ಭಕ್ತಿಯ ಬೆಳಕು: ಶಾಂತಿನಗರದ ಭಕ್ತನಿಂದ ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಅನ್ನಪ್ರಸಾದ

ಹೈದ್ರಾಬಾದ್ ಶಾಂತಿನಗರದ ಬಡವ ಭಕ್ತನಿಂದ ಶ್ರೀಶೈಲ ಪಾದಯಾತ್ರೆ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ
ಕಲಬುರಗಿ: ಗಾಣಗಾಪುರ ಮಾರ್ಚ್ 23 ಗಾಣಗಾಪುರದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತಾದಿಗಳಿಗೆ, ಕರ್ನೂಲ ಸಮೀಪದ ಶಾಂತಿನಗರದ ಭಕ್ತ ಶ್ರೀದತ್ತ ಆಂಜನೇಯ ಅವರಿಂದ ವಿಶೇಷ ಸೇವೆ ಸಲ್ಲಿಸಲಾಗಿದೆ. 25 ವರ್ಷಗಳಿಂದ ನಿರಂತರವಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಿಸುತ್ತಿರುವ ಅಂಜಿ, ಈ ವರ್ಷವೂ ತನ್ನ ಸೇವಾತಾತ್ಪರ್ಯ ತೋರಿದ್ದಾರೆ.
ಭಕ್ತಾದಿಗಳಿಗೆ ಪ್ರಸಾದ ಹಾಗೂ ವಸ್ತ್ರ ವಿತರಣೆ ಮಾರ್ಚ್ 23ರಂದು ನಡೆದ ಈ ಭಕ್ತಿ ಸೇವೆಯಲ್ಲಿ, 500ಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು. ಪುರುಷ ಭಕ್ತರಿಗೆ ಪಂಚೆ-ಶರ್ಟ್, ಹೆಣ್ಣುಮಕ್ಕಳಿಗೆ ಸೀರೆ ವಿತರಿಸಿ, ಭಕ್ತಾದಿಗಳಿಗೆ ಹೃತ್ಪೂರ್ವಕ ಆತಿಥ್ಯ ನೀಡಲಾಯಿತು.
ವಿಶೇಷ ಭೋಜನ ಮತ್ತು ಬೀಳ್ಕೊಡುಗೆ ತದನಂತರ ಭಕ್ತಾದಿಗಳಿಗೆ ಹೂರಣದ ಹೋಳಿಗೆ, ತುಪ್ಪ, ಪಂಚಾಮೃತ ಮತ್ತು ಭೋಜನ ಸೇವೆ ಆಯೋಜಿಸಲಾಗಿತ್ತು. ಪ್ರೀತಿಪೂರ್ಣ ಸತ್ಕಾರದ ಭಾಗವಾಗಿ ಎಲೆ-ಅಡಿಕೆ, ಐಸ್ ಕ್ರೀಮ್ ವಿತರಿಸಿ, ಭಕ್ತರನ್ನು ಭಕ್ತಿಭಾವಪೂರ್ಣವಾಗಿ ಶ್ರೀಶೈಲ ಯಾತ್ರೆಗೆ ಬೀಳ್ಕೊಡಲಾಯಿತು. ಇದನ್ನು ಬ್ಯಾಂಡು-ಬ್ಯಾAಜ್ಯು ಮೂಲಕ ಸಂಭ್ರಮಭರಿತವಾಗಿ ಆಚರಿಸಲಾಯಿತು.
ಭಕ್ತಾದಿಗಳಿಂದ ಅಂಜಿಗೆ ಕೃತಜ್ಞತೆ ಬಡವ ಭಕ್ತನಾದರೂ, ಗಾಣಗಾಪುರದ ಯಾತ್ರಿಕರಿಗೆ ಸೇವೆ ಸಲ್ಲಿಸುವುದನ್ನು ಅಂಜಿ ತನ್ನ ಜೀವನದ ಭಾಗವಾಗಿ ಮಾಡಿಕೊಂಡಿದ್ದಾರೆ. ಭಕ್ತಾದಿಗಳು, "ಅಂಜಿಯ ಸೇವೆ ನಮಗೆ ಭಕ್ತಿಯ ಪ್ರೇರಣೆ. ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಯಿಂದ ಇವರಿಗೆ ಶಕ್ತಿ ಸಿಗಲಿ" ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸೋದರಿಯಾದ ಗಾಯತ್ರಿ ಮತ್ತು ಹೈದರಾಬಾದಿನ ಚಂದ್ರಶೇಖರ್ ಸರ್ ಉಪಸ್ಥಿತರಿದ್ದು, ಭಕ್ತಿಯ ಈ ಪಾವನ ಸೇವೆಗೆ ಸಾಕ್ಷಿಯಾದರು
.