ವಿಶ್ವಗುರು ಬಸವಣ್ಣನವರ ಪತ್ನಿ ನೀಲಮ್ಮನವರು ಲಿಂಗೈಕ್ಯವಾದ ದಿನ

ವಿಶ್ವಗುರು ಬಸವಣ್ಣನವರ ಪತ್ನಿ ನೀಲಮ್ಮನವರು ಲಿಂಗೈಕ್ಯವಾದ ದಿನ

(ನೀಲಮ್ಮನವರ  ಸಂದರ್ಭ ಚಿತ್ರ )

ವಿಶ್ವಗುರು ಬಸವಣ್ಣನವರ ಪತ್ನಿ ನೀಲಮ್ಮನವರು ಲಿಂಗೈಕ್ಯವಾದ ದಿನ

ಲೇಖಕರು -ಪೂಜ್ಯ ಪ್ರಭುಶ್ರೀ ತಾಯಿ ಅಕ್ಕಮಹಾದೇವಿ ಆಶ್ರಮ ಕಲಬುರಗಿ 

ದಿನಾಂಕ 10.8. 2024ರಂದು ನೀಲಮ್ಮನವರು ಲಿಂಗೈಕ್ಯವಾದ ದಿನ( ನೀಲಮ್ಮನವರ ಷಷ್ಟಿ ಎಂದು ಕರೆಯುತ್ತೇವೆ). ವಿಶ್ವ ಗುರು ಬಸವಣ್ಣನವರ ಜೊತೆ ಜೊತೆಯಾಗಿದ್ದು ಸಮಾಜಕ್ಕೆ ಕಲ್ಯಾಣವನ್ನು ಬಯಸಿರುವಂತಹ ಮಹಾತಾಯಿ. ಬಸವಣ್ಣನವರ ಪತ್ನಿಯಾಗಿ, ಪತಿಯ ಮಾತನ್ನು ಲಿಂಗಯ್ಯನ ವಾಣಿ ಎಂದು ಪಾಲಿಸಿದಂತವರು. ಅನುಭವ ಮಂಟಪದಲ್ಲಿ ಇರುವಂತಹ ಎಲ್ಲಾ ಶರಣರಿಗೆ ಪ್ರಸಾದವನ್ನು ಕರುಣಿಸಿರುವ ಮಹಾಮನೆಯ ಮಹಾತಾಯಿ, ಅಷ್ಟೇ ಅಲ್ಲ ಎಲ್ಲಾ ಶರಣರಿಗೆ ಶರಣೀಯರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿರುವಂತಹ ಅಕ್ಷರದ ಅವ್ವ ದಾಸೋಹಿ.

        ವಿಶ್ವಗುರು ಬಸವಣ್ಣನವರು ಜಂಗಮ ಪ್ರೇಮಿ ಆದರೆ, ನೀಲಮ್ಮ ತಾಯಿಯವರು ಲಿಂಗಪ್ರೇಮಿ, ಗಂಗಾಂಬಿಕೆ ತಾಯಿಯವರು ಗುರು ಪ್ರೇಮಿಯಾಗಿ, ಸಾಮರಸ್ಯದ ಭಾವೈಕ್ಯತೆಗಾಗಿ ಕಲ್ಯಾಣ ಕ್ರಾಂತಿಯಲ್ಲಿ ತಮ್ಮನ್ನ ತಾವು ಅಳಿದು ಉಳಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ "ಶರಣರ ಮಹಿಮೆಯನ್ನು ಮರಣದಲ್ಲಿ ನೋಡು "ಎನ್ನುವಂತೆ ಈ ಮಾತು ಸುಳ್ಳಲ್ಲ. ಬಸವಣ್ಣನವರು ಕಲ್ಯಾಣ ಬಿಟ್ಟು ಕೂಡಲಸಂಗಮಕ್ಕೆ ಹೊರಟು ಮಹಾಸತಿ ನೀಲಾಂಬಿಕೆಯನ್ನು ಕರೆತರಲು ಆತ್ಮೀಯರಾದ ಬಲಗೈ ಬಂಟ ಅಪ್ಪಣ್ಣ ತಂದೆಯನ್ನು ಕಳಿಸುತ್ತಾರೆ, ನೀಲಮ್ಮ ತಾಯಿಯವರು ಬಸವ ತಂದೆಯ ಜೊತೆಗೆ ಎಂದು ಕಲ್ಯಾಣ ಮಹೋತ್ಸವ ಮಾಡಿಕೊಂಡಿದ್ದರು ಅಂದಿನಿಂದ ಕೊನೆಯವರೆಗೂ ವಿಶ್ವ ಗುರು ಬಸವ ತಂದೆಯ ಮಾತನ್ನು ಪಾಲಿಸಿದಂತವರು, ಪತಿಯ ಆಗ್ನೇಯಂತೆ ಕಲ್ಯಾಣವನ್ನು ತೊರೆದು ಕಪ್ಪಡಿ ಸಂಗಮಕ್ಕೆ ಬಂದು, ತಂಗಡಿಗೆಯನ್ನು ತಲುಪುವಷ್ಟರಲ್ಲಿ ಬಸವಣ್ಣನವರು ಸಂಗಮನಾಥನಲ್ಲಿ ಬಯಲಾದ ರೆಂಬ ಸುದ್ದಿ ತಿಳಿಯುತ್ತದೆ. ನೀಲಾಂಬಿಕೆ ತಾಯಿ ಅಧೀರ ರಾಗದೆ ಅಲ್ಲಿಯೇ ಇಷ್ಟ ಲಿಂಗ ಪೂಜೆಗೆ ಕುಳಿತು ಇಷ್ಟ ಲಿಂಗದಲ್ಲಿ ಐಕ್ಯ ಆಗುತ್ತಾರೆ. ನೀಲಮ್ಮನವರ ಮತ್ತು ಅಂಗರಕ್ಷಕನಾಗಿ ಹಿಂಬಾಲಿಸಿದ ಹಡಪದ ಅಪ್ಪಣ್ಣ ಮಂದಿರಗಳು ಇಂದಿಗೂ ನಾವು ನೋಡುತ್ತೇವೆ. ಆದರೆ, ನೀಲಮ್ಮನವರು ಕರಸ್ಥಲದ ಇಷ್ಟಲಿಂಗದಲ್ಲಿ ಅಡಗುವ ಮುನ್ನ...... 

        ನೋಡು ನೋಡು ನೋಡು ನೋಡು ನೋಡು ಲಿಂಗವೇ ನೋಡು ಬಸವಯ್ಯನವರು ಮಾಡಿದ ದಾಟವ ಹರಳಯ್ಯ ಮದುವಯ್ಯ ನವರಿಗೆ ಎಳೆಹೂಟ ದುರುಳ ಬಿಜ್ಜಳನು ಕಟ್ಟಿದನೆಂದರೆ!

 ಇರಬಾರದಿಲ್ಲಿಗ ಶರಣರಿಗೆ ಅರು ಎಂದ ಅರಸ ಬಸವರಾಜ ಪೇಳ್ದನಂತೆ 

 ನುಡಿಯಲಾಲಿಸು ಬೇಗ ಕೆಡುವುದೇ ಕಲ್ಯಾಣ ಒಡೆಯ ಸಂಗಮನೋಳು ಬೆರೆದನಂತೆ!

ತಡಮಾಡಬೇಡಿರಿ ಮಡದಿಯರಿಗರುಹಿರೆಂದು 

 ಒಡೆಯ ಬಸವರಾಜ ನುಡಿದನಂತೆ!! ಅಲ್ಲಿಗೆ ಎಮ್ಮನ್ನು ಬರಲು ಹೇಳಿದರಂತೆ 

 ಅಲ್ಲಿರ್ಪ್ಪ ಲಿಂಗಯ್ಯನಿಲ್ಲಿಲ್ಲವೇ?

 ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವೇಕೆ 

 ಬಲ್ಲ ಮಹಾತ್ಮರಿಗಿದು ತರವೇ?

 ಅಪ್ಪ ಅಣ್ಣಯ್ಯಗಳು ಕರೆಯಲು ಬಂದಿಹರು 

 ಕಪ್ಪಡಿ ಸಂಗಮನಾಥ ಕೇಳೋ!

 ಪುಷ್ಪಕ್ಕೆ ಪರಿಮಳ ಬೆರೆದಂತೆ ಎನ್ನನಪ್ಪಿದ ಲಿಂಗವೇ ಮಾತನಾಡೋ! ಸಂಗನ ಬಸವನ ನಿರುಪವ ತಾಳುತೆ 

 ಹಿಂಗದೆ ಕರಗತ್ತಿ ನಮಿಸುತಲಿ 

 ಸಂಗನಬಸವಯ್ಯ ನಾತನೇ ಈತನೇನ್ನoಗಯ್ಯಲಿಂಗವೇ ಮಾತನಾಡೋ ಎಂದು ಸುದೀರ್ಘವಾದ, ಭಾವನಾತ್ಮಕವಾದ, ಅಂಗ ಲಿಂಗಸವೆಸಿದ ಶರಣ ಸತಿ ಲಿಂಗಪತಿಯಲ್ಲಿ ಕೂಡಿದ ಲಿಂಗೈಕ್ಯವಿದು.

 ಪದಗಳಿಲ್ಲದ ಸುದೀರ್ಘವಾದ ಪಯಣವಿದು, ವಚನವೇ ಸಾಕ್ಷಿಯಂತೆ, ಲಿಂಗಯ್ಯನಲ್ಲಿ ಕೂಡಿದ ಪಯಣವಿದು.

   ಬಸವಣ್ಣನಂತ ಭಕ್ತರಿಲ್ಲ, ನೀಲಮ್ಮನಂಥ ಶರಣೆ ಇಲ್ಲ, ಹೇಮರೆಡ್ಡಿ ಮಲ್ಲಮ್ಮನಂಥ ಸೊಸೆ ಇಲ್ಲ ಕೇಳಿರಯ್ಯ ಎಂದು ಜಾನಪದ ಕಾರರು ಹಾಡುತ್ತಾರೆ. ಇಂಥ ಶಿವಶರಣೆಯರು ಹುಟ್ಟಿದ್ದು, ಸಾಧನೆಗೈದು, ಬಯಲಲ್ಲಿ ಬಯಲಾದ ಕೂಟವಿದು. ಲಿಂಗಯ್ಯನ ಒಡನಾಟವಿದು, ಅರಿತು ಮರೆತವರಿಗೆ ನೋಟವಿದು, ತೀಕ್ಷ್ಣ ಮತಿಗಳಿಗೆ ಸಾಧನೆ ಇದು. ಲಿಂಗಯ್ಯನಲ್ಲಿ ಹುಟ್ಟಿ ಲಿಂಗಯ್ಯನಲ್ಲಿ ಬಯಲಾಗುವ ನಮ್ಮ ಶರಣರ ಸಾಧನೆ ಇದು. ಅದಕ್ಕೆ ಇಂದು ನೀಲಮ್ಮನವರ ಷಷ್ಟಿ ಎಂದು ಕರೆಯುತ್ತಾರೆ. ಸರ್ವರಿಗೂ ಶರಣು ಶರಣಾರ್ಥಿ