆ ಒಬ್ಬರ ಮನೆಯಲ್ಲಿ ರೇಡಿಯೋ ಹಚ್ಚಿದರೆ ಅಕ್ಕಪಕ್ಕದಲ್ಲಿ ಇರುವ ಮನೆಯಲ್ಲಿ ಎಲ್ಲರೂ ರೇಡಿಯೋ ಕೇಳುತ್ತಿದ್ದರು ಆದರೆ ಇವಾಗ ಪ್ರತಿಯೊಬ್ಬರ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದಾರೆ
.. ಹಿಂದೆ ಎಲ್ಲರೂ ಬೆಳಗ್ಗೆ ಎದ್ದು ತಕ್ಷಣ ಕೇಳುತ್ತಿದ್ದರೂ ರೇಡಿಯೋದಲ್ಲಿ ಭಕ್ತಿಗೀತೆ ಆದರೆ ಇವಾಗ ಎಲ್ಲರಿಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನಲ್ಲಿ ಇನ್ಸ್ಟಾಗ್ರಾಮದೇ ಚಿಂತೆ ಹಿಂದಿ ರೇಡಿಯೋಗಳಲ್ಲಿ ಎಷ್ಟೊಂದು ಒಳ್ಳೆಯ ಸಮಾಚಾರ ಆದರೆ ಇವಾಗ ನೋಡುತ್ತಿದ್ದೇವೆ ಎಷ್ಟೊಂದು ನಾವು ಭ್ರಷ್ಟಾಚಾರ
... ಹಿಂದೆ ರೇಡಿಯೋಗಳಲ್ಲಿ ರೈತರಿಗೆ ತಿಳಿಸುತ್ತಿದ್ದರು ಅದ್ಭುತ ಮೇಘ ಸಂದೇಶ ಆದರೆ ಇವಾಗ ಏನು ಇಲ್ಲ ರೈತರಿಗೆ ವಿಶೇಷ
.... ಹಿಂದೆ ರೇಡಿಯೋಗಳಲ್ಲಿ ಸಂಜೆ ದಿನನಿತ್ಯ ಕೃಷಿ ಕಾರ್ಯಕ್ರಮ ಆದರೆ ಇವಾಗ ಬಂದುಬಿಟ್ಟಿದೆ ಸಾಮಾಜಿಕ ಜಾಲತಾಣದ ಕಾರ್ಯಕ್ರಮ
.... ಹಿಂದೆ ರೇಡಿಯೋಗಳಲ್ಲಿ ಎಲ್ಲಾ ತರಗತಿಗಳ ಮಾಡುತ್ತಿದ್ದರು ಪಾಠ ಆದರೆ ಇವಾಗ ಎಲ್ಲಾ ಶಾಲೆಗಳಲ್ಲಿ ಪಾಠದ ಬದಲಿ ಆಡಿಸುತ್ತಿದ್ದಾರೆ ಜಾಸ್ತಿ ಆಟ
ಹಿಂದೆ ರೇಡಿಯೋಗಳಲ್ಲಿ ರಾತ್ರಿ ನಾಟಕ ಕೀರ್ತನೆಗಳು ಕೇಳಿ ಹಿರಿಯರು ಹೇಳುತ್ತಿದ್ದರು ಎಲ್ಲರಿಗೂ ಜ್ಞಾನ ಆದರೆ ಇವಾಗ ಬರಲಿಲ್ಲ ಯಾರಿಗೂ ಆ ಗುಣ
..... ಹಿಂದೆ ರೇಡಿಯೋಗಳಲ್ಲಿ ಇಷ್ಟೊಂದು ಅರ್ಥಪೂರ್ಣವಾದ ಭಾವಗೀತೆಗಳು ಹಳೆಯ ಚಿತ್ರಗೀತೆಗಳು ಆದರೆ ಇವಾಗ ಕೆಲವು ಅರ್ಥವಾಗದ ಗೀತೆ
..... ಹಿಂದಿ ರೇಡಿಯೋಗಳಲ್ಲಿ ಕ್ರಿಕೆಟ್ ಎಲ್ಲರೂ ಒಗ್ಗಟ್ಟಾಗಿ ಕೇಳುತ್ತಿದ್ದರು ಆದರೆ ಇವಾಗ ಕ್ರಿಕೆಟ್ ಎಲ್ಲರೂ ಒಂಟಿಯಾಗಿ ನೋಡುತ್ತಿದ್ದಾರೆ
ಮರೆಯೋದು ಬೇಡ ನಮ್ಮ ಸಂಸ್ಕೃತಿ ಇರಲಿ ಸ್ವಲ್ಪ ರೇಡಿಯೋ ದ ಮೇಲೆ ಪ್ರೀತಿ ಕೇಳೋಣ ನಾವು ರೇಡಿಯೋದಲ್ಲಿ ಆಕಾಶವಾಣಿ ಸ್ವಲ್ಪ ದೂರ ಮಾಡೋಣ ನಮ್ಮ ಜಂಗಮ ವಾಣಿ .
... ಏಕೆಂದರೆ ರೇಡಿಯೋ ಹೇಗೆ ಸಮಯ ಉಪಯೋಗಿಸಿಕೊಳ್ಳಬೇಕು ಅನ್ನುವುದನ್ನು ಕಲಿಸಿಕೊಡುತ್ತದೆ ಸಮಯ ಹೇಗೆ ದುರುಪಯೋಗ ಮಾಡಿಕೊಳ್ಳಬೇಕು ಎಂದು ಮೊಬೈಲ್ ಕಲಿಸಿಕೊಡುತ್ತದೆ