ದಶಮ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ

ದಶಮ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ

ದಶಮ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ

ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ಮಿಜಮಶಕ್ ಫಂಕ್ಷನ್ ಹಾಲ್‌ನಲ್ಲಿ ರಝಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಮತ್ತು ಕಲಬುರಗಿ ಜಿಲ್ಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಎಸ್‌ಎಲ್‌ಸಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ದೇಶ ದಶಮ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧಪಡಿಸುವುದಾಗಿತ್ತು. ಈ ಸಂದರ್ಭದಲ್ಲಿ ಡಿಡಿಎಫ್ ಅಧಿಕಾರಿ ಸೂರ್ಯಕಾಂತ್ ಮೂವನೇ ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಶಿಸ್ತಿನ ಮಹತ್ವ ಮತ್ತು ನಿರಂತರ ಶ್ರಮದ ಅಗತ್ಯತೆಯನ್ನು ಕುರಿತು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಬಿಇಓ ಸೋಮಶೇಖರ್ ಹಂಚನಾಳ ಅವರು ಕಾರ್ಯಾಗಾರದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಸಕಾರಾತ್ಮಕ ದೃಷ್ಟಿಕೋಣವನ್ನು ಪಾಲಿಸಿಕೊಳ್ಳುವ ಸಲಹೆಯನ್ನು ನೀಡಿದರು. ಕಲಬುರ್ಗಿ ಅಧ್ಯಕ್ಷ ಡಾ. ಹಮೀದ್ ಫೈಜಲ್ ಸಿದ್ದೀಖಿ ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಪರಿಣಾಮಕಾರಿ ಓದುವ ವಿಧಾನಗಳನ್ನು ಅಳವಡಿಸಿಕೊಳ್ಳಲು ಉಪಯುಕ್ತ ಸಲಹೆಗಳನ್ನು ನೀಡಿದರು. ವಿಷಯಾಧಾರಿತ ತರಗತಿಗಳು ಮತ್ತು ಮಾರ್ಗದರ್ಶಕರು ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ನಿಪುಣ ಶಿಕ್ಷಕರು ಪರೀಕ್ಷಾ ಪೇಪರ್‌ನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ವಿವರವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮೊಹಮ್ಮದ್ ನಾಸಿರುದ್ದೀನ್ (ಗಣಿತ) ಅವರು ಕಠಿಣ ಗಣಿತ ಪ್ರಶ್ನೆಗಳನ್ನು ಸುಲಭ ವಿಧಾನಗಳಲ್ಲಿ ಹೇಗೆ ಪರಿಹರಿಸಬೇಕು ಎಂಬುದುವನ್ನು ಪರಿಚಯಿಸಿದರು. ಅಮೀನ್ ಪಟೇಲ್ ಕನ್ನಡದಲ್ಲಿ ಉತ್ತರಗಳನ್ನು ಬರೆದಾಗ ಶೈಲಿ ಮತ್ತು ರಚನೆಯನ್ನು ಸುಧಾರಿಸಲು ಪ್ರಮುಖ ಸಲಹೆಗಳನ್ನು ನೀಡಿದರು. ಜಕಿಯಾ ಪ್ರವೀನ್ ವಿಜ್ಞಾನದಲ್ಲಿನ ಸಂಕೀರ್ಣ ಆಲೋಚನೆಗಳನ್ನು ಸರಳ ಉದಾಹರಣೆಯ ಮೂಲಕ ವಿವರಿಸಿದರು. ಅಂಜನಾ ಕಲ್‌ಕರ್ಣಿ ಇಂಗ್ಲಿಷ್ ಉತ್ತರಗಳನ್ನು ಸರಿಯಾದ ಪದಗಳು ಮತ್ತು ವ್ಯಾಕರಣದೊಂದಿಗೆ ಬರೆದ ಬಗ್ಗೆ ಸಲಹೆಗಳನ್ನು ನೀಡಿದರು. 

ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ತಮ್ಮ ಚತುರತೆಯಿಂದ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ಶಿಕ್ಷಕರ ಸಲಹೆಗಳನ್ನು ಗಮನದಿಂದ ಕೇಳಿದರು ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊAಡರು. ಈ ಕಾರ್ಯಾಗಾರವು ಪರೀಕ್ಷೆಗಳಿಗೆ ತಯಾರಿಯಾಗಲು ಅತ್ಯಂತ ಉಪಯುಕ್ತವಾಗಿತ್ತೆಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ಕಾರ್ಯಾಗಾರದ ಮುಖ್ಯ ಅತಿಥಿಗಳು ಮತ್ತು ಅವರ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಹಲವಾರು ಗಣ್ಯ ಅತಿಥಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

 ರಝಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಜನಾಬ್ ಸಯ್ಯದ್ ಅವರು ಎಲ್ಲಾ ಅತಿಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಅವರು ವಿದ್ಯಾರ್ಥಿಗಳಿಗೆ ನಿರಂತರ ಶ್ರಮ ಮತ್ತು ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗಳಿಗೆ ತಯಾರಾಗುವ ಸಲಹೆ ನೀಡಿದರು.

ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದ್ದು, ಕಲಿಕೆಯಲ್ಲಿ ಹೊಸ ವಿಧಾನಗಳನ್ನು ಕಲಿಯಲು ಮತ್ತು ಪರೀಕ್ಷಾ ಭಯವನ್ನು ಕಡಿಮೆ ಮಾಡಲು ಸಹಾಯಕವಾಯಿತು. ಮತ್ತು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.