ವಿಜಯಲಕ್ಷ್ಮಿ ಚ ಸಿಂಗೋಡಿ.

ವಿಜಯಲಕ್ಷ್ಮಿ ಚ ಸಿಂಗೋಡಿ.

ವಿಜಯಲಕ್ಷ್ಮಿ ಚ ಸಿಂಗೋಡಿ.

ಉದಯೋನ್ಮುಖ ಕವಯತ್ರಿಯಾದ ಶ್ರೀಮತಿ ವಿಜಯಲಕ್ಷ್ಮಿ ಚ ಸಿಂಗೋಡಿ ಯವರು ಕಲಬುರಗಿ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯ ನಿವಾಸಿಯಾಗಿದ್ದಾರೆ. ಬಿ.ಎ.ಬಿ.ಇಡಿ(ಹಿಂದಿ) ಪದವಿಧರರಾದ ಇವರು ಚಂದ್ರಕಾಂತ ಸಿಂಗೋಡಿಯವರ ಧರ್ಮಪತ್ನಿಯಾಗಿದ್ದು ಇವರು ವಿ.ತಿ.ಬಾಳಿ ಎಂಬ ಕಾವ್ಯನಾಮದಿಂದ ಕವನ ಲೇಖನ ಚುಟುಕು ಮತ್ತು ಆಧುನಿಕ ವಚನಗಳನ್ನು ಬರೆಯುತ್ತಿದ್ದಾರೆ. ಇವರು ಬರೆದ ಕವನ ಲೇಖನ ಚುಟುಕು ಹನಿಗವನ ಮತ್ತಿತರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಕೆಲ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಸಾಹಿತ್ಯ ಚಟುವಟಿಕೆಗಳೊಂದಿಗೆ ಧಾರ್ಮಿಕ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಗುರ್ತಿಸಿ ಕೊಂಡಿದ್ದಾರೆ. ಅಷ್ಟೇಯಲ್ಲದೇ ಇವರು ಯೋಗ ಶಿಕ್ಷಕರು ಕೂಡ ಆಗಿದ್ದು ಹಲವಾರು ಜನರಿಗೆ ಉಚಿತವಾಗಿ ಯೋಗ ಕಲಿಸುತ್ತಾರೆ. ಇವರ ಕಲೆ ಸಾಹಿತ್ಯ ಸಂಸ್ಕೃತಿ ಸೇರಿದಂತೆ ಮೊದಲಾದ ಬಹುತೇಕ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಸಾಧನೆ ಕಂಡು ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ

ಕಲಬುರ್ಗಿಯ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ 70 ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿ, ಸುಜ್ಞಾನ ವಿದ್ಯಾ ಪೀಠ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ದೇವರಾಯ ರಾಷ್ಟ್ರೀಯ ಪ್ರಶಸ್ತಿ, ನಾಡಿನ ಸಮಾಚಾರ ಸೇವಾ ಸಂಘದ ವತಿಯಿಂದ 'ಸಾವಿತ್ರಿ ಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ನುಡಿ ಮತ್ತು ಸಾಹಿತ್ಯ ವೇದಿಕೆ ವತಿಯಿಂದ 'ಸಿದ್ದಗಂಗಾ ಶ್ರೀ' ಪ್ರಶಸ್ತಿ, (ಧಾರ್ಮಿಕ) ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೇ ಇವರು ತಮ್ಮ ಕಣ್ಣುಗಳನ್ನು ಬೊರುಕಾ ನೇತ್ರಾಲಯ ಸಂಸ್ಥೆಗೆ ದಾನವಾಗಿ ಬರೆದು ಕೊಟ್ಟಿದ್ದಾರೆಂದರೆ ಎಂಥಹ ವಿಶಾಲ ಹೃದಯ ಉಳ್ಳವರು ಅನ್ನೊದು ಇದರಿಂದ ತಿಳಿದು ಬರುತ್ತದೆ. ಸಾಹಿತ್ಯದೊಂದಿಗೆ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇವರು ಉತ್ತಮ ಸಮಾಜ ಸೇವಕಿ ಹಾಗೂ ಮಹಿಳಾ ಪರ ಹೋರಾಟಗಾರು ಆಗಿದ್ದಾರೆ. ಇವರು ಕಲೆ ,ಸಾಹಿತ್ಯ ,ಸಂಗೀತ, ಸಾಮಾಜಿಕ ,ಧಾರ್ಮಿಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಇವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಉಳ್ಳವರಾಗಿದ್ದು ಆದ್ದರಿಂದ ಇವರು ಮುಂದಿನ ದಿನಗಳಲ್ಲಿ ಸಾಹಿತ್ಯದಲ್ಲಿ ಉತ್ತಮ ಕವಯತ್ರಿಯಾಗಿ ಹೊರ ಹೊಮ್ಮಲೆಂದು ಹಾರೈಸೋಣ.