ಚಿಂಚೋಳಿ ನ್ಯಾಯಾಲಯ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿದ ಹೈಕೋರ್ಟ ನ್ಯಾಯಮೂರ್ತಿ

ಚಿಂಚೋಳಿ ನ್ಯಾಯಾಲಯ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿದ ಹೈಕೋರ್ಟ ನ್ಯಾಯಮೂರ್ತಿ

ಚಿಂಚೋಳಿ ನ್ಯಾಯಾಲಯ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿದ ಹೈಕೋರ್ಟ ನ್ಯಾಯಮೂರ್ತಿ 

ಚಿಂಚೋಳಿ: ಪಟ್ಟಣದ ವಿವಿಧ ನ್ಯಾಯಾಲಯಗಳ ಕಟ್ಟಡವನ್ನು ಹೈಕೋರ್ಟ ನ್ಯಾಯಾಧೀಶರು ಹಾಗೂ ಕಲಬುರಗಿ‌ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ. ನಟರಾಜನ ಶನಿವಾರ ಪರಿಶೀಲಿಸಿದರು.

ಶತಮಾನದಷ್ಟು ಹಳೆಯದಾದ ಪ್ರಧಾನ ಸಿವಿಲ್ ನ್ಯಾಯಾಲಯ ಕಟ್ಟಡ ಸೋರುತ್ತಿದೆ. ಕಲಾಪ ನಡೆಸಲು ತೊಂದರೆಯಾಗುತ್ತಿರುವ ಕುರಿತು ಮಾಹಿತಿ ಪಡೆದರು. ಇದರೊಂದಿಗೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಟ್ಟಡ ಪರ್ಸಿ ಹಾಳಾಗಿರುವುದು, ಗೋಡೆಗಳಲ್ಲಿ ಬಿರುಕು ಮೂಡಿರುವುದು ಖುದ್ದು ವೀಕ್ಷಿಸಿದರು. ನಿಜಾಮ ಕಾಲದ ಕಟ್ಟಡದ ಉರ್ದು ಫಲಕದ ಫೋಟೊವನ್ನು‌ನ್ಯಾಮೂರ್ತಿಗಳು ತಮ್ಮ‌ಮೋಬೈಲನಲ್ಲಿ‌ ಸೆರೆ ಹಿಡಿದುಕೊಂಡರು. ನೂತನ ಕಟ್ಟಡದ ಉದ್ದೇಶಿತ ಸ್ಥಳ ವೀಕ್ಷಿಸಿ ಅದರ ನಕಾಸೆ, ವಿನ್ಯಾಸದ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರಗಳಿಂದ ಮಾಹಿತಿ‌ ಪಡೆದರು. ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ ಗಂಗಮ್ಮ ಗೌರವ ವಂದನೆ ಸಲ್ಲಿಸಿದರು. ಪ್ರಾದೇಶಿಕ ಅರಣ್ಯ ವಲಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು‌ಸಸಿ ನೆಟ್ಟರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಾಗಶ್ರೀ, ಚಿಂಚೋಳಿಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಕಾಳೆ, ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ದತ್ತಕುಮಾರ ಜವಳಕರ ಹಾಗೂ ಸಿಬ್ಬಂದಿ ಮತ್ತು ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಮಾಜಿ ಅಧ್ಯಕ್ಷ ಸುದರ್ಶನ ಬಿರಾದಾರ, ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನೀಯರ ಡಿ.ಎಲ್ ಗಾಜರೆ, ಸಹಾಯಕ‌ ಕಾರ್ಯಪಾಲಕ ಇಂಜಿನಿಯರ ಬಸವರಾಜ‌ ಬೈನೂರು, ಗಿರಿರಾಜ ಸಜ್ಜನಶೆಟ್ಟಿ, ರವಿ ಪಾಟೀಲ, ಕೇಶವ ಕುಲಕರ್ಣಿ, ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಶಾಂತರೆಡ್ಡಿ, ವನ್ಯಜೀವಿ ಧಾಮದ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ, ಭೀಮಶೆಟ್ಟಿ ಪಾಟೀಲ, ನೀಲಕಂಠ ರಾಠೋಡ, ಚಂದ್ರಶೆಟ್ಟಿ‌ ಜಾಧವ, ಗುಂಡಪ್ಪ ಗೋಖಲೆ, ಜಗನ್ನಾಥ ಗಂಜಗಿರಿ, ಶ್ರೀನಿವಾಸ ಬಂಡಿ, ರಾಜು ಉಡಗಿ, ಉಮೇಶ ಪಾಟೀಲ‌ ಮೊದಲಾದವರು ಇದ್ದರು.