ಭಾಗ್ಯಶ್ರೀ ಲವಕುಶ ಧನ್ನಿ ಅವರಿಗೆ ಅತ್ಯುತ್ತಮ ಗ್ರಾಮೀಣ ಸ್ವಾಸ್ಥ್ಯ ಸೇವಕ ಜಿಲ್ಲಾ ಪ್ರಶಸ್ತಿ ಪ್ರಧಾನ

ಭಾಗ್ಯಶ್ರೀ ಲವಕುಶ ಧನ್ನಿ ಅವರಿಗೆ ಅತ್ಯುತ್ತಮ ಗ್ರಾಮೀಣ ಸ್ವಾಸ್ಥ್ಯ ಸೇವಕ ಜಿಲ್ಲಾ ಪ್ರಶಸ್ತಿ ಪ್ರಧಾನ

ಭಾಗ್ಯಶ್ರೀ ಲವಕುಶ ಧನ್ನಿ ಅವರಿಗೆ ಅತ್ಯುತ್ತಮ ಗ್ರಾಮೀಣ ಸ್ವಾಸ್ಥ್ಯ ಸೇವಕ ಜಿಲ್ಲಾ ಪ್ರಶಸ್ತಿ ಪ್ರಧಾನ

ಕಲಬುರಗಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಲವಕುಶ ಧನ್ನಿ ಅವರಿಗೆ ಅತ್ಯುತ್ತಮ ಗ್ರಾಮೀಣ ಸ್ವಾಸ್ಥ್ಯ ಸೇವಕ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘ ಮೈಸೂರಿನಲ್ಲಿ ಆಯೋಜಿಸಿದ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಭಾಗ್ಯಶ್ರೀ ಧನ್ನಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.

ಕಣಗಲಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಕಲೆ ಮತ್ತು ಬಾಡ ಉಪ ಕೇಂದ್ರಗಳ ಆಯುಷ್ಮಾನ ಆರೋಗ್ಯ ಮಂದಿರದಲ್ಲಿ ಭಾಗ್ಯಶ್ರೀ ಅವರು ಸಮುದಾಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಭಾಗದ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ 450 ಸಮುದಾಯ ಆರೋಗ್ಯ ಅಧಿಕಾರಿಗಳಲ್ಲಿ ಭಾಗ್ಯಶ್ರೀ ಲವಕುಶ ಧನ್ನಿ ಅವರು ಈ ಪ್ರಶಸ್ತಿಗೆ ಭಾಜನವಾದ ಏಕೈಕ ಅಧಿಕಾರಿ ಎನಿಸಿದ್ದಾರೆ.