ವಚನ ದರ್ಶನ ಕೃತಿ ವಿವಾದ ಚರ್ಚೆಗೆ ನಾಗಲಿಂಗಯ್ಯ ಮಠಪತಿ ಕರೆ

ವಚನ ದರ್ಶನ ಕೃತಿ ವಿವಾದ ಚರ್ಚೆಗೆ ನಾಗಲಿಂಗಯ್ಯ ಮಠಪತಿ ಕರೆ

ವಚನ ದರ್ಶನ ಕೃತಿ ವಿವಾದ ಚರ್ಚೆಗೆ ನಾಗಲಿಂಗಯ್ಯ ಮಠಪತಿ ಕರೆ

ಕಲಬರುಗಿ : ಆಗಸ್ಟ್ ೦೪,

ಕಲಬುರಗಿ ನಗರದಲ್ಲಿ ನಿನ್ನೆ ಲೋಕಾರ್ಪಣೆಗೊಂಡ ವಚನ ದರ್ಶನ ಕೃತಿಯೂ ಹಲವು ಬಗೆಯ ಘಟನಾವಳಿಗೆ ಸಾಕ್ಷಿಯಾಗಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ. ಆದ್ದರಿಂದ ಈ ಕೃತಿಯ ಚರ್ಚೆಗೆ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಆಹ್ವಾನಿಸಿದ್ದಾರೆ.

ವೈಚಾರಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ ಒಂದು ಕೃತಿ ಬಿಡುಗಡೆಯ ಹೊತ್ತಿನಲ್ಲಿ ಈ ರೀತಿಯ ವರ್ತನೆ ಯಾರಿಗೂ ಶೋಭೆ ತರುವುದಿಲ್ಲ. ಮಹಾಪುರುಷರು ಯಾರ ಆಸ್ತಿಯೂ ಅಲ್ಲ ಎನ್ನುವ "ಕನಿಷ್ಠ ಪ್ರಜ್ಞೆ" ಎಲ್ಲರಲ್ಲೂ ಇರಬೇಕು,ಅದನ್ನು ಬಿಟ್ಟು ಮಹಾತ್ಮರನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ .

ವ್ಯಕ್ತಿ, ವಿಷಯ ಮತ್ತು ಸಂಸ್ಥೆಗಳ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರುತ್ತದೆ ಆದರೆ ನಮ್ಮಿಂದಲೇ ಎಲ್ಲ ಅನ್ನುವ ಪರಿಧಿಯಿಂದ ಹೊರಬಂದರೆ ಒಳಿತು.ವಿಶ್ವಗುರು ಭಕ್ತಿ ಭಂಡಾರಿ ಬಸವಣ್ಣನವರು 'ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ' ಅನ್ನುವ ವಚನದಂತೆ ನಡೆದರೆ ವಿಶ್ವಕ್ಕೆ ಒಳಿತಾಗಲಿದೆ.

ಬಸವಾದಿ ಪ್ರಮಥರು ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡರು ಅದರೆ ಅವರ ಹೆಸರಿನಲ್ಲಿ ಇಂದು ಕೆಲವರು ಎನು ಮಾಡಲು ಹೊರಟಿದ್ದಾರೆ ಅನ್ನೋದು ತಿಳಿಯದಾಗಿದೆ ? ಎಂದರು.

ಅಣ್ಣ ಬಸವಣ್ಣನವರ ಹೆಸರಿನ ಮೇಲೆ ವೈಚಾರಿಕತೆಯ ಸೋಗಿನಲ್ಲಿ ತಮಗೆ ತೋಚಿದಂತೆ ನಡೆದುಕೊಳ್ಳುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ನಾಗಲಿಂಗಯ್ಯ ಮಠಪತಿ ನುಡಿದರು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸದಿದ್ದರೆ ಕೆಲವು ಸ್ವಯಂ ಘೋಷಿತ ಬುದ್ದಿ ಜೀವಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಹಿಗಾಗಿ ಸದಾಸುದ್ದಿಯಲ್ಲಿ ಇರಲು ಇವರಿಗೆ ಇದು ಅನಿವಾರ್ಯ  ಪೂರ್ವಗ್ರಾಹ ಪೀಡಿತ ಮನಸ್ಥಿತಿಯಿಂದ ಹೊರಬಂದು ವಿಷಯದ ಮೇಲೆ ಚರ್ಚೆಗೆ ಬನ್ನಿ ಎಂದು ನಾಗಲಿಂಗಯ್ಯ ಮಠಪತಿ  ಕರೆನಿಡಿದ್ದಾರೆ.