15 ದಿನಗಳ ರಂಗಗೀತೆ ಕಾರ್ಯಾಗಾರಕ್ಕೆ ಮೈಸೂರಿನಲ್ಲಿ ಭವ್ಯ ಸಮಾರೋಪ

15 ದಿನಗಳ ರಂಗಗೀತೆ ಕಾರ್ಯಾಗಾರಕ್ಕೆ ಮೈಸೂರಿನಲ್ಲಿ ಭವ್ಯ ಸಮಾರೋಪ

ವೃತ್ತಿರಂಗಭೂಮಿಯ 15 ದಿನಗಳ ರಂಗಗೀತೆ ಕಾರ್ಯಾಗಾರಕ್ಕೆ ಸಮಾರೋಪ

ರಂಗಾಯಣ ದಾವಣಗೆರೆ ಮತ್ತು ಸಂಗೀತ ವಿಶ್ವವಿದ್ಯಾನಿಲಯದ ಸಂಯುಕ್ತ ಆಶಯ 

ಮೈಸೂರು:ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 15 ದಿನಗಳ “ರಂಗ ಸಂಗೀತ ಹಾಗೂ ಅಭಿನಯ ಸಮೇತ ರಂಗಗೀತೆಗಳ ಕಲಿಕಾ ಕಾರ್ಯಾಗಾರ” ಯಶಸ್ವಿಯಾಗಿ ಸಂಪನ್ನಗೊಂಡಿತು.

ಜುಲೈ 16, 2025ರ ಬುಧವಾರ ಸಂಜೆ 5 ಗಂಟೆಗೆ ಮೈಸೂರಿನ ಕೆ.ಎಸ್.ಜೆ.ಜಿ.ಹ್ ಸಭಾಂಗಣದಲ್ಲಿ ಸಮಾರೋಪ ಮತ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಶ್ರೀಮತಿ ಕೆ.ಎಂ. ಗಾಯತ್ರಿ ಐ.ಎ.ಎಸ್. ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟ ಕೋಟೆ ವಹಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ

* ಕಾರ್ಯಾಗಾರ ನಿರ್ದೇಶಕ ಶ್ರೀ ಪುಟ್ಟಣ್ಣಯ್ಯ ವೈ.ಎಂ.

* ಪೌರಾಣಿಕ ನಾಟಕ ನಿರ್ದೇಶಕ ಶ್ರೀ ರಾಜಪ್ಪ ಕಿರಗಸೂರು

* ರಂಗಾಯಣ ಮೈಸೂರಿನ ನಿರ್ದೇಶಕ ಶ್ರೀ ಸತೀಶ್ ತಿಪಟೂರು

* ಖ್ಯಾತ ನಾಟಕಕಾರ ಡಾ. ರಾಜಪ್ಪ ದಳವಾಯಿ

* ರಂಗಾಯಣ ದಾವಣಗೆರೆ ನಿರ್ದೇಶಕ ಶ್ರೀ ಮಲ್ಲಿಕಾರ್ಜುನ ಕಡಕೋಳ ಪಾಲ್ಗೊಳ್ಳಲಿದ್ದಾರೆ.

ಶ್ರೀ ಸುಪ್ರೀತ್ ಎಸ್. ಭಾರದ್ವಾಜ್ ಶಿಬಿರದ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೃತ್ತಿರಂಗಭೂಮಿಯ ವೈಶಿಷ್ಟ್ಯತೆ ಕುರಿತು ಹಿರಿಯ ರಂಗಕರ್ಮಿ ಎಚ್.ಕೆ. ಯೋಗಾನರಸಿಂಹ ಮೂರ್ತಿ ಅವರು “ವೃತ್ತಿ ರಂಗಭೂಮಿ ಎಂಬುದು ಹಚ್ಚಿಟ್ಟ ಕರ್ಪೂರ – ಅಲ್ಲಿ ಇದ್ದಿಲು ಹುಡುಕುವುದು ಬೇಡ ಎಂಬ ಸೂಕ್ತವಾಣಿ ನೀಡಿದ್ದು, ಕಾರ್ಯಕ್ರಮದ ಗಂಭೀರತೆಗೆ ಬೆಳಕು ಚೆಲ್ಲುತ್ತದೆ.

-