ವಕ್ಫ್ ಬೋರ್ಡ್ ಎಂಬ ಮರ ಜೇನು.

ವಕ್ಫ್ ಬೋರ್ಡ್ ಎಂಬ ಮರ ಜೇನು.

ವಕ್ಫ್ ಬೋರ್ಡ್ ಎಂಬ ಮರ ಜೇನು.

          ಹಿಂದೂ ಧಾರ್ಮಿಕ ಕೇಂದ್ರಗಳು ಗುಡಿಗುಂಡಾರಗಳು ಮಠ ಮಂದಿರಗಳು ಜೀರ್ಣಾವಸ್ಥೆಯಲ್ಲಿರುವ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಅವುಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆ ಅಂದರೆ ಧಾರ್ಮಿಕ ಹಾಗೂ ದತ್ತಿ ಇಲಾಖೆ ಅಸ್ತಿತ್ವಕ್ಕೆ ತರಲಾಯಿತು

ಅದೇ ರೀತಿ ಮುಸ್ಲಿಮರ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕಾಗಿ ಮತ್ತು ಅವರ ಪ್ರಾರ್ಥನೆಗಾಗಿ ಮಸೀದಿಗಳನ್ನು ಹಾಗೂ ಮುಸ್ಲಿಂ ಶಾಸ್ತ್ರಗಳನ್ನು ಅಧ್ಯಯನ ಮಾಡಲು ಮದರಸಾ ಮತ್ತು ಇತರೆ ಮುಸ್ಲಿಂ ಸಂಪ್ರದಾಯ ಸಂರಕ್ಷಣೆಗಾಗಿ ಹಾಗೂ ಹಜ್ ಯಾತ್ರೆ ಮುಂತಾದವುಗಳಿಗಾಗಿ ನೆರವು ನೀಡಲು ವಕ್ಫ್ ಬೋರ್ಡ್ ಅಸ್ತಿತ್ವಕ್ಕೆ ತರಲಾಯಿತು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಹಿಂದೂ ಮುಸ್ಲಿಮರ ನಡುವೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಾರದು. ಅವರವರ ಧಾರ್ಮಿಕ ವಿಧಿ ವಿಧಾನಗಳಿಗೆ ಪೂಜಾ ಪ್ರಾರ್ಥನೆಗಳಿಗೆ ಮಸೀದಿ ಮತ್ತು ಮಂದಿರಗಳಿಗೆ ಅನುಕೂಲವಾಗಲೆಂದು ಮುಜರಾಯಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಅಸ್ತಿತ್ವಕ್ಕೆ ತರಲಾಯಿತು.

 ಇವುಗಳ ಹೆಸರಿನಲ್ಲಿರುವ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡರು ಹಿಂದುಗಳು ಹಾಗೂ ಅಲ್ಪಸಂಖ್ಯಾತರಾದ ಮುಸ್ಲಿಮರು ವಕ್ಫ್ ಬೋರ್ಡ್ ಹೆಸರಿನಲ್ಲಿರುವ ಆಸ್ತಿಗಳನ್ನು ಹಿಂದುಗಳು ಅಕ್ರಮಣಶೀಲ ವ್ಯಕ್ತಿತ್ವದಿಂದ ನೂರಾರು ವರ್ಷಗಳ ಹಿಂದೆ ತಮ್ಮ ವಶಕ್ಕೆ ಪಡೆದುಕೊಂಡರು .

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಇದು ಇನ್ನಷ್ಟು ತೀವ್ರತರಗೊಂಡು ಬಹಳಷ್ಟು ಮುಸ್ಲಿಮರ ಆಸ್ತಿ ಪಾಸ್ತಿಗಳು ವಕ್ಫ್ ಬೋರ್ಡ್ ಹೆಸರಿನಲ್ಲಿ ಇರುವುದನ್ನು ಗಮನಿಸಿ ಅದನ್ನು ಬಿಟ್ಟಿ ಎಂದು ಭಾವಿಸಿ ಹಿಂದುಗಳು ತಮ್ಮ ವಶದಲ್ಲಿರಿಸಿಕೊಂಡರು ಇದರಿಂದ ಸಾಕಷ್ಟು ಅಲ್ಪಸಂಖ್ಯಾತರಿಗೆ ತೊಂದರೆಯಾಯಿತು ಆದರೆ ಅನಿವಾರ್ಯ ಕಾರಣದಿಂದ ಅವರು ಅಸಹಾಯಕ ಸ್ಥಿತಿಯಲ್ಲಿ ಉಳಿದರು ಇಂಥ ವಕ್ಫ್ ಬೋರ್ಡ್ ಆಸ್ತಿ ಕಳೆದ ನೂರಾರು ವರ್ಷಗಳಿಂದ ಹಿಂದೂ ಮಠ ಮಂದಿರಗಳು ದೇವಾಲಯಗಳು ಹಾಗೂ ಹಿಂದೂ ಪ್ರಬಲ ವ್ಯಕ್ತಿಗಳು ಕಬಳಿಸಿ ತಮ್ಮ ಆಸ್ತಿಪಾಸ್ತಿಗಳನ್ನಾಗಿ ಮಾಡಿ ಕೊಂಡಿದ್ದಾರೆ .

ಈಗ ಅವುಗಳನ್ನು ವಕ್ಫ್ ಬೋರ್ಡ್ ತನ್ನ ಆಸ್ತಿಯನ್ನು ಬಿಟ್ಟುಕೊಡಲು ಮತ್ತು ಹಿಂದುಗಳ ವರ್ಷದಲ್ಲಿರುವ ಆಸ್ತಿಯನ್ನು ಬಿಡಿಸಿಕೊಳ್ಳಲು ಪ್ರಯತ್ನ ಪಡುತ್ತಿವೆ ಆದರೆ ನೂರಾರು ವರ್ಷಗಳಿಂದ ಕಬ್ಜೆ ಇರುವುದರಿಂದ ಬಿಟ್ಟು ಕೊಡುವವರು ಒಪ್ಪುತ್ತಿಲ್ಲ ಬಿಡಿಸಿಕೊಳ್ಳದಿದ್ದರೆ ವಿಧಿ ಇಲ್ಲ ಎಂಬ ಪರಿಸ್ಥಿತಿ ಹಗ್ಗ ಹರಿಯದು ಕೋಲು ಮುರಿಯದು ಎನ್ನುವಂತಾಗಿದೆ.ಮತ್ತು ಇಲ್ಲಿ ಜಿಸ್ಕಿ ಲಾಟಿ ಊಸ್ಕಿ ಬಹಿಷ್ ಎನ್ನುವಂತಾಗಿದೆ.

 ಇದು ಭಾರತದ ಮೊದಲ ಪ್ರಧಾನಿ ನೆಹರು ಅವರು ಈವಕ್ಫ್ ಬೋರ್ಡ್ ಆಸ್ತಿಯನ್ನು ಯಾರೂ ಕಬಳಿಸುವಂತಿಲ್ಲ ಮತ್ತು ಪ್ರಶ್ನಿಸುವಂತಿಲ್ಲ ಅವರು ಕೇಳಿದರೆ ಬಿಟ್ಟು ಕೊಡಬೇಕೆಂಬ ನಿಯಮವನ್ನು ಶಾಸನ ಬದ್ಧಗೊಳಿಸಿದ್ದಾರೆ ಅದನ್ನು ಕಾನೂನಾ ಗಿಸಿದ್ದಾರೆ ಈಗ ಆ ಆಸ್ತಿಗಳು ಮೂಲ ದಾಖಲೆಗಳು ಸಹಿತ ಹೊರಬಂದಿವೆ. ಈಗ ಅವುಗಳನ್ನ ಮುಸ್ಲಿಮರು ಮರಳಿ ಕೇಳುತ್ತಿದ್ದಾರೆ ಹಿಂದುಗಳು ಅದನ್ನು ಕೊಡಲು ಒಪ್ಪುತ್ತಿಲ್ಲ ಯಾವ ಕಾನೂನುಗಳು ರಕ್ಷಿಸುವುದಿಲ್ಲ ಆದ್ದರಿಂದ ನಮ್ಮ ಆಸ್ತಿಯನ್ನು ನಮಗೆ ಮರಳಿಸಿ ಎಂಬುದು ಮುಸ್ಲಿಮರ ವಾದವಾಗಿದೆ ಇದಕ್ಕೆ ಕಾಂಗ್ರೆಸ್ ಸರ್ಕಾರ ನೇತೃತ್ವ ವಹಿಸಿದೆ ಬಿಜೆಪಿ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ ಜೆಡಿಎಸ್ ಪಕ್ಷ ಮೂಕ ಪ್ರೇಕ್ಷಕವಾಗಿದೆ ಬಹುಷಃ ಇದು ಆಳುವ ಪಕ್ಷಕ್ಕೆ ಮಲಗಿದ ಗಂಡನನ್ನು ಎಬ್ಬಿಸಿದಾಗಿದೆ ಮರಜೇ ನಿಗೆ ಕೈ ಹಾಕಿದಂತಾಗಿದೆ ಮುಂದೇನಾಗುವುದೆಂಬುದನ್ನು ಜೆಡಿಎಸ್ ಪಕ್ಷ ಕಾದು ನೋಡುತ್ತಿವೆ ಇದನ್ನು ರಾಜಕೀಯ ಬೇಳೆ ಬೇಯಿಸಿಕೊಡಲು ರಾಜಕೀಯ ಪಕ್ಷಗಳು ಹವಣಿಸುತ್ತಿವೆ. ಇತ್ತೀಚಿನ ಕರ್ನಾಟಕದ ಉಪಚುನಾವಣೆ ಮೇಲೆ ಈ ವಕ್ಫ್ ಬೋರ್ಡ್ ಆಸ್ತಿ ವಿವಾದ ಸಾಕಷ್ಟು ಕೆಲಸ ಮಾಡಿದೆ ಕಾಂಗ್ರೆಸ್ ಜನಪ್ರಿಯವಾಗಿದೆ ಬಿಜೆಪಿ ತನ್ನ ವರ್ಚಸ್ ಕಳೆದುಕೊಂಡಿದೆ ಅಷ್ಟೇ ಅಲ್ಲ ಹಾವೇರಿಯಲ್ಲಿ ಸಿಗ್ಗಾವಿ ಮತಕ್ಷೇತ್ರದಿಂದ ಬಿಜೆಪಿಯ ಮುಖ್ಯಮಂತ್ರಿಯ ಮಗನನ್ನು ಸೋಲಿಸಿ ಪಠಾಣ್ ಎಂಬ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಮೂಗಿನ ತಪರಾಕಿ ಹಾಕಿದ್ದಾರೆ ಇದು ಸಹಜವಾದ ಘಟನೆ ಏನೂ ಅಲ್ಲ ಉದ್ದೇಶಪೂರ್ವಕವಾಗಿ ನಡೆದ ವ್ಯವಸ್ಥಿತ ಸಂಚಾಗಿದೆ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ ಜಮೀರ್ ಅಹ್ಮದ್ ಖಾನ್ ಜೊತೆ ಶಿಗ್ಗಾವಿ ಶಾಸಕ ಪಠಾಣ್ ಮತ್ತೊಬ್ಬರು ಒಬ್ಬರು ಕೈ ಸೇರಿಸಿ ಇನ್ನಷ್ಟು ಬಲ ಬರುವಂತೆ ಮಾಡಿದ್ದಾರೆ ಹೀಗಾಗಿ ವಕ್ಫ್ ಬೋರ್ಡ್ ಆಸ್ತಿಗಳು ಈಗ ಮತ್ತಷ್ಟು ಕರ್ನಾಟಕದಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುವ ಸಾಧ್ಯತೆಗಳಿವೆ ಇವು ಮುಸ್ಲಿಂ ಕಲ್ಯಾಣಕ್ಕಾಗಿ ಉಪಯೋಗವಾಗುವ ಆಸ್ತಿಗಳಾಗಿವೆ ಹೀಗಾಗಿ ಕರ್ನಾಟಕದಲ್ಲಿ ಒಂದು ಕಡೆ ಮುಜರಾಯಿ ಇಲಾಖೆ ಇನ್ನೊಂದು ಕಡೆ ವಕ್ಫ್ ಬೋರ್ಡ್ ಸಮಾನಾಂತರವಾಗಿ ಕೆಲಸ ಮಾಡುವ ಮೂಲಕ ಆಳುವ ಪಕ್ಷ ಮತ್ತು ವಿರೋಧ ಪಕ್ಷದ ಮೇಲೆ ಸತ್ ಪರಿಣಾಮವೋ ದುಷ್ಪರಿಣಾಮವೋ ಬೀರುವ ಪ್ರಯತ್ನ ನಡೆದಿದೆ ಇದು ಮುಂದಿನ ದಿನಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತಂದು ಕೋಮು ಸೌಹಾರ್ದತೆ ಹಾಳು ಮಾಡಿ ದಂಗೆ ಗಲಭೆ ಎಬ್ಬಿಸಿ ಹಿಂದೂ ಮುಸ್ಲಿಂ ಕೋಮುಗಲಭೆಯಾಗಿ ಗ್ರೂಪುಗೊಂಡು ಮುಂದಿನ ದಿನಗಳಲ್ಲಿ ಹಿಂದೂ ಮುಸ್ಲಿಮರ ನಡುವೆ ಕ್ರಾಂತಿ ಉಂಟಾಗಿ ಶಾಂತಿಗೆ ಭಂಗ ಬಂದು ರಾಜ್ಯ ಹಾಳಾಗಿ ಹೋಗುವುದರಲ್ಲಿ ಸಂದೇಹವಿಲ್ಲ ರಾಜಕೀಯ ಪಕ್ಷಗಳು ರಾಜಕೀಯ ದಾ ಳವಾಗಿ ಈ ವಿಷಯವನ್ನು ಬಳಸಿಕೊಳ್ಳಬಾರದೆಂಬುದು ನಮ್ಮ ಅನಿಸಿಕೆಯಾ ಗಿದೆ ಮುಂದಿನ ಜನಗಳಲ್ಲಿ ಈಶ್ವರ ಅಲ್ಲಾ ತೇರೇ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್ ರಾಮ ರಹೀಮ್ ಏಕ್ ಹೈ ನಾವೆಲ್ಲರೂ ಒಂದೇ ಹಿಂದೂ ಮುಸ್ಲಿಮರು ಒಂದಾಗಿ ಚಂದಾಗಿ ಬಾಳಬೇಕೆಂಬುದು ಎಲ್ಲರ ಸುಂದರ ಕನಸಾಗಬೇಕು ಅಂದಾಗ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸುಂದರವಾಗಿ ಉಳಿಯಲು ಸಾಧ್ಯ ಇಲ್ಲವಾದರೆ ಕರ್ನಾಟಕದಲ್ಲಿ ರಕ್ತಪಾತವಾಗುವುದರಲ್ಲಿ ಸಂದೇಹವಿಲ್ಲ ರಾಜಕಾರಣಿಗಳು ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಮಾತುಗಳನ್ನು ಮಾತನಾಡಬೇಕು ಆ ದಿಶೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಅಧಿಕಾರದ ಕ್ಷಣಿಕ ಆಸೆಗಾಗಿ ಶಾಶ್ವತವಾದಂತ ಅಮೂಲ್ಯವಾದ ಜೀವಗಳನ್ನು ಮೌಲ್ಯಗಳನ್ನು ಬಲಿಕೊಡುವುದು ಬೇಡ ಎಂಬುದು ನಮ್ಮ ಸ್ಪಷ್ಟ ನಿರ್ಧಾರವಾಗಿದೆ

-- ಪ್ರೊ ಶಿವರಾಜ್ ಪಾಟೀಲ್ ಚಿಂತಕರು ಹಾಗೂ ರಾಜಕೀಯ ವಿಶ್ಲೇಷಕರು