ಬೆಂಕಿಮಂತ್ರಿಗೆ ಮೇಳಕುಂದಾ (ಬಿ) ಗ್ರಾಮದ ರೈತರಿಂದ ಸಲಹೆ
ಬೆಂಕಿಮಂತ್ರಿಗೆ ಮೇಳಕುಂದಾ (ಬಿ) ಗ್ರಾಮದ ರೈತರಿಂದ ಸಲಹೆ
ಕಲಬುರಗಿ : ರಾತ್ರಿ ಹೊತ್ತಿನಲ್ಲಿ ಸಿಂಗಲ್ ಪೇಸ್ ವಿದ್ಯುತ್ ನಿರಂತರವಾಗಿ ಸರಬರಾಜು ಮಾಡಬೇಕೆಂದು ಪ್ರಗತಿಪರ ರೈತ ಶ್ರೀ ಮಲ್ಲಿನಾಥ್ ಎಸ್. ಕೊಳ್ಳೂರ್ ಮೇಳಕುಂದ (ಬಿ) ಸಚಿವರಿಗೆ ಮನವಿ ಮಾಡಿದರು.
ಇಂದು ನಗರದ ಜೆಸ್ಕಾಂ ನಿಗಮ ಕಚೇರಿಯ ಆವರಣದಲ್ಲಿ ನಡೆದ ವಿದ್ಯುತ್ ಸಮಸ್ಯೆ ಕುರಿತು ರೈತರು ಮತ್ತು ಸಚಿವರ ನೇರ ಸಭೆ ಜರುಗಿತು.
ಸಚಿವ ಕೆ.ಜೆ. ಜಾರ್ಜ್, ಶಾಸಕ ಅಲ್ಲಂಪ್ರಭು ಪಾಟೀಲ್, ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಕರಲಿಂಗಣ್ಣನವರ ನೇತೃತ್ವದಲ್ಲಿ ಸಭೆ ನಡೆಯಿತು ಸಭೆಯಲ್ಲಿ ಆಗಮಿಸಿ ರೈತರ ಕುಂದು ಕೊರತೆಗಳನ್ನು ಆಲಿಸಿದರು, ರೈತರ ಪರವಾಗಿ ಮಲ್ಲಿನಾಥ್ ಎಸ್. ಕೊಳ್ಳೂರ್ ಮೇಳಕುಂದ (ಬಿ) ಅವರು ಮಾತನಾಡಿ ರಾತ್ರಿ ಹೊತ್ತಿನಲ್ಲಿ ಸಿಂಗಲ್ ಪೇಸ್ ವಿದ್ಯುತ್ ನಿರಂತರವಾಗಿ ಸರಬರಾಜು ಮಾಡಬೇಕು ಮತ್ತು ಅಕ್ರಮ್ ಸಕ್ರಮದಲ್ಲಿ. ಆರ್ ಆರ್ ನಂಬರ್ ಅನ್ನು ಕೊಟ್ಟಿದ್ದ ರೈತರಿಗೆ ಜಮೀನಿಗೆ ಕಂಬಗಳನ್ನು ಅಳವಡಿಸಬೇಕು ಹಾಗೂ ಲೋಡ್ ಹೊಂದಿದ ಟಿಸಿಗಳಿಗೆ ಹೆಚ್ಚುವರಿ ಟಿಸಿ ಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಿದರು,