ವೀರಶೈವ ಮಹಾಸಭಾಗೆ ನಿರ್ದೇಶಕರ ಆಯ್ಕೆ
ವೀರಶೈವ ಮಹಾಸಭಾಗೆ ನಿರ್ದೇಶಕರ ಆಯ್ಕೆ
ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ ಖಂಡ್ರೆ , ರಾಜ್ಯ ಅಧ್ಯಕ್ಷರಾದ ಶಂಕರ ಬಿದರಿ ಅವರ ನೇತೃತ್ವದ 27 ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ರಾಜ್ಯದಿಂದ 30, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ 5 ಸದಸ್ಯರಂತೆ ಕೇಂದ್ರ ಕಾರ್ಯಕಾರಿ ಸಮಿತಿಯ 55 ಸದಸ್ಯರು ಮತ್ತು ಅಧ್ಯಕ್ಷರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ರಾಜ್ಯದ 27 ಸಾಮಾನ್ಯ ಸದಸ್ಯರುಗಳ ಸ್ಥಾನಕ್ಕೆ 57 ಜನರು ಸ್ಪರ್ಧಾ ಕಣದಲ್ಲಿದ್ದರು. ಭಾನುವಾರ ಚುನಾವಣೆ ನಡೆದು ಫಲಿತಾಂಶ ಬಂದಿದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಆಯ್ಕೆಯಾದವರು:ರಾಜಶೇಖರ ಬಸವಣೆಪ್ಪ ಸೀರಿ, ಶಶಿಕಾಂತ ಬಿ.ಪಾಟೀಲ್, ಸಂತೋಷಕುಮಾರ ಪಾಟೀಲ್, ಸಂಗನಗೌಡ ಪಾಟೀಲ್, ಗುರಪ್ಪ ಚನ್ನಬಸಪ್ಪ ಮೆಟಗುಡ್ಡ, ಉಮೇಶ್ ಬಣಕಾರ, ನಟರಾಜ್ ಸಾಗರನಹಳ್ಳಿ, ಚಂದ್ರಶೇಖರ ಎಸ್.ಶೆಟ್ಟರ್, ಈರೇಶ ಎನ್.ವಿ., ಅಂಗಡಿ ಶಂಕರಪ್ಪ, ಕರೇಗೌಡ, ಪ್ರವೀಣ್ ಹನುಮಶೆಟ್ಟಿ, ಗಿರೀಶ್ ಕುಮಾರ್, ಪೂರ್ಣೇಶ್ ಮೂರ್ತಿ ಎಂ.ಆರ್., ಮಲ್ಲಿಕಾರ್ಜುನಯ್ಯ, ಚನ್ನಪ್ಪ ಎಚ್.ಕೆ., ನಾಗರಾಜ ಗೌರಿ, ಮೋಹನ ವೀರಭದ್ರಪ್ಪ ಅಸುಂಡಿ, ಬಸವರಾಜಪ್ಪ, ನಂಜುಂಡೇಶ ಎನ್., ವಿರೂಪಾಕ್ಷಯ್ಯ ಎಸ್., ಶರಣಪ್ಪ ಬಸಪ್ಪ ಹ್ಯಾಟಿ, ಶಂಭುಲಿಂಗಪ್ಪ ನಿಜಪ್ಪ ಚಕ್ಕಡಿ, ಸಂದೀಪ್ ಅಣಬೇರು, ವಿಜಯಕುಮಾರ ಎ.ಪಿ., ಹರೀಶ್ ಆರಾಧ್ಯ ಆರ್., ಸೊಮನಾಥ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ.