ಇಂದಿನ ಮಕ್ಕಳು ನಾಳಿನ ಭಾಗ್ಯೋದಯ ಶಿಲ್ಪಿಗಳು

ಇಂದಿನ ಮಕ್ಕಳು ನಾಳಿನ ಭಾಗ್ಯೋದಯ ಶಿಲ್ಪಿಗಳು

ಇಂದಿನ ಮಕ್ಕಳು ನಾಳಿನ ಭಾಗ್ಯೋದಯ ಶಿಲ್ಪಿಗಳು

ಸರ್ಕಾರಿ ಶಾಲೆಯ ಮಕ್ಕಳು ಅತ್ಯಂತ ನಿಪುಣರು ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸರಿಯಾದ ಬುನಾದಿಯ ಅವಶ್ಯಕತೆ ಇದೆ. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳಿದ್ದು ಅದನ್ನು 

ಅವರು ಸರಿಯಾಗಿ ಸದುಪಯೋಗಪಡಿಸಿಕೊಂಡು ಮುಂದೆ ಸಾಗಿದಾಗ ಯಶಸ್ಸು ಖಂಡಿತ ಲಭಿಸುತ್ತದೆ. ಬಿಸಿಹಾಲು, ಮೊಟ್ಟೆ,ಬಿಸಿಊಟ,ವಿದ್ಯಾರ್ಥಿ ವೇತನ,ಪಠ್ಯಪುಸ್ತಕ ಇವೆಲ್ಲವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆದು ಮುಂದೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೈಜೋಡಿಸಲು ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದರಾಮ ಮಾಹುರ ಒಂದನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

ಮುಖ್ಯ ಗುರುಗಳಾದ ಶಶಿಕಾಂತ ದೊಡಮನಿ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಜೊತೆಗೂಡಿ ವಿದ್ಯಾರ್ಥಿಸ್ನೇಹಿ ವಾತಾವರಣ ನಿರ್ಮಿಸಿ ಉತ್ತಮ ಗುಣಮಟ್ಟದ ಕಲಿಕೆಗೆ ಸದಾ ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು ಮತ್ತು ವಿದ್ಯಾರ್ಥಿಗಳ ಕನಸುಗಳ ಸಾಕಾರಕ್ಕಾಗಿ ನಾವೆಲ್ಲರೂ ಕಂಕಣ ಬದ್ಧರಾಗಿ ದುಡಿಯುತ್ತೇವೆಂದು ಹೇಳಿದರು. 

ಶಾಲೆಯ ಹಿರಿಯ ವಿದ್ಯಾರ್ಥಿಗಳು ಪುಷ್ಪವನ್ನು ಚೆಲ್ಲುವುದರ ಮೂಲಕ ಅತ್ಯಂತ ಪ್ರೀತಿಯಿಂದ ಅವರನ್ನ ಬರಮಾಡಿಕೊಂಡರು ಮತ್ತು ಅವರಿಗೆ ಪೆನ್ನು, ಪೆನ್ಸಿಲ್, ಶಾರ್ಪ್ನರ್,ಕಲರ್ ಪೆನ್,ಸ್ಕೇಲ್,ಗಮ್ ಇತ್ಯಾದಿ ವಸ್ತುಗಳುಳ್ಳ ಕಿಟ್ ಚಾಕ್ಲೇಟ್ ಅನ್ನು ಕಾಣಿಕೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಮಲಕಣ್ಣ ಯಂಕಂಚಿ,

ಸಿಬ್ಬಂದಿಗಳಾದ ರೇಖಾ ಗಜಕೋಶ,ಪರಮಾನಂದ ಸರಸಂಬಿ,ಜಾವೀದ ಹುಂಡೇಕಾರ, ಜಿರೋಬೆ ಸುಜಾತ, ಶರಣಬಸು ದೇಸಾಯಿ, ಬಸವರಾಜ್ ಸರ್ ವಿಜಯ್ ಸರ್ ಹಾಜರಿದ್ದರು.