ಮಹಾಳಪಯ್ಯಾನ ಜಾತ್ರೆ
ಮಹಾಳಪಯ್ಯಾನ ಜಾತ್ರೆ
ಕಮಲನಗರ :ತಾಲೂಕಿನ ಡೋಣಗಾoವ (ಎಂ) ಗ್ರಾಮದ ಆರಾಧ್ಯ ದೇವರಾದ ಕಣ್ಣೇರಿ ವನದಲ್ಲಿ ಶ್ರೀ ಸುಕ್ಷೇತ್ರ ಭಕ್ತಮುಡಿ ತಪೋವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಗೌರಿ ಮಾಘ ಹುಣ್ಣಿಮೆಯಂದು ವಿಜೃಂಭಣೆಯಿoದ ಜಾತ್ರೆ ನಡೆಯಿತು.
ಗಡಿ ಭಾಗದಲ್ಲಿ ತನ್ನದೆ ಆದ ಇತಿಹಾಸ ಹೊಂದಿರುವ ಈ ಜಾತ್ರೆಗೆ ಪಕ್ಕದ ಮಹಾರಾಷ್ಟ್ರ, ಅಂದ್ರಾ ಪ್ರದೇಶ, ಹಾಗೂ ತೆಲಂಗಾಣ, ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರು ಹರಕೆ ಹೊತ್ತ ಭಕ್ತರು ದರುಶನಕ್ಕೆ ಬಂದಿದರು.ನಾಂದೇಡ್ ಲಾತೂರ, ಸೋಲಾಪುರ ಉದಗೀರ,ದೇಗಲೂರ,ಅಕ್ಕಲಕೋಟ,ಉಮರ್ಗಾ, ಮುಂಬೈ, ಪುಣೆ, ಆಂಧ್ರಪ್ರದೇಶದ ಮೇದಕ್,ಬಿಚ್ ಕುಂದಿ, ನಾರಾಯಣ ಖೇಡ,ಅಕ್ಕ ಪಕ್ಕದ ಕೊಟಗ್ಯಾಳ,ಮುರ್ಕಿ,ಖತಗಾಂವ, ರಂಡ್ಯಾಳ,ಚಿಮ್ಮೆಗಾಂವ,ಬೆಳಕುಣಿ,ತೋರಣಾ, ಕಮಲನಗರ, ಮುಂತಾದ ಗ್ರಾಮದ ಭಕ್ತರು ಆಗಮಿಸಿ ದರುಶನ ಪಡೆದರು.
*ಪಲ್ಲಕ್ಕಿ ಉತ್ಸವ* : ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯ ಅವರ ನೇತೃತ್ವದಲ್ಲಿ ಭಕ್ತರು ಸೇರಿಕೊಂಡು ಬೆಳಗ್ಗೆ 8 ಗಂಟೆಗೆ ಶ್ರೀ ಹಾವಗಿಸ್ವಾಮಿ
ಸ್ವಾಮಿಜಿ ಅವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ವಿವಿಧ ಬಡಾವಣೆಗಳಿಂದ ಬಾಜಾ ಭಜಂತ್ರಿಯೊಂದಿಗೆ ಜಯಘೋಷ ಹಾಕುತ್ತಾ ಜಾತ್ರಾ ಸ್ಥಳಕ್ಕೆ ಬಂದು ತಲುಪಿತ್ತು.
*ಧರ್ಮಸಭೆ *: ಶಂಭುಲಿಂಗ ಶಿವಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧರ್ಮ ಸಭೆ ನಡೆಯಿತು.
ಪಶು ಪ್ರದರ್ಶನ ಮತ್ತು ಪೈಲ್ವಾನ್ ರಿಂದ ಜಂಗಿ ಕುಸ್ತಿಗಳು ನಡೆದವು. ಮಹಾರಾಷ್ಟ್ರದ ಲಾತೂರ, ನಾಂದೇಡ, ಹಣೆಗಾಂವ, ದೇವಣಿ, ದೇಗಲೂರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ಕುಸ್ತಿ ಪಟುಗಳು ಪಾಲ್ಗೊಡಿದರು.
, ಉಮಾಕಾಂತ ದೇಶಿ ಕೇಂದ್ರ ಸ್ವಾಮಿ, ಹಾವಗಿಲಿಂಗೇಶ್ವರ ಶಿವಾಚಾರ್ಯ ಶಿವಣಿ-ಹಲಬರ್ಗಾ, ಶಂಕರಲಿಂಗ ಶಿವಾಚಾರ್ಯ ಹಣೆಗಾಂವ, ಬಸವಲಿಂಗ ಮಹಾಸ್ವಾಮಿ ಅಕ್ಕಲಕೋಟ, ಗಂಗಾಧರ ಮಹಾಸ್ವಾಮಿ ಜವಳಿ, ಮಹಾಂತ ಮಹಾಸ್ವಾಮಿ ಜವಳಿ, ಬಸವಲಿಂಗ ಶಿವಾಚಾರ್ಯ ಕವಳಾಸ, ಶಿವಾನಂದ ಮಹಾಸ್ವಾಮಿ ಸಾಯಗಾಂವ, , ಸಿದ್ಧಲಿಂಗ ಶಿವಾಚಾರ್ಯ ದೇವಣಿ, ಇವರು ಉಪಸ್ಥಿತರಿದ್ದರು.
ಬಂದ ಭಕ್ತಾದಿಗಳಿಗೆಲರಿಗೂ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು.ಶಾಂತಿ ಸುವ್ಯವಸ್ಥೆಗಾಗಿ ಕಮಲನಗರ ತಾಲೂಕಿನ ಸಿಪಿಐ ಶ್ರೀಕಾಂತ್ ಅಲ್ಲಾಪುರೆ ಪಿಎಸ್ಐ ಆಶಾ ರಾಠೋಡ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗ್ರಹ ರಕ್ಷಕ ಸಿಬ್ಬಂದಿ ಬಿಗ್ಗಿ ಬಂದೋಬಸ್ತ್ ಮಾಡಲಾಗಿತ್ತು.
