ರಂಗಾಯಣದ ಕಲಾವಿದೆ ಗೀತಾ ಮೊಂಟೆಡ್ಕಗೆ ರಂಗ ಸಂಗಮ ಪ್ರಶಸ್ತಿ. ಡಾ.ಪೆರ್ಲ ಅಭಿನಂದನೆ

ರಂಗಾಯಣದ ಕಲಾವಿದೆ ಗೀತಾ ಮೊಂಟೆಡ್ಕಗೆ ರಂಗ ಸಂಗಮ ಪ್ರಶಸ್ತಿ. ಡಾ.ಪೆರ್ಲ ಅಭಿನಂದನೆ
ಕಲಬುರಗಿ : ರಂಗ ಜಂಗಮ ಸಂಸ್ಥೆ ವತಿಯಿಂದ 2025 ನೇ ಸಾಲಿನ ಸುಭದ್ರಾ ಜಂಗಮಶೆಟ್ಟಿ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಮೈಸೂರು ರಂಗಾಯಣದ ನಿವೃತ್ತ ಕಲಾವಿದೆ ಶ್ರೀಮತಿ ಗೀತಾ ಮೊಂಟೆಡ್ಕ ಅವರಿಗೆ ನೀಡಿ ಗೌರವಿಸಲಾಗಿದೆ.
ಕಲಬುರಗಿಯ ವಿಶ್ವೇಶ್ವರ ಭವನ (ಇಂಜಿನಿಯರಿಂಗ್ ಹಾಲ್) ದಲ್ಲಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 20 ರಂದು ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿ ಪುರಸ್ಕೃತರದ ಗೀತಾ ಅವರು ಮೈಸೂರು ರಂಗಾಯಣದಲ್ಲಿ 30 ವರ್ಷಗಳ ಕಾಲ ಕಲಾವಿದೆಯಾಗಿ ಸೇವೆ ಸಲ್ಲಿಸಿ ಖ್ಯಾತರಾದವರು. ನಟಿ,ರಂಗ ನಿರ್ದೇಶಕಿ, ನಾಟಕ ರಚನೆಕಾರರು, ಮಿಮಿಕ್ರಿ ಕಲಾವಿದೆಯಾಗಿ, ಅರೆ ಭಾಷಾ ಸಾಹಿತ್ಯ ರಚನೆಕಾರರಾಗಿ ಗುರುತಿಸಿಕೊಂಡವರು. ಪ್ರಸ್ತುತ ಮೈಸೂರಿನಲ್ಲಿರುವ ಗೀತಾ ಅವರಿಗೆ ರಂಗಂ ಜಂಗಮ ಸಂಸ್ಥೆಯು 10,000 ನಗದು, ಪ್ರಶಸ್ತಿ ಫಲಕ, ಶಾಲು, ಹಾರ,ತೊಗರಿ ಬೇಳೆ ಚೀಲ ಮತ್ತು ಮೈಸೂರು ಪೇಟಗೊಂದಿಗೆ ಗೌರವ ಸಲ್ಲಿಸಿದೆ.
ಗೀತಾ ಮೊಂಟೆಡ್ಕ ಅವರನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ವಿಶೇಷವಾಗಿ ಸನ್ಮಾನಿಸಿ ಶುಭ ಹಾರೈಸಿದರು. ರಂಗ ಜಂಗಮ ಸಂಸ್ಥೆಯ ಮುಖ್ಯಸ್ಥರು ಹಾಗೂ ಕಲಬುರಗಿ ರಂಗಾಯಣ ಸಂಸ್ಥೆಯ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ, ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ರವಿ ಹಿರೇಮಠ ಶಹಾಪುರ ಹಾಗೂ ಸದಸ್ಯರಾದ ಬಸು ಪಾಟೀಲ್ ಜೊತೆಗೆದ್ದರು.