ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ರೇವಣಸಿದ್ದಪ್ಪ ರೋಣದ ಆಯ್ಕೆ

ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ರೇವಣಸಿದ್ದಪ್ಪ ರೋಣದ ಆಯ್ಕೆ

ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ರೇವಣಸಿದ್ದಪ್ಪ ರೋಣದ ಆಯ್ಕೆ 

ಚಿತ್ತಾಪುರ: ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಗೌರವ ಅಧ್ಯಕ್ಷ ವಿಜಯಕುಮಾರ್ ಲೊಡ್ಡೆನವರ್ ತಿಳಿಸಿದ್ದಾರೆ. 

ಸರಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಕಿಶನ್ ರಾಥೋಡ್ ಅವರು ರೇವಣಸಿದ್ದಪ್ಪ ರೋಣದವರ ಹೆಸರು ಸೂಚಿಸಿದ್ದರು. ಮತ್ತು ನಿವೃತ್ತ ಶಿಕ್ಷಕ ಮೋನಯ್ಯ ಪಂಚಾಳ ಅನುಮೋದಿಸಿದರು. 

ಸಭೆಯಲ್ಲಿ ನಿವೃತ್ತ ನೌಕರರಾದ ಮಲ್ಲಣ್ಣ ಮೂಡಬೂಳ, ಮಲ್ಲಿಕಾರ್ಜುನ್ ಮಾಸ್ಟರ್ ಮಲಕೂಡ, ಸುಭಾಷ್ ಮೆಂಜಿ, ನಿಜಾಮುದ್ದೀನ್, ಶಿವಾಜಿ ನಿಂಬಾಳ್ಕರ್, ಬಸವರಾಜ್ ಕಲ್ಬುರ್ಗಿ ಭಾಗೋಡಿ, ಆಜಪ್ಪ ಶಹಬಾದ್, ಶಶಿಧರ್ ಉಟಗೂರ್, ಮಹಾದೇವ್ ಉಪ್ಪಾರ್, ಮಮ್ಮದ್ ಅಬ್ದುಲ್ ನಬಿ, ರವಿ ಪೋತ್ತಾರ್, ಸೇರಿದಂತೆ ಇತರರು ಇದ್ದರು. 

ಆಯ್ಕೆಯ ನಂತರ ನೂತನ ಅಧ್ಯಕ್ಷರಿಗೆ ಶಾಲುವದಿಸಿ ಸನ್ಮಾನಿಸಿದರು .