ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಓರಿಯಂಟೇಶನ್

ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಓರಿಯಂಟೇಶನ್
ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ
ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಾಲೇಜಿನ ಸಮಗ್ರ ಪರಿಚಯದ ಓರಿಯಂಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಕರ್ನಾಟಕದ ಖ್ಯಾತ ಪ್ರೇರಣ ಉಪನ್ಯಾಸಕಾರರಾದ ರಮೇಶ ಉಮರಾಣಿಯವರು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡುವವರು .
ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಮಹತ್ವದ ಪಾತ್ರ ಪಾಲಕರದಾಗಿರುತ್ತದೆ ಎಂಬ ಅರಿವು ಮೂಡಿಸುವ ಉದ್ದೇಶ ಹೊಂದಿದೆ .
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪದವಿ ಪೂರ್ವ ಹಂತದ ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಜಾಗೃತಿ ಮೂಡಿಸಲಾಗುವುದು . ಪಿಯುಸಿ ಎರಡು ವರ್ಷದ ಬೋಧನೆ ಮತ್ತು ಕಲಿಕೆಯ ಸಮಗ್ರ ಮಾಹಿತಿಯನ್ನು ಒಳಗೊಂಡ ಪರಿಚಯಾತ್ಮಕ ಕಾರ್ಯಕ್ರಮ ಇದಾಗಿರುತ್ತದೆ . ಭವಿಷ್ಯದ ಅರಿವು ಮೂಡಿಸಿ ದಿಕ್ಸೂಚಿಯಾಗುವ ಕಾರ್ಯಕ್ರಮ ಇದಾಗಿದೆ . ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಕಾಲೇಜಿನ ಗೌರವ ನಿರ್ದೇಶಕರಾದ ಡಾ. ಬಿ. ರಾಮಕೃಷ್ಣ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು . ಪ್ರಾಚಾರ್ಯರಾದ ವಿನೋದಕುಮಾರ ಎಲ್. ಪತಂಗೆ ಅವರು ಉಪಸ್ಥಿತರಿರುವರು .