ಕಣ್ಣಿ ಮಾರ್ಕೆಟ್ ಟ್ರಾಫಿಕ್ ಸಮಸ್ಯೆ ಇತ್ಯಾರ್ಥಕ್ಕೆ ಖಾಕಿ ಪ್ಲಾನ್
ಕಣ್ಣಿ ಮಾರ್ಕೆಟ್ ಟ್ರಾಫಿಕ್ ಸಮಸ್ಯೆ ಇತ್ಯಾರ್ಥಕ್ಕೆ ಖಾಕಿ ಪ್ಲಾನ್
ಕಲಬುರಗಿ: ನಗರದ ಕಣ್ಣಿ ಮಾರ್ಕೆಟ್ಗೆ ಬರುವ ಸಾರ್ವಜನಿಕರ ವಾಹನದ ಪಾರ್ಕಿಂಗ್ ಸಮಸ್ಯೆಯ ಹಾಗೂ ಸಂಚಾರ ದಟ್ಟಣೆಯ ಇತ್ಯಾರ್ಥಕ್ಕೆ ಸಂಚಾರಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಢಗೆ ಅವರ ಸೂಚನೆಯ ಮೆರೆಗೆ ಸಂಚಾರಿ ಪೊಲೀಸ್ ಠಾಣೆ-1ರ ಪಿಐ ಮಹಾಂತೇಶ ಪಾಟೀಲ್ ಅವರ ನೇತೃತ್ವದಲ್ಲಿ ನಗರದ ಕಣ್ಣಿ ಮಾರ್ಕೆಟ್
ಕಣ್ಣಿ ಮಾರ್ಕೆಟ್ ಬಳಿಯಲ್ಲಿ ಪಾರ್ಕಿಂಗ್ಗಾಗಿ ಸ್ಥಳವನ್ನು ಸ್ವಚ್ಛವಾಗಿಸಿ, ಮುರುಮ್ ಹಾಕಿಸಿದ ಪೊಲೀಸರು ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಿದ್ದಾರೆ.
ಕಣ್ಣಿ ಮಾರ್ಕೆಟ್ಗೆ ಬರುವ ಬಹುತೇಕ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ವಾಹನ ಸಂಚಾರಕ್ಕೆ ದಟ್ಟಣೆ ಉಂಟಾಗುತ್ತಿತ್ತು. ಈಗ ಸಾರ್ವಜನಿಕರ ವಾಹನಗಳಿಗೆ ಸ್ಥಳ ನಿಯೋಜನೆ ಮಾಡಿದ್ದರಿಂದ ಕಣ್ಣಿ ಮಾರ್ಕೆಟ್ಗೆ ಬರುವ ವಾಹನ ಸವಾರರು ತಮ್ಮ ವಾಹನಗಳನ್ನು ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಉಚಿತವಾಗಿಯೇ ನಿಲ್ಲಿಸುವಂತೆ ಪೊಲೀಸರು ವ್ಯವಸ್ಥೆ ಮಾಡಿದ್ದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಇನ್ನುಮುಂದೆ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಚಾರಿ 1 ಠಾಣೆಯ ಪಿಐ ಮಹಾಂತೇಶ ಪಾಟೀಲ, ಎಎಸ್ಐ ನಿಂಗಪ್ಪ, ಬಾಬುಮಿಯಾ ಉಪಸ್ಥಿತರಿದ್ದರು.