ಸಾಲಬಾಧೆಗೆ ನಾಗಪ್ಪ ಪೂಜಾರಿ ರೈತ ಆತ್ಮಹತ್ಯೆ, ಪರಿಹಾರಕ್ಕೆ ಶಾಸಕರ ವಿರುದ್ಧ ಸಿದ್ದಲಿಂಗ ಪೂಜಾರಿ ಆಕ್ರೊಶ.
ಸಾಲಬಾಧೆಗೆ ನಾಗಪ್ಪ ಪೂಜಾರಿ ರೈತ ಆತ್ಮಹತ್ಯೆ, ಪರಿಹಾರಕ್ಕೆ ಶಾಸಕರ ವಿರುದ್ಧ ಸಿದ್ದಲಿಂಗ ಪೂಜಾರಿ ಆಕ್ರೊಶ.
ಜೆವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ನಾಗಪ್ಪ ತಂದೆ ಸಂಗಪ್ಪ ಪೂಜಾರಿ ಮಾರಡಗಿ ಅವರು ಸಾಲಬಾಧೆಯಿಂದ ಮನನೊಂದು ತಮ್ಮ ಸ್ವಂತ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಈ ಘಟನೆ ಸಂಗಾವಿ ಗ್ರಾಮದಲ್ಲಿ ನಡೆದಿದೆ , ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಾಗಪ್ಪ ಅವರು ಎಸ್ ಬಿ ಐ ಬ್ಯಾಂಕಿನಲ್ಲಿ 1 ಲಕ್ಷ ಸಾಲ ಮಾಡಿಕೊಂಡಿದ್ದಾರೆ . ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 40,000 , ಕೈಗಡ 2 .50.000 ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ನಾಗಪ್ಪ ಪೂಜಾರಿ ರೈತ ಆತ್ಮಹತ್ಯೆ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಅವರು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸ್ಥಳೀಯ ಶಾಸಕರಾದ ಡಾ ಅಜಯ್ ಸಿಂಗ್ ಅವರು ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ಧನ ವಿತರಿಸಬೇಕಾಗಿತ್ತು ಆದರೆ ಇದುವರೆಗೆ ಶಾಸಕರು ಮೃತ ರೈತನ ಕುಟುಂಬಕ್ಕೆ ಭೇಟಿ ನೀಡದಿರುವದಕ್ಕೆ ಬೇಸರ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ