ಬಾಬು ಜಗಜೀವನರಾಂ ಜಯಂತಿಯ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಲು ಮನವಿ
ಬಾಬು ಜಗಜೀವನರಾಂ ಜಯಂತಿಯ ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಲು ಮನವಿ
ಕಲಬುರಗಿ: ಈ ಬಾರಿ ಜಿಲ್ಲೆಯಲ್ಲಿ ನಡೆಯಲಿರುವ 119ನೇ ಡಾ.ಬಾಬು ಜಗಜೀವನರಾಂ ಜಯಂತಿಯೂ ಅತೀ ವಿಜ್ರಂಭಣೆಯಿಂದ ಆಚರಿಸಲು ನಿರ್ಧಾರ ಮಾಡಿರುವ ಜಿಲ್ಲಾ ಜಯಂತೋತ್ಸವ ಸಮಿತಿಯ ಮುಖಂಡರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ,ಈ ಬಾರಿ ನಡೆಯಲಿರುವ ಡಾ.ಬಾಬು ಜಗಜೀವನರಾಂ ರವರ 119ನೇ ಜಿಲ್ಲಾ ಜಯಂತೋತ್ಸವ ಸಮಿತಿಗೆ ನನಗೆ ನೂತನವಾಗಿ ಜಿಲ್ಲಾ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಸಮಾಜದ ಯುವಕರಲ್ಲಿ ಉತ್ಸಾಹ ನೀಡುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಡಾ.ಬಾಬು ಜಗಜೀವನರಾಂ ಜಿಲ್ಲಾ ಜಯಂತೋತ್ಸವದ ಸಮಿತಿಯ ಜಿಲ್ಲಾದ್ಯಕ್ಷ ಸ್ಥಾನದ ಅಂಕಾಕ್ಷಿ ಮಂಜುನಾಥ ಎಸ್ ನಾಲವಾರಕರ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮಾದಿಗ ಸಮಾಜದ ಹಿರಿಯ ಜೀವಿಗಳು,ಸಾಮಾಜಿಕ ಚಿಂತಕರು,ಹಿರಿಯ ಹೋರಾಟಗಾರರು,ಯುವಕರು,
ಮಹಿಳೆಯರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈಗಾಗಲೇ ಸುಮಾರು 10 ವರ್ಷಗಳಿಂದ ನಡೆಯುತ್ತಿರುವ ಡಾ.ಬಾಬು ಜಗಜೀವನರಾಂ ರವರ ಜಯಂತಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ನನಗೆ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡುವ ಮೂಲಕ ನನಗೆ ನೇಮಕ ಮಾಡಬೇಕು ಎಂದರು.
ಈಗಾಗಲೇ ಮಾದಿಗ ಸಮಾಜದ ಪರವಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುತ್ತೇನೆ. ಹಾಗೂ ಸಮಾಜದ ಏಳಿಗೆಗಾಗಿ ನಾನು ಶ್ರಮಿಸುತ್ತಿದ್ದೆನೆ. ಮಾದಿಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬುದು ನನ್ನ ಆಸೆಯಾಗಿದೆ.ಆದ್ದರಿಂದ ಮಾದಿಗ ಸಮಾಜದ ಹಿರಿಯ ಜೀವಿಗಳು,ಸಾಮಾಜಿಕ ಚಿಂತಕರು,ಹಿರಿಯ ಹೋರಾಟಗಾರರು ಎಲ್ಲರೂ ಸೇರಿ ಈ ಬಾರಿ ನಡೆಯುವ 119ನೇ ಡಾ.ಬಾಬು ಜಗಜೀನರಾಂ ಜಿಲ್ಲಾ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.
