ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ನೈಜ ಮರು ಸ್ವಾತಂತ್ರೋತ್ಸವ ದಿನ ದಂದು ನಮನರೋಹಣ ಕಾರ್ಯಕ್ರಮ

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ನೈಜ ಮರು ಸ್ವಾತಂತ್ರೋತ್ಸವ ದಿನ ದಂದು ನಮನರೋಹಣ ಕಾರ್ಯಕ್ರಮ
ಕಲಬುರಗಿ: ಕರ್ನಾಟಕ ಯುವಜನ ಒಕ್ಕೂಟ (ರಿ) ವತಿಯಿಂದ ಇಂದು (18.09.2025) ಕಲ್ಯಾಣ ಕರ್ನಾಟಕ ನೈಜ ಮರು ಸ್ವಾತಂತ್ರೋತ್ಸವ ದಿನ ವೆಂದು ಆಚರಿಸಲಾಯಿತು. 1947ರ ಆಗಸ್ಟ್ 15ರಿಂದ 1948ರ ಸೆಪ್ಟೆಂಬರ್ 18ರವರೆಗೆ ಈ ಭಾಗದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ದಿನವನ್ನು ನೈಜ ಸ್ವಾತಂತ್ರ್ಯೋತ್ಸವ ದಿನವೆಂದು ಆಚರಿಸಲಾಗುತ್ತಿದೆ.
ಕಾರ್ಯಕ್ರಮದ ಆರಂಭದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟಗಾರ ದಿ. ಗೋಪಾಲರಾವ ಗುಡಿ ಅವರ ಧರ್ಮಪತ್ನಿ ಶ್ರೀಮತಿ ಲೀಲಾಬಾಯಿ ಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಮೌನಚರಣೆ ನಡೆಸಲಾಯಿತು. KYF ಅಧ್ಯಕ್ಷ ಅನಂತ ಗುಡಿ ಅವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮಕ್ಕೆ ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದು, ಹಿರಿಯ ನ್ಯಾಯವಾದಿ ಸಂಜೀವ ಕುಮಾರ ಡೊಂಗರಗೌಡ್ರು ಅತಿಥಿಗಳಾಗಿ ಪಾಲ್ಗೊಂಡರು. ಹಿರಿಯ ನಾಗರಿಕ ಹಾಗೂ ವಿಶ್ರಾಂತ ಶಿಕ್ಷಕರಾದ ಎಸ್. ಎ. ಪಾಟೀಲ ಅವರ ನೇತೃತ್ವದಲ್ಲಿ KYF ಪದಾಧಿಕಾರಿಗಳು ಎಸ್. ವಿ. ಪಿ. ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನರೋಹಣ ನೆರವೇರಿಸಿದರು. ನಂತರ ಸರ್ದಾರ ಪಟೇಲ್ ಸೇರಿದಂತೆ ನೈಜ ಹೋರಾಟಗಾರರ ಭಾವ ಚಿತ್ರ ಗಳಿಗೆ ಸ್ಮರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರು, ಯುವಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನ್ಯಾಯವಾದಿಗಳಾದ ಸುರೇಶ ಘನಾತೆ, ನಾಗರಾಜ ವಾಡೇಕರ, ಸಾಮಾಜಿಕ ಕಾರ್ಯಕರ್ತರಾದ ಆನಂದ ಹೋನಗುಂಟಿ, ಶರಣು ಸಾವಳಗಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ASI ಪಟ್ಟೇದ್ ರವರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದರು. Kyf ಸಂಘಟನೆ ಭಾಗವಹಿಸದ ಇತಿಹಾಸ ಆಸಕ್ತರನ್ನು ಇದೆ ಸಂದರ್ಭದಲ್ಲಿ ಅಭಿನಂದನೆ ತಿಳಿಸಿತು.
-