ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಸಮಾರಂಭ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಸಮಾರಂಭ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಸಮಾರಂಭ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಕೆಎಸ್‌ಎಸ್‌ಡಿ ಕಲಬುರಗಿ, ಜಿಲ್ಲಾ ಮಹಿಳಾ ಘಟಕ ಹಾಗೂ ನಗರ ಮಹಿಳಾ ಸಮಿತಿಯ ಇವರ ಸಂಯುಕ್ತಾಶ್ರಯದಲ್ಲಿ ರಾಜಮಾತೆ ರಮಾಬಾಯಿ ಅಂಬೇಡ್ಕರ್ ರವರ 127 ಜಯಂತಿ ಮತ್ತು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರವರ 194 ಜಯಂತಿ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಸಂಗೀತಾ ಮಾಲೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಜ್ಯೋತಿ ಪ್ರದೀಪ ಲಾಲ, ಇಂದುಮತಿ ಭರತನೂರ, ರಾಜೇಶ್ವರಿ ಹೊಸಮನಿ, ಗೌತಮಿ ಆಲೂರಕರ್, ರುಕ್ಕಿಣಿ ನಿಜಲಿಂಗರಾಜ್, ವಿಜಯಲಕ್ಷ್ಮೀ ಕಲಾಲ, ಶ್ರೀದೇವಿ ಸಿದ್ದಾರ್ಥ ಕಣಮಸ, ಉಷಾದೇವಿ ಈರಣ್ಣ ಜಾನೆ, ಕು. ನವಶ್ರೀ ಘಾಳಪ್ಪ ಸುಲೇಪೇಠ, ರೇಣುಕಾ ಎಚ್. ಬೆಲ್ಲಾದ್, ಆದರ್ಶ ಶಿಕ್ಷಕಿಯರಾದ ಡಾ. ಕಾವೇರಿ ಕಾಂಬಳೆ, ಸುವರ್ಣ ಮಹೇಶ ಹಿರಾಪೂರ, ಇಂದಿರಾಬಾಯಿ ಬಿ. ಶಂಭುಶAಕರ, ಉಷಾಗೌತಮಿ ಅಮರ್ಜಿತ ರುಗುನ್, ಶ್ರೀವೆಣಿ ತಂದೆ ರಾಮಚಂದ್ರ ಚಾರಿ, ಪ್ರೇಮಿಳಾ ಮಲ್ಲಿಕಾರ್ಜುನ ತ್ರೀಮುಖೆ, ಗೌತಮಿ ಉಮಾಕಾಂತ ಹಿರೋಳ್ಳಿ, ಭಾರತಿಬಾಯಿ ಎಸ್. ಅಟ್ಟೂರ, ನಾಗಮ್ಮ ಸುರೇಶ ಹೊಸಮನಿ, ಜ್ಯೋತಿ ಮನೋಜಕುಮಾ ಸಿಂಧೆ, ಮಾಯದೇವಿ ಟಿ. ತುರಂಗ, ಸುಹಾಸಿನಿ ಶಾಂತಪ್ಪ ಹಾದಿಮನಿ ಇವರನ್ನು ಗೌರವ ಸನ್ಮಾನ ಪ್ರಶಸ್ತಿ ಪ್ರಧಾನ ಮಾಡಲಾಯಿತು.  

ಈ ಕಾರ್ಯಕ್ರದಲ್ಲಿ ಕೆ.ಎಸ್.ಎಸ್.ಡಿ. ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ಸಾವಳಗಿ, ಕರ್ನಾಟಕ ಸಮತಾ ಸೈನಿಕ ದಳ ವಿಭಾಗೀಯ ಅಧ್ಯಕ್ಷ ಸಂಜೀವ ಟಿ. ಮಾಲೆ, ವಕೀಲರು ಹಾಗೂ ಸಮಾಜ ಸೇವಕಿ ಅಶ್ವಿನಿ ಮಧನಕರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಗೀತಾ ಭರಣಿ, ಕೆ.ಎಸ್.ಎಸ್.ಡಿ. ಜಿಲ್ಲಾಧ್ಯಕ್ಷ ಈರಣ್ಣಾ ಜಾನೆ, ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ, ಅನ್ನಪೂರ್ಣ ಬಿ. ತಾವೆಡೆ, ಯಶೋಧಾ ರಾಠೋಡ, ರೇಣುಕಾ ಎಚ್. ಬೆಲ್ಲಾದ್, ಎಮ್.ಎನ್. ಸುಗಂಧಿ ಸೇರಿದಂತೆ ಇತರರು ಇದ್ದರು.