ಚಿತ್ತಾಪುರ: ಮೂರು ಅಂಗನವಾಡಿ ಕಟ್ಟಡಗಳ ಲೋಕಾರ್ಪಣೆ ಅಂಗನವಾಡಿಗಳಲ್ಲಿ ಶುಚಿತ್ವ ಕಾಪಾಡಿ: ಸಚಿವ ಪ್ರಿಯಾಂಕ್ ಖರ್ಗೆ.
ಚಿತ್ತಾಪುರ: ಮೂರು ಅಂಗನವಾಡಿ ಕಟ್ಟಡಗಳ ಲೋಕಾರ್ಪಣೆ ಅಂಗನವಾಡಿಗಳಲ್ಲಿ ಶುಚಿತ್ವ ಕಾಪಾಡಿ: ಸಚಿವ ಪ್ರಿಯಾಂಕ್ ಖರ್ಗೆ.
ಚಿತ್ತಾಪುರ: ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸುವ ಅಡುಗೆಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ
ಪಟ್ಟಣದ ಕಾಶಿ ಬಡಾವಣೆಯಲ್ಲಿ ಅಂಗನವಾಡಿ ನೂತನ ಕಟ್ಟಡಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಕಾಶಿ ಬಡಾವಣೆ, ತೆಳಗೇರಿ, ಅಂಬೇಡ್ಕರ್ ನಗರ ಹಾಗೂ ದಂಡೋತಿಯಲ್ಲಿ ಎರಡು ಸೇರಿದಂತೆ ಒಟ್ಟು ೫ ಕಟ್ಟಡಗಳನ್ನು ಲೋಕರ್ಪಣೆಗೊಳಿಸಲಾಗಿದೆ. ೨೦೨೨-೨೩ ನೇ ಸಾಲಿನ ಕೆಕೆಆರ್ ಡಿಬಿ ಮೆಗಾ ಮ್ಯಾಕ್ರೋ ಯೋಜನೆಯಡಿಯಲ್ಲಿ ತಲಾ ರೂ ೨೦ ಲಕ್ಷ ವೆಚ್ಚದಲ್ಲಿ ಪಿಆರ್ಇ ಹಾಗೂ ಪಿಡಬ್ಲೂಡಿ ಇಲಾಖೆಗಳು ನಿರ್ಮಿಸಿವೆ ಎಂದು ಹೇಳಿದರು.
ನಂತರ ಕೇಂದ್ರಗಳಲ್ಲಿದ್ದ ಚಿಣ್ಣರೊಂದಿಗೆ ಸಚಿವರು ಕೆಲ ಕಾಲ ಸಮಯ ಕಳೆದು ಅವರಿಗೆ ಶುಭ ಹಾರೈಸಿದರು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಹಾಯಕ ನಿದೇಶಕ ರಾಜಕುಮಾರ ರಾಠೋಡ, ಶಿಶುಅಭಿವೃದ್ದಿ ಯೋಜನಾಧಿಕಾರಿ ಆರತಿ ತುಪ್ಪದ, ಪ್ರಮುಖರಾದ ಭೀಮಣ್ಣ ಸಾಲಿ, ನಾಗರೆಡ್ಡಿಗೌಡ ಕರದಾಳ, ರಮೇಶ ಮರಗೋಳ, ಶಿವಾನಂದ ಪಾಟೀಲ್, ಚಂದ್ರಶೇಖರ ಕಾಶಿ, ಶ್ರೀನಿವಾಸರೆಡ್ಡಿ ಪಾಲಪ್, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಮುಕ್ತರ ಪಟೇಲ್, ಸಾಬಣ್ಣ ಕಾಶಿ, ವಿಠಲ ಕಟ್ಟಿಮನಿ, ಶಾಂತಾಬಾಯಿ ಗಾಯಕವಾಡ, ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಮನಿ, ಮನ್ಸೂರ ಪಟೇಲ್, ಶಿವಯೋಗಿ ಸಾಹು, ಶಿವರಾಜ ಪಾಟೀಲ್, ಸಿದ್ದುಗೌಡ ತೋನಸನಳ್ಳಿ, ಶರಣಗೌಡ ತೊನಸನಳ್ಳಿ, ಮೇಲ್ವಿಚಾರಕಿ ರಮಾಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ಸಿದ್ದಮ ಸ್ಥಾವರಮಠ, ಕವಿತಾ, ರತ್ನಮ್ಮ, ಸಾವಿತ್ರಿ, ಸುಧಾ, ಶ್ವೇತಾ, ರಾಧಾ, ಕಲ್ಪನಾ, ಶಿಲ್ಪಾ, ಈರಮ್ಮ, ಪೂರ್ಣಿಮಾ ಸೇರಿದಂತೆ ಇತರರಿದ್ದರು.