ಡಾ ಭಾರತೀ ರವೀಂದ್ರರವರ ಜ್ಯೋತಿರ್ಗೀತಾ ಕೃತಿ ಬಿಡುಗಡೆ

ಡಾ ಭಾರತೀ ರವೀಂದ್ರರವರ ಜ್ಯೋತಿರ್ಗೀತಾ ಕೃತಿ ಬಿಡುಗಡೆ

ಡಾ ಭಾರತೀ ರವೀಂದ್ರರವರ ಜ್ಯೋತಿರ್ಗೀತಾ ಕೃತಿ ಬಿಡುಗಡೆ 

 ಶ್ರೀದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ 38ನೇ ಪುರಂದರೋತ್ಸವ ಕಾರ್ಯಕ್ರಮವು ನಗರದ ಜಯನಗರ 8ನೇ ಬಡಾವಣೆ ಬೆಳಗೋಡು ಕಲ್ಯಾಣ ಮಂಟಪದಲ್ಲಿ ಭಕ್ತಿಭಾವ ಹಾಗೂ ಜ್ಞಾನವೈಭವದೊಂದಿಗೆ ಅದ್ಧೂರಿಯಾಗಿ ನಡೆಯಿತು.

ಪ್ರತಿ ವರ್ಷ ಜ್ಞಾನ–ಸಂಸ್ಕೃತಿ–ಸಾಧನೆಗೆ ವೇದಿಕೆಯಾಗುವ ಈ ಜ್ಞಾನ ಸತ್ರ ದಲ್ಲಿ  ಪುಸ್ತಕ ಬಿಡುಗಡೆ ಪ್ರಮುಖ ಅಂಗವಾಗಿದ್ದು, ಈ ಬಾರಿ ಅದರ ಮಹತ್ವ ಇನ್ನಷ್ಟು ಹೆಚ್ಚಿತ್ತು. ಕಾರ್ಯಕ್ರಮವನ್ನು ಭುವನಗಿರಿ ಆಶ್ರಮದ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮಿಗಳು ಅವರು ಉದ್ಘಾಟಿಸಿ,  ಜ್ಯೋತಿರ್ಗೀತಾ – ಸಮನ್ವಯದ ದರ್ಶನ

 ಬಿಡುಗಡೆಮಾಡಿ ಮಾತನಾಡುತ್ತ 

ಜ್ಯೋತಿಷ್ಯಶಾಸ್ತ್ರ ಮತ್ತು ಭಗವದ್ಗೀತೆ – ಈ ಎರಡರ ತಾತ್ವಿಕ ಸಮನ್ವಯವನ್ನು ಮಾಡಿರುವ ಅಪರೂಪದ ಅಧ್ಯಯನಾತ್ಮಕ ಕೃತಿಯೇ ಜ್ಯೋತಿರ್ಗೀತಾ.ಜ್ಯೋತಿಷ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಭಾರತಿ ರವೀಂದ್ರ ಅವರು ಶಾಸ್ತ್ರಜ್ಞಾನ, ತಾತ್ವಿಕ ಚಿಂತನೆ ಹಾಗೂ ಅನುಭವದ ಸಂಗಮವಾಗಿ ಮೂಡಿಬಂದಿರುವ ಈ ಕೃತಿ, ಜ್ಯೋತಿಷ್ಯ ಆಸಕ್ತರು, ಗೀತಾ ಅಧ್ಯಯನಕರು ಹಾಗೂ ಆತ್ಮಚಿಂತಕರಿಗೆ ಮಾರ್ಗದರ್ಶಕ ಗ್ರಂಥವಾಗಲಿದೆ.

ಶರೀರ ಮತ್ತು ಮನಸ್ಸಿನ ನಡುವಿನ ಸಮತೋಲನವನ್ನು ಸಾಧಿಸಿ ಜೀವನವನ್ನು ಸಾರ್ಥಕವಾಗಿ ರೂಪಿಸಿಕೊಳ್ಳುವ ಮಾರ್ಗವನ್ನು ತಿಳಿಸುವ ಶಾಶ್ವತ ಗ್ರಂಥವೇ ಭಗವದ್ಗೀತೆ.

ಇದಕ್ಕೆ ಪೂರಕವಾಗಿ, ಶರೀರ–ಮನಸ್ಸುಗಳ ದೃಢತೆ ಹಾಗೂ ಜೀವನದ ಏರುಪೇರುಗಳಿಗೆ ಮಾರ್ಗದರ್ಶನ ನೀಡುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ.

ಮಾನವನ ಪಂಚ ಬಾಹ್ಯ ಇಂದ್ರಿಯಗಳನ್ನು ನಿಯಂತ್ರಿಸಿ ಸಾಧನಾಮಾರ್ಗಕ್ಕೆ ಪ್ರೇರೇಪಿಸುವುದು ಆಂತರಿಕ ಆರನೇ ಇಂದ್ರಿಯವಾದ ಮನಸ್ಸು. ಆದ್ದರಿಂದ, ಮನಸ್ಸೇ ಮಾನವ ಬದುಕಿನ ಕೇಂದ್ರಬಿಂದು.

ಜ್ಯೋತಿಷ್ಯದಲ್ಲಿ ಮನಸ್ಸಿನ ಪ್ರತಿನಿಧಿ ಚಂದ್ರ. ಅದೇ ಮನಸ್ಸಿನ ಅಭಿಮಾನಿ ದೇವತೆ ಚಂದ್ರವಂಶೀಯ ಶ್ರೀಕೃಷ್ಣ.

ಈ ದರ್ಶನಾತ್ಮಕ ಸಂಬಂಧವನ್ನು ಆಳವಾಗಿ ವಿವರಿಸುತ್ತಾ, ಭಗವದ್ಗೀತೆ ಮತ್ತು ಜ್ಯೋತಿಷ್ಯಶಾಸ್ತ್ರಗಳ ಪರಸ್ಪರ ಪೂರಕತೆಯನ್ನು ವಿಶ್ಲೇಷಿಸುವ ಪ್ರಯತ್ನವೇ ಜ್ಯೋತಿರ್ಗೀತಾಎಂದು ಅಭಿಪ್ರಾಯಪಟ್ಟರು. ಸಂಘದ ಅಧ್ಯಕ್ಷೆ ಡಾ. ಜಿ ವಿ. ಶಾಂತಾಬಾಯಿ,ಡಾ. ಪರಶುರಾಮ್ ಬೆಟಗೇರಿ ಮೊದಲಾದವರು ಉಪಸ್ಥಿತರಿದ್ದರು.