ಚಂದ್ರಪ್ಪ ಹೆಬ್ಬಾಳ್ಕರ ಸಾಹಿತಿ, ಚಿಂತಕ

ಸಾಹಿತಿ, ಚಿಂತಕ ಚಂದ್ರಪ್ಪ ಹೆಬ್ಬಾಳ್ಕರ
ಚಂದ್ರಪ್ಪ ಹೆಬ್ಬಾಳ್ಕರರವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಶ್ರೀ ಅಡವೆಪ್ಪ ಶ್ರೀಮತಿ ಶಿವಮ್ಮ ದಂಪತಿಗಳ ಉದರದಲ್ಲಿ. (14.4.1940) ಜನಸಿದ್ದು.
ಪ್ರಾಥಮಿಕ ಶಿಕ್ಷಣ ಬೇಮಳಖೇಡದಲ್ಲಿ, ಉರಿಲಿಂಗ ಪೆದ್ದಿಮಠದ ಸಿ. ಜಿ. ಸ್ವಾಮಿಜಿಯವರ ಆಶ್ರಯದಲ್ಲಿ ಪ್ರೌಢ ಶಿಕ್ಷಣ ಪಡೆದು, ಕರ್ನಾಟಕ ಕಾಲೇಜನಲ್ಲಿ ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಪದವಿ ಬಿ.ಎ ಬಿ.ಎಡ್ ಪದವಿ ಪಡೆದರು ನಂತರ 1.8.1958 ರಂದು ಚಿಟ್ಟಗುಪ್ಪ ಪಟ್ಟಣದ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಪ್ರಾರಂಭೀಸಿದರು.
ಚಿಟಗುಪ್ಪ ಶಾಲೆಯಲ್ಲಿ ಹನ್ನೊಂದು ವರ್ಷ ಸೇವೆ ನಂತರ ಬೀದರನ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾಗಿ, ಬಸವಕಲ್ಯಾಣ ತಾಲೂಕಿನ ಸಹಾಯಕ ಶಿಕ್ಷಣಾಧಿಕಾರಿಗಳಾಗಿ, ಕರ್ತವ್ಯ ನಿರ್ವಹಿಸಿದ್ದಾರೆ. ನಂತರ 1990 ರಿಂದ 1995ರ ವರೆಗೆ ಪರೀಕ್ಷೆ ಪರಿವಿಕ್ಷಕರಾಗಿ ,ಬೀದರನ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ, ಪ್ರಭಾರಿ ಶಿಕ್ಷಣಾಧಿಕಾರಿಗಳಾಗಿ, ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳಾಗಿ, ಸಾಕ್ಷಾರತ ಸಮಿತಿ ಖಚಾಂಚಿಗಳಾಗಿ ,ಜಿಲ್ಲಾಪಂಚಾತ ಅಧ್ಯಕ್ಷರ ಆಪ್ತಸಹಾಯಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಯಾದರು
ಚಂದಪ್ಪ ಅವರು ಶಕುಂತಲಾ ಅವರ ಜೊತೆ ಮದುವೆಯಾಗಿ ಸತೀಶ , ಸುರೇಶ, ಸುಧಾ ಮತ್ತು ಸುಮನಾ ಮಕ್ಕಳಿದ್ದಾರೆ.
ಹೆಬ್ಬಾಳಕರವರು ದಲಿತ ಸಮುದಾಯದಿಂದ ಹುಟ್ಟಿದರು ಶರಣರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವರು ಉರಿಲಿಂಗ ಪೆದ್ದಿಮಠದ ಪೀಠಾಧೀಪತಿಗಳಾದ ಶ್ರೀ.ಸಿ.ಜಿ ಸ್ವಾಮಿಯವರ ಲಿಂ.ಮಾಜಿ ಸಚಿವರಾದ ವೈಜಿನಾಥ ಪಾಟೀಲ,
ಸಂದರ್ಶಕರಾದ ಶ್ರೀ.ರುಕ್ಮೊದಿನ್ ಇಸ್ಲಾಂಪುರ ಇವರ ಒಡನಾಟದಲ್ಲಿ ಬೆಳೆದವರು.ಅವರ ಜೀವನ ದರ್ಶನ ಪುಸ್ತಕದ ಬರೆದಿದ್ದಾರೆ.
ಇವರು ಜಾನಪದ ಕಲಾವಿದರಾಗಿ, ಸಾಹಿತಿಗಳಾಗಿ, ಆಧುನಿಕ ವಚನಕಾರರಾಗಿ ಗುರುತಿಸಿಕೊಂಡವರು.ಚಂದ್ರಪ್ಪನವರ ಚಂದ್ರಣ್ಣ ಅಂಕಿತನಾಮದಿಂದ ಅನೇಕ ಆಧುನಿಕ ವಚನಗಳು, ಮೊಹರಂ ಪದಗಳು, ಕವಿತೆಗಳು ಬರೆದು ಪ್ರಕಟಿಸಿದ್ದಾರೆ.
ಕೃತಿ ಮತ್ತು ಕವನ ಸಂಕಲನಗಳು
ಚಿಂತನ ಲಹರಿ, ಜೀವನ ಮೌಲ್ಯ ದೀಪಿಕೆ, ಬೀದರ ತಾಲೂಕಿನ ಪರಿಚಯ, ಬೀದರ ಜಿಲ್ಲೆಯ ಮೊಹರಂ ಪದಗಳು, ಸತ್ಯ ಕಥನಗಳು, ಭೀಮ ಕವಿ ಶ್ರೀ ಮಾಣಿಕರಾವ್ ಜ್ಯೋತಿ, ಶೇರ್ ಎ ದಖನ್ ಬಿ ಶಾಮ್ ಸುಂದರ್, ಬೀದರ್ ಜಿಲ್ಲೆಯ ದಲಿತ ಕವಿಗಳು, ಬೀದರ್ ಜಿಲ್ಲೆಯ ದಲಿತ ಚಿಂತಕರು, ಪ್ರೀತಿ (ಕವನ ಸಂಕಲನ ) ಮತ್ತು ಇನ್ನಿತರ ಲೇಖನಗಳು ಪ್ರಕಟಿಸಿದ್ದು, ಇನ್ನೂ ಹಲವಾರು ಚಿಂತನೆ, ಕವನಗಳು ರಾಜ್ಯದ ಪ್ರಜಾವಾಣಿ, ವಿಜಯವಾಣಿ ಮುಂತಾದ ಹಲವಾರು ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತವೆ.
ಕೆಲವಂದು ಲೇಖನಗಳ ಕುರಿತು ವಿಮರ್ಶೆ ಮತ್ತು ಚಂದ್ರಪ್ಪ ಹೆಬಾಳ್ಕರವರ ಕುರಿತು ಮಾಣಿಕ ನೆಳಗಿಯವರು ಶಂಭುಲಿಂಗ ವಾಲ್ದೊಡ್ಡಿ ಸಂಪಾದನೆ ಜೀವನ ದರ್ಶನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಸಮಾಜಿಕ ಚಟುವಟಿಕೆ
ಚಂದ್ರಪ್ಪ ಹೆಬಾಳ್ಕರವರು ಬೀದರ್ ಜಿಲ್ಲಾ ಭಾರತ ಜ್ನ್ಯಾನ ವಿಜ್ಞಾನ ಸಮಿತಿ ಅಧ್ಯಕ್ಷರಾಗಿದ್ದಾಗ ಸಂದರ್ಭದಲ್ಲಿ ಎಂ ಎಸ್ ಮನೋಹರವರ ಜೊತೆಗೂಡಿ ಹಳ್ಳಿಖೆಡದಲ್ಲಿ ನಿಧಿಗಾಗಿ ಬಬ್ಲು ಎಂಬ ಮಗುವಿನ ಹತ್ಯೆಯಾದಾಗ ಸತತವಾಗಿ ಹೋರಾಟ ಮಾಡಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಹೋರಾಡಿದರು. "ಧರಿನಾಡು ಸಂಘ" ಸ್ಥಾಪಿಸಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸಾಹಿತಿಕ ಕಾರ್ಯಕ್ರಮಗಳು ಮಾಡಿದ್ದಾರೆ.
1990ರಲ್ಲಿ ಬೀದರ್ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ. 2006ರಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ರಂಗ ಸನ್ಮಾನ ಪ್ರಶಸ್ತಿ, ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ""ಬಾಪು ಸನ್ಮಾನ ""ಸೇರಿದಂತೆ ಒಟ್ಟು ಹದಿಮೂರು ಪ್ರಶಸ್ತಿಗಳು ಹಾಗು ಐದು ಸನ್ಮಾನ ಪತ್ರಗಳು , ಎರಡು ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
-ಓಂಕಾರ ಪಾಟೀಲ
(ಕಾರ್ಯದರ್ಶಿಗಳು :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)