ಜಯದೇವಿ ಯದಲಾಪುರೆ, ಶಿಕ್ಷಕಿ, ಸಾಹಿತಿ

ಜಯದೇವಿ ಯದಲಾಪುರೆ, ಶಿಕ್ಷಕಿ, ಸಾಹಿತಿ

ಅಪರೂಪದ_ಪ್ರಾಚಾರ್ಯರು ಶ್ರೀಮತಿ ಜಯದೇವಿ ಯದಲಾಪುರೆ.

ಶ್ರೀಮತಿ ಜಯದೇವಿ ಯದಲಾಪುರೆಯವರು ವೃತ್ತಿಯಲ್ಲಿ ಪ್ರಾಚಾರ್ಯರಾಗಿದ್ದು ಪ್ರವರ್ತಿಯಲ್ಲಿ ಸಾಹಿತಿ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು.

ಅಪರೂಪದ ವ್ಯಕ್ತಿತ್ವವನ್ನು ಹೊಂದಿರುವ ಜಯದೇವಿಯವರು 

""ಇವನಾರವ ಇವನಾರವ ಇವನಾರವ ಎಂದೆನಿಸದದಿರಯ್ಯ

ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ""

 ವಚನದ ಸಾರದಂತೆ ಎಲ್ಲರನ್ನು ತಮ್ಮವರೆಂದು ಭಾವಿಸುವ, ಎಲ್ಲರ ಜೊತೆ ಬೆರೆಯುವ ಸರಳತೆಯ ಸಹೃದಯಿ ಸಾಕಾರ ಮೂರ್ತಿ ಯದಲಾಪುರೆಯವರು.

  ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯದ ಒಲವು ಹೊಂದಿರುವ ಇವರು ಸಾಹಿತಿಗಳ ಶ್ರೀಮತಿ ಭಾರತಿ ವಸ್ತ್ರದ, ವಿಜಯಲಕ್ಷ್ಮಿ ಕೌಠಗೆ, ಪಾರ್ವತಿ ಸೋನಾರೆ, ಶ್ರೀದೇವಿ ಹೂಗಾರ, ಸಾಧನಾ ರಂಜೋಳಕರ, ಡಾ. ಎಂ ಜಿ. ದೇಶಪಾಂಡೆ, ಡಾ. ಸೋಮನಾಥ ಏಳವಾರ, ರಮೇಶ ಬಿರಾದಾರ, ಸಂಜೀವಕುಮಾರ ಅತಿವಾಳೆ, ಸಿದ್ರಾಮಪ್ಪ ಮಾಸಿಮಾಡೆ ಮುಂತಾದ ಪ್ರಮುಖರ ಮಾರ್ಗದರ್ಶನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

 ಯದಲಾಪುರೆಯವರು ಸುಂದಾಳ ಗ್ರಾಮದವರು. ತಂದೆ ಬಸ್ವಂತರಾವ ತಾಯಿ ಮಾಣಿಕಮ್ಮಾ ಪಾಟೀಲ  ದಂಪತಿಗಳಿಗೆ ಐದು ಜನ ಅಕ್ಕತಂಗಿಯರು , ಮೂರು ಜನ ಅಣ್ಣ ತಮ್ಮಂದಿರು ಇವರದು ಅವಿಭಕ್ತ ಕುಟುಂಬ, ತಂದೆ ಕೃಷಿಕರಾಗಿದ್ದು ತನ್ನ ಮಕ್ಕಳಿಗೆ ಒಳ್ಳೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ .

ಯದಲಾಪುರೆಯವರು 1.6.1971ರಂದು ತನ್ನ ತಾಯಿಯ ತವರೂರಾದ ಕೌಠಾ ಗ್ರಾಮದಲ್ಲಿ ಜನಸಿದರು.

ಇವರು ಸುಂದಾಳ ಗ್ರಾಮದ ಸರ್ಕಾರಿ ಪ್ರಾಥಮಿಕಶಾಲೆಯಲ್ಲಿ , ಪ್ರೌಢ ಶಿಕ್ಷಣ , ಶಿಕ್ಷಣವನ್ನು ಕಮಲನಗರ , ಭಾಲ್ಕಿಯಲ್ಲಿ ಜೂನಿಯರ್ ಕಾಲೇಜನಲ್ಲಿ ಉತ್ತಿರ್ಣರಾಗಿ ಮುಂದೆ ಬಿ. ಎ ಪದವಿಯನ್ನು ಅಕ್ಕಮಹಾದೇವಿ ಮಹಿಳಾ ವಿದ್ಯಾಲಯ ಬೀದರ, ಶಿವಾಜಿ ಕಾಲೇಜು ಭಾಲ್ಕಿ, ಬಿ. ಎಡ್ ಪದವಿಯನ್ನು ಬಿಲಾಲ ಕಾಲೇಜು ಬೀದರ ಹಾಗು ಎಂ. ಎ ಪದವಿಯನ್ನು ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟಿನಲ್ಲಿ ಪದವಿ ಪೂರ್ಣಗೊಳಿಸಿದರು.

ವೃತ್ತಿ ಜೀವನ

ಜಯದೇವಿಯವರ ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ . ಇವರು ಪ್ರಸ್ತುತ ಬೀದರಿನ ದತ್ತಗಿರಿ ಪ್ರಾಥಮಿಕ ಪ್ರೌಢಶಾಲೆ ಪ್ರಾಚಾರ್ಯರಾಗಿ (2006ರಿಂದ )ಸೇವೆ ಸಲ್ಲಿಸುತ್ತಿದ್ದಾರೆ.

ಇಂದಿನ ವಿದ್ಯಾರ್ಥಿಗಳು ನಾಳಿನ ಭವ್ಯ ಭಾರತದೇಶದ ಶಕ್ತಿ ಎಂದು ಮನಗಂಡಿರುವ ಜಯದೇವಿಯವರು ತಮ್ಮ ಶಾಲೆಯ ಮಕ್ಕಳು ಕೇವಲ ಕಲಿಕೆಯ ತರಗತಿ ಕೋಣೆಗೆ ಸೀಮಿತ ಮಾಡದೆ ಬೌದ್ಧಿಕ, ಸಾಂಸ್ಕೃತಿಕ ಹಾಗು ಇನ್ನಿತರ ಪಠ್ಯತರ ಚಟುವಟಿಕೆ ನಡೆಸುವ ಮೂಲಕ ಶಾಲೆ ಮಾದರಿಯಾಗಿದ್ದಾರೆ.  

ಸಾಹಿತ್ಯ ಹಾಗು ಸಾಮಾಜಿಕ ಸೇವೆ

 ಶ್ರೀಮತಿ ಜಯದೇವಿಯವರು ತಮ್ಮ ಪುತ್ರಿಯ ಹೆಸರಿನಲ್ಲಿ "ರತ್ನಪೂಂಜಾ ಫೌಂಡೇಶನ್ " ಸ್ಥಾಪಿಸಿ, ಇದರ ಅಡಿಯಲ್ಲಿ ಸಾಮಾಜಿಕ , ಆರ್ಥಿಕ ಧಾರ್ಮಿಕ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. 

ಅದರ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ.

1:- ರತ್ನಪೂಂಜಾ ಫೌಂಡೇಶನ್ (ಸ್ಥಾಪಕರು ಮತ್ತು ಕಾರ್ಯದರ್ಶಿ )

2:-ಉಪಾಧ್ಯಕ್ಷರು :- ಕರ್ನಾಟಕ ಜ್ಞಾನ ವಿಜ್ಞಾನ ಅಕಾಡೆಮಿ ಬೀದರ

3:-ಗೌರವ ಕಾರ್ಯದರ್ಶಿ :- ಕನ್ನಡ ಬರಹಗಾರರ ವೇದಿಕೆ ಸಂಘ

4:-ಪ್ರಧಾನ ಕಾರ್ಯದರ್ಶಿ :- ಕನ್ನಡ ಲೇಖಕಿಯರ ಸಂಘ

5:-ಮಹಿಳಾ ಕಾರ್ಯದರ್ಶಿ :- ನ್ರಪತುಂಗಾ ಕನ್ನಡ ಸಾಹಿತ್ಯ ಸಂಘ

6:-ಪ್ರಧಾನ ಕಾರ್ಯದರ್ಶಿ :- ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕ ಬೀದರ.

ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಸೇವೆ ಮಾಡುತ್ತಿದ್ದಾರೆ.

ಸಾಹಿತ್ಯ ಸೇವೆ

 ಜಯದೇವಿಯವರು ಅನೇಕ ಕನ್ನಡ ಪರ ಕಾರ್ಯಕ್ರಮಗಳಲ್ಲಿ, ಅತಿಥಿಗಳಾಗಿ, ಉಪನ್ಯಾಸಕರಾಗಿ, ಶೈಕ್ಷಣಿಕ ತರಬೇತುದಾರರಾಗಿ ಭಾಗಾವಹಿಸಿದ್ದಲ್ಲದೆ ಕಾರ್ಯಕ್ರಮಗಳ ನಿರೂಪಣೆ ಮಾಡುವದರಲ್ಲಿ ಖ್ಯಾತಿ ಹೊಂದಿದ್ದಾರೆ .

 ಜಯದೇವಿಯವರು "ದಾರಿ ಸಾಗದ ಹೊತ್ತು" ವಚನ ಸಂಪಾದನೆ ಕೃತಿ,

 ಪ್ರತಿ ವೈಚಾರಿಕತೆ ಲೇಖನಗಳ ಕೃತಿ ಪ್ರಕಟಿಸಿದ್ದು ಇನ್ನು ಅನೇಕ ಕೃತಿಗಳು ಪ್ರಕಟಣೆ ಹಂತದಲ್ಲಿವೆ.

 "ಆದರ್ಶ ಶಿಕ್ಷಕಿ" ಪ್ರಶಸ್ತಿ ಲಭಿಸಿದೆ.

1) ಆದರ್ಶ ಶಿಕ್ಷಕಿ:-ಭಾತಂಬ್ರಶ್ರೀಗಳು ಬಸವ ಮುಕ್ತಿ ಮಂದಿರ ಬೀದರ

2) ಆದರ್ಶ ಶಿಕ್ಷಣ ತಜ್ಞ.:-ಇಂಟರ್ನ್ಯಾಷನಲ್ ಆಫ್ ಎಜುಕೇಷನ್ ಅಂಡ್ ಮ್ಯಾನೇಜಮೆಂಟ್ ನ್ಯೂ ದೆಹಲಿ.

3) ಆದರ್ಶ ದಂಪತಿಗಳು:-ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಟ್ರಸ್ಟ್ ಬೆಂಗಳೂರು.

4) ಭೂಮಿ ತಾಯಿ ಪ್ರಶಸ್ತಿ :-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೀದರ.

5) ಜ್ಞಾನರತ್ನ ಪ್ರಶಸ್ತಿ:-ಬಸವ ಕೇಂದ್ರ ಬೀದರ , ಪ್ರಶಸ್ತಿ ಲಭಿಸಿವೆ.

ಲೇಖನ - ಓಂಕಾರ ಪಾಟೀಲ 

ಕಾರ್ಯದರ್ಶಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತ, ಬೀದರ್